04 June 2013
30 May 2013
ವಚನ ಸಾಹಿತ್ಯದ ಕುರಿತ ಸಂಶೋಧನೆಯೊಂದಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪ
* ಶಿವಕುಮಾರ ಪಿ.ವಿ., ಸಿ.ಎಸ್.ಎಲ್.ಸಿ
ವಚನ ಸಾಹಿತ್ಯದ ಕುರಿತ ಸಂಶೋಧನಾ ಲೇಖನದ ವಾದದ ಕುರಿತು ಚರ್ಚಿಸಬೇಕಾದುದೇನು? ಮತ್ತು ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪವೇನು? ಒಂದೆಡೆ, ಇವೆರೆಡರ ನಡುವೆ ದೊಡ್ಡ ಕಂದರವಿದೆ. ಮತ್ತೊಂದೆಡೆ, ಅವು ತೀರ ಹತ್ತಿರವಾಗಿಯೂ ಇವೆ. ಈ ವಿಚಾರವು ವಿದ್ವಾಂಸರ ಪ್ರತಿಕ್ರಿಯೆಗಳಲ್ಲಿ ತಾನಾಗಿಯೇ ಸ್ಪಷ್ಟವಾಗುತ್ತದೆ. ಈ ಮೂಲಕ ಒಟ್ಟಾರೆ ಚರ್ಚೆಯ ಸ್ವರೂಪವನ್ನು ಗುರುತಿಸುವ ಪ್ರಯತ್ನ ಈ ಲೇಖನದ್ದಾಗಿದೆ.
‘ಜಾತಿವ್ಯವಸ್ಥೆ’ಯೆಂಬ ಪೂರ್ವನಂಬಿಕೆ ಇಟ್ಟುಕೊಂಡು ವಚನಸಾಹಿತ್ಯವನ್ನು ನೋಡಿದಾಗ ಅವು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿಯಂತೆ ಕಾಣುತ್ತವೆ. ಆ ಪೂರ್ವನಂಬಿಕೆಯ ಚೌಕಟ್ಟಿನಿಂದ ಹೊರತಾಗಿ ವಚನ ಸಾಹಿತ್ಯವನ್ನು ಅಧ್ಯಯನ ನಡೆಸಿದರೆ ಅದು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿ ಎಂದು ಸೈದ್ಧಾಂತಿಕವಾಗಿ ನಿದರ್ಶಿಸಲು ಸಾಧ್ಯವಿಲ್ಲ. ಹಾಗೂ ಈವರೆಗೂ ವಚನ ಸಾಹಿತ್ಯವನ್ನು ಆ ಒಂದು ಪೂರ್ವನಂಬಿಕೆಯಿಂದಲೇ ವಿಶ್ಲೇಷಿಸಲಾಗಿದೆ. ಇದು ಡಂಕಿನ್‍ರವರ ಸಂಶೋಧನಾ ಲೇಖನದ ಮುಖ್ಯ ವಾದ. ಇದನ್ನು ಮತ್ತೊಮ್ಮೆ ಸಂಕ್ಷಿಪ್ತವಾಗಿಡುವ ಅನಿವಾರ್ಯತೆಯನ್ನು ಪ್ರಸ್ತುತ ವಾದಕ್ಕೆ ಶಿವಪ್ರಕಾಶರವರ ಪ್ರತಿಕ್ರಿಯೆ ಹಾಗೂ ಅದನ್ನೇ ಆಧರಿಸಿ ಬಂದಂತಹ ಉಳಿದ ಪ್ರತಿಕ್ರಿಯೆಗಳು ಉಂಟುಮಾಡಿವೆ.
ಈ ಮೇಲಿನ ವಾದಕ್ಕೆ ‘ಸಂಬಂಧಿಸಿ’ದಂತೆ ಬರುತ್ತಿರುವ ಬೌದ್ಧಿಕ ವಲಯದ ಟೀಕೆ ಅಥವಾ ‘ಪ್ರತಿಕ್ರಿಯೆ’ಗಳು ಹಾಗು ಅವುಗಳ ಮಿತಿಗಳನ್ನು ಈ ಮುಂದಿನಂತೆ ನೋಡಬಹುದು.
Posted in ವಚನ ಸಂವಾದ
26 May 2013
ಜಾತಿವ್ಯವಸ್ಥೆ ಇಲ್ಲ ಎಂದರೆ…
* ಡಾ. ಷಣ್ಮುಖ ಮತ್ತು ಡಾ. ಪ್ರವೀಣ
ಜಾತಿಗಳಿವೆ ಜಾತಿವ್ಯವಸ್ಥೆ ಇಲ್ಲ ಎಂದರೆ ಏನು? ಹಾಗಾದರೆ ಈ ಮೇಲು-ಕೀಳು, ತಾರತಮ್ಯ, ಶೋಷಣೆಗಳು ಇಲ್ಲ ಅಂತ ಹೇಳ್ತಾ ಇದೀರಾ? ಪದೇ ಪದೇ ನಮಗೆ ಇದುವರೆಗೂ ಎದುರಾಗಿರುವ (ಅಂತರ್ಜಾಲದ ಚರ್ಚೆಗಳಲ್ಲಿರಬಹುದು, ಸೆಮಿನಾರ್, ಕಾರ್ಯಾಗಾರಗಳಲ್ಲಿರಬಹುದು) ಕೆಲವೇ ಒಳ್ಳೆಯ ಪ್ರಶ್ನೆಗಳಲ್ಲಿ ಇವೂ ಕೂಡ. ಅವುಗಳ ಸುತ್ತ ಈ ಬರಹ ಚರ್ಚಿಸುವ ಪ್ರಯತ್ನ ಮಾಡುತ್ತದೆ.
ಜಾತಿಗಳಿಲ್ಲ ಎಂದು ವಾದಿಸುತ್ತಿರುವ ಮೂರ್ಖರ ಗುಂಪೊಂದು ಇದೆ ಎಂದು ಹೇಳುತ್ತಾ ಬಂದಿರುವುದನ್ನು ನೀವು ಕೇಳಿರುವ ಸಾಧ್ಯತೆ ಇದೆ. ಆಗ ನಿಮಗೂ ಅನಿಸಿರಬಹುದು -ಇವರೆಂಥ ಮೂರ್ಖರಯ್ಯ.! ಕಣ್ಮುಂದೆ ಕಾಣುವ ಸಂಗತಿಗಳನ್ನು ನಿರಾಕರಿಸುತ್ತಿರುವರಲ್ಲ! ಇದೆಂಥಾ ಸಂಶೋಧನೆ, ಇದರ ಹಿಂದೆ ಯಾವುದೋ ಹುನ್ನಾರ/ ಕುಯುಕ್ತಿ ಇದ್ದಿರಬಹುದು! ಅಂತಹ ಯಾವುದೇ ಪ್ರಮೇಯಗಳನ್ನು, ಹೇಳಿಕೆಗಳನ್ನು ಮಾಡಿರುವ ಒಂದೇ ಒಂದು ಉದಾಹರಣೆ ಕೂಡ ನಮ್ಮ ಗುಂಪಿನ ಬರಹಗಳಿಂದ ತೆಗೆದು ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೂ ಈ ರೀತಿಯ ಆರೋಪಗಳು ಎಲ್ಲಿಂದ ಹೊರಟಿತು? ಹಾಗಾದರೆ ಜಾತಿಗಳ ಕುರಿತು ನಮ್ಮ ವಾದವೇನು? ಎಂಬ ಪ್ರಶ್ನೆಗಳು ಏಳುವುದು ಸಹಜ.
Posted in ವಚನ ಸಂವಾದ
24 May 2013
ವಚನಗಳಲ್ಲಿ ಆಧ್ಯಾತ್ಮಿಕತೆ ಮತ್ತು ಸಾಮಾಜಿಕತೆ- 2
* ಎಚ್.ಎಸ್ ಶಿವಪ್ರಕಾಶ್
ಬಾಲಗಂಗಾಧರ ಅವರ ಚರ್ಚಿತ ಲೇಖನದಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ: ವಚನಗಳನ್ನು ಜಾತಿ ವಿರೋಧಿ ಹೇಳಿಕೆಗಳಾಗಿ ನೋಡದೆ ಆಧ್ಯಾತ್ಮಿಕ ಸಾಹಿತ್ಯವೆಂದು ನೋಡಿದಾಗ ನಮ್ಮ ಗೊಂದಲಗಳು ಕೊನೆಯಾಗುತ್ತವೆ.ಆಧ್ಯಾತ್ಮಿಕತೆಯ ಕುರಿತು ತಮ್ಮ ಗ್ರಹಿಕೆಗಳನ್ನೂ ಅವರು ಸಂಕ್ಷಿಪ್ತವಾಗಿದ್ದರೂ ಸ್ಪಷ್ಟವಾಗಿ ಅದೇ ಬರಹದಲ್ಲಿ ಮಂಡಿಸಿದ್ದಾರೆ.
ವಚನಗಳು ಆಧ್ಯಾತ್ಮಿಕ ಸಾಧನೆಯ ಹಲಮಜಲುಗಳನ್ನು ಅಭಿವ್ಯಕ್ತಿಸುವುದರಿಂದ ಅವುಗಳ ಆಧ್ಯಾತ್ಮಿಕತೆಯ ಬಗ್ಗೆ ಎರಡನೆಯ ಮಾತಿಲ್ಲ. ವಚನಗಳ ಮನೋವೈಜ್ಞಾನಿಕ, ಸಾಮಾಜಿಕ, ರಾಜಕೀಯ ಅರ್ಥಗಳನ್ನು ಅರಸುವ ಆತುರದಲ್ಲಿ ಅವುಗಳ ಮೂಲಭೂತ ಆಧ್ಯಾತ್ಮಿಕ ಒತ್ತನ್ನು ನಾವು ಮರೆತಿರುವುದು ನಿಜ. ಆದರೆ ವಚನಕಾರರು ಆಚರಿಸಲಿಚ್ಛಿಸಿದ ಆಧ್ಯಾತ್ಮಿಕತೆ ಯಾವುದು?
ಆಧ್ಯಾತ್ಮಿಕತೆಗೆ ಸಮಾನಾರ್ಥ ಪದಗಳಾದ ಪರಮಾರ್ಥ, ಆತ್ಮವಿದ್ಯೆ, ಬ್ರಹ್ಮವಿದ್ಯೆ ಎಂಬ ಪದಗಳಿಗೆ ಬದಲಾಗಿ ವಚನಕಾರರು `ಅನುಭಾವ' ಎನ್ನುವ ಪದವನ್ನು ಬಳಸಿದರು. ಇದೇ ಶಬ್ದ ಸಂಸ್ಕೃತದಲ್ಲಿ ರಸಾನುಭವದ ವಿವರಣೆಯ ಸಂದರ್ಭದಲ್ಲಿ ಬಳಕೆಯಾಗಿದೆ ನಾಟ್ಯಶಾಸ್ತ್ರದಲ್ಲಿ. ಆದರೆ ವಚನಕಾರರು ತಮ್ಮ ವಿಶಿಷ್ಟ ಆಧ್ಯಾತ್ಮಿಕ ಅನುಭೂತಿಯನ್ನು ಸೂಚಿಸಲು ಅನುಭಾವವೆಂಬ ವಿಶಿಷ್ಟಪದವನ್ನು ಬಳಸಿದ್ದಾರೆ.
Posted in ವಚನ ಸಂವಾದ
17 May 2013
ನಮ್ಮ ಸಂಶೋಧನೆಗೆ ಕುಯುಕ್ತಿಯನ್ನು ಆರೋಪಿಸುವುದು ಯುಕ್ತವೆ?
* ಪ್ರೊ.ರಾಜಾರಾಮ ಹೆಗಡೆ
(ದೇವನೂರು ಮಹಾದೇವ ಅವರ ಲೇಖನ ಇಲ್ಲಿ ಓದಿ)
ಸನ್ಮಾನ್ಯ ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಹಾಗೂ ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ, ಅವರನ್ನು ಕಾಡಿದ ಹೇಗೆ ಹೇಳಲಿ ಎಂಬ ಪ್ರಶ್ನೆಯು ಈಗ ನನ್ನದೇ ಆಗಿದೆ. ದೇವನೂರರ ಕಥನದ ಭಾಷೆ ನನಗೆ ತುಂಬಾ ಇಷ್ಟ. ಆದರೆ ಇಲ್ಲಿ ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದೂ ಸ್ಪಷ್ಟ. ಅವರಿಗೆ ನಮ್ಮ ಮೇಲೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ.
Posted in ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
ಸಾಮಾಜಿಕ ಸಂಶೋಧನೆ ಯಾಕಾಗಿ?
* ಪ್ರೊ.ಜೆ.ಎಸ್.ಸದಾನಂದ
(ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ)
(ಪ್ರೊ.ರಾಜಾರಾಮ ಹೆಗಡೆ ದೇವನೂರು ಮಹಾದೇವ ಅವರ ಲೇಖನಕ್ಕೆ ಬರೆದಿರುವ ಪ್ರತಿಕ್ರಿಯೆ ಓದಿ)
ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ.
Posted in ದೇವನೂರು ಮಹಾದೇವ, ಪ್ರೊ.ಜೆ.ಎಸ್.ಸದಾನಂದ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
ಹೇಗೆ ಹೇಳಲಿ? ಏನು ಹೇಳಲಿ?
* ಪ್ರೊ.ರಾಜಾರಾಮ ಹೆಗಡೆ
(ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ)
(ಪ್ರೊ.ಜೆ.ಎಸ್.ಸದಾನಂದ ಅವರು ದೇವನೂರು ಲೇಖನಕ್ಕೆ ಪ್ರತಿಕ್ರಿಯಿಸಿದ್ದಾರೆ)
ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ ಅವರನ್ನು ಕಾಡಿದ ಆ “ಹೇಗೆ ಹೇಳಲಿ? ಏನು ಹೇಳಲಿ?” ಎಂಬ ಪ್ರಶ್ನೆ ಈಗ ಅವರದಕ್ಕಿಂತ ನನ್ನದೇ ಆಗಿದೆ. ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟ. ಅವರಿಗೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.
ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ.
Posted in ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
ವಚನ ಸಾಹಿತ್ಯ ಹಾಗೂ ಜಾತಿ ವ್ಯವಸ್ಥೆ: ರಾಜೇಂದ್ರ ಚೆನ್ನಿಯವರಿಗೊಂದು ಪ್ರತಿಕ್ರಿಯೆ
ಇದು ರಾಜೇಂದ್ರ ಚೆನ್ನಿಯವರು ಲಡಾಯಿ ಬ್ಲಾಗ್‌ನಲ್ಲಿ ಬರೆದ ಲೇಖನಕ್ಕೆ (ರಾಜೇಂದ್ರ ಚೆನ್ನಿಯವರ ಲೇಖನ ಓದಲು ಕ್ಲಿಕ್ ಮಾಡಿ) ನನ್ನ ಪ್ರತಿಕ್ರಿಯೆ. ಅವರ ಲೇಖನ ಸಾಕಷ್ಟು ಉದ್ದವಿದ್ದರೂ ಅದರಲ್ಲಿ ಉತ್ತರ ಕೊಡಲು ಯೋಗ್ಯವಾದ ವಿಚಾರಗಳಿರುವುದು ಎರಡು ಅಥವಾ ಮೂರು ಮಾತ್ರ. ಉಳಿದದ್ದೆಲ್ಲಾ ವೈಯುಕ್ತಿಕ ನಿಂದನೆಗಳು, ಆಧಾರ ರಹಿತ ಆಪಾದನೆಗಳು, ಮತ್ತು ಬಾಲಿಶ ಹಾಸ್ಯಗಳು. ಅವುಗಳಿಗೆ ಉತ್ತರ ಕೊಡುವುದು ಘನತೆಯ ವಿಚಾರವಲ್ಲ.
೧.ಮೇಲುಚಲನೆಯ ಕುರಿತು: ಡಾ.ಷಣ್ಮುಖರವರು ಹೇಳುವ ನನ್ನ “ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ” ಎಂಬುದನ್ನು ಅಲ್ಲಗಳೆಯುತ್ತಾ ಚೆನ್ನಿಯವರು ನಾನು ನನ್ನ ಪ್ರಬಂಧದಲ್ಲಿ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳನ್ನು ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಒಪ್ಪಿಕೊಂಡಿತು ಎಂದು ವಾದಿಸುತ್ತೇನೆ ಎಂದು ಹೇಳುತ್ತಾರೆ.
ಈ ಕುರಿತು ಈಗಾಗಲೇ ಬಹಳಷ್ಟು ತಪ್ಪು ಅಭಿಪ್ರಾಯಗಳು ಚಲಾವಣೆಗೆ ಬಂದಿರುವುದರಿಂದ, ನನ್ನ ವಾದ ಏನು ಎಂಬುದನ್ನು ಮತ್ತೊಮ್ಮೆ ವಿಶದ ಪಡಿಸುತ್ತೇನೆ.
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
16 May 2013
ಇಲ್ಲಿ ನೈತಿಕತೆಯೇ ಗೈರುಹಾಜರಾಗಿದೆ
* ರಾಜೇಂದ್ರ ಚೆನ್ನಿ
`ಜಗತ್ತಿನ ಬೌದ್ಧಿಕ ವಲಯದಲ್ಲಿಯೇ ಒಂದು ಮೂಲಭೂತವಾದ ಪಲ್ಲಟವನ್ನು ಮತ್ತು ಭಾರತೀಯ ಸಾಮಾಜಿಕ ವಿಜ್ಞಾನಗಳ ಮೂಲಸ್ವರೂಪವನ್ನೇ ಪುನರ್‌ರಚಿಸುವ ಸೈದ್ಧಾಂತಿಕ, ತಾತ್ವಿಕ ಪಲ್ಲಟಗಳು ಈ ವಾದಗಳಿಂದ ಆಗಿವೆ, ಆಗಬೇಕು' ಎಂದು ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಒಂದು ಗುಂಪು ಪ್ರತಿಪಾದಿಸುತ್ತಾ ಬಂದಿದೆ. ಅಲ್ಲದೇ `ಇದನ್ನು ಅರ್ಥಮಾಡಿಕೊಳ್ಳಲಾಗದ `ಕನ್ನಡ ಬುದ್ಧಿಜೀವಿಗಳು' ತಿರಸ್ಕಾರಕ್ಕೆ ಯೋಗ್ಯರೆಂದು' ವಾದಿಸುತ್ತಾ ಬಂದಿದೆ.
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ರಾಜೇಂದ್ರ ಚೆನ್ನಿ, ವಚನ ಸಂವಾದ
15 May 2013
ಸಂಶೋಧನೆಯ ರೂಪುರೇಷೆಗಳನ್ನರಿಯದ ವಿಮರ್ಶಕರು
* ಡಂಕಿನ್ ಝಳಕಿ
ಇಂದಿನ (04/05/2013) ಪ್ರಜಾವಾಣಿಯಲ್ಲಿ ಜಿ.ಬಿ. ಹರೀಶರು ಬರೆದ ಲೇಖನ ಮತ್ತು ಇದುವರೆಗೂ ಬಂದಿರುವ ಇನ್ನಿತರ ಪ್ರತಿಕ್ರಿಯೆಗಳಲ್ಲಿ ಸಂಶೋಧನೆ ಎಂದರೇನು ಎಂಬ ವಿಚಾರದ ಕುರಿತು ಬಹಳಷ್ಟು ಗೊಂದಲವನ್ನು ನಾವು ಕಾಣಬಹುದು. ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯಲ್ಲಿ ನಾವು ಪದೇಪದೇ ಕಾಣುವ ಹಲವು ಸಣ್ಣ ದೊಡ್ಡ ತಪ್ಪುಗಳು ಈ ಪ್ರತಿಕ್ರಿಯೆಗಳ ತುಂಬಾ ಕಾಣಿಸುತ್ತವೆ. ಅಂತಹ ಕೆಲವು ಸಮಸ್ಯೆಗಳನ್ನು ಕುರಿತು ಚರ್ಚಿಸುವುದೇ ಈ ಪುಟ್ಟ ಲೇಖನದ ಉದ್ದೇಶ.
(೧) ಸಂಶೋಧನೆಗಳು ಮತ್ತು ಉಲ್ಲೇಖಗಳು: ನಾನು ನನ್ನ ಲೇಖನ ಮತ್ತು ಪ್ರಬಂಧಗಳಲ್ಲಿ ಯಾರನ್ನು ಮತ್ತು ಎಷ್ಟು ಮಂದಿಯನ್ನು ಉಲ್ಲೇಖಿಸುತ್ತೇನೆ ಮತ್ತು ಉಲ್ಲೇಖಿಸುವುದಿಲ್ಲ ಎಂಬ ವಿಚಾರವನ್ನು ಕುರಿತು ಮಾತನಾಡುತ್ತಾ ಹರೀಶರು ಹೀಗೆ ಹೇಳುತ್ತಾರೆ “ವಚನ ಸಾಹಿತ್ಯದ ಬಗ್ಗೆ ಅಪಾರ ಒಳನೋಟವಿರುವ ಬರಹಗಳನ್ನು ಬರೆದಿರುವ ಜ.ಚ.ನಿ. ಸಿದ್ದೇಶ್ವರಸ್ವಾಮಿಗಳಾಗಲಿ, ಕಪಟರಾಳ ಕೃಷ್ಣರಾವ್, ಎಂ.ಆರ್. ಶ್ರಿನಿವಾಸಮೂರ್ತಿಯವರಾಗಲಿ, ಈ ಬರಹದುದ್ದಕ್ಕೂ ಎಲ್ಲೂ ಕಾಣಿಸುವುದಿಲ್ಲ. ಕಿ.ರಂ. ನಾಗರಾಜರೂ ಇಲ್ಲಿ ಗೈರುಹಾಜರಿ.”
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ರಾಜೇಂದ್ರ ಚೆನ್ನಿ, ವಚನ ಸಂವಾದ
14 May 2013
ಸಾಮಾಜಿಕ ಸಂಶೋಧನೆ ಯಾಕಾಗಿ?
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ರಾಜೇಂದ್ರ ಚೆನ್ನಿ, ವಚನ ಸಂವಾದ
10 May 2013
ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ
* ಡಾ. ಸಂತೋಷ್ ಕುಮಾರ್ ಪಿ.ಕೆ, ಶಿವಮೊಗ್ಗ.
ಇದು ಕಲಬುರ್ಗಿಯವರ ಲೇಖನಕ್ಕೆ ಪ್ರತಿಕ್ರಿಯೆ
ವಚನಗಳ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಒಂದು ರೀತಿಯ ಕಂದರವಿದೆ. ಒಂದೆಡೆ ಸಂಶೋಧನೆ ವಾಸ್ತವದ ಕುರಿತು ವಾದಿಸುತ್ತಿದ್ದರೆ ಮತ್ತೊಂದೆಡೆ ಐಡಿಯಾಲಜಿಗಳು ಕಟ್ಟುಕತೆಯನ್ನೇ ಮರುಪ್ರಸಾರ ಮಾಡುತ್ತಿವೆ. ಇಲ್ಲಿ ಕಂದರವಿರುವುದು ಸಂಶೋಧನೆ ಮತ್ತು ಐಡಿಯಾಲಜಿಯ ನಡುವೆ. ಸಂಶೋಧನೆ ನಡೆಸಿ ಸುಮಾರು ೨೨೦೦೦ ವಚನಗಳನ್ನು ಪರಿಶೀಲನೆಗೆ ಒಡ್ಡಿ, ಡಂಕಿನ್ ಮತ್ತು ಬಾಲುರವರು ಒಂದು ಹೊಸ ಹೈಪೋಥೀಸಿಸ್ ನ್ನು ನೀಡುತ್ತಿದ್ದಾರೆ. ಆದರೆ ಅದು ಸಂಶೋಧನಾ ಹೈಪೋಥೀಸಿಸ್ ಎಂಬುದು ಚರ್ಚೆಯಲ್ಲಿ ಭಾಗವಹಿಸುತ್ತಿರುವ ಪೂರ್ವಪಕ್ಷದವರಿಗೆ ಅರ್ಥವಾಗದೆ ಇರುವುದು ಖೇದದ ಸಂಗತಿ.
ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ ಎಂದು ಯಾರಾದರೂ ವಾದಿಸಿದರೆ, ಅದಕ್ಕೆ ಪೂರ್ವಪಕ್ಷದವರು ಅದು ಹೇಗೆ ಜಾತಿವ್ಯವಸ್ಥೆಯ ವಿರುದ್ಧವೇ ನಡೆದಿದೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ.
Posted in ಡಾ. ಸಂತೋಷ್ ಕುಮಾರ್, ದೇವನೂರು ಮಹಾದೇವ, ರಾಜೇಂದ್ರ ಚೆನ್ನಿ, ವಚನ ಸಂವಾದ
ವಚನಗಳ ಸಾಮಾಜಿಕತೆ ಮತ್ತು ಆಧ್ಯಾತ್ಮಿಕತೆ-1
* ಎಚ್.ಎಸ್ ಶಿವಪ್ರಕಾಶ್
(ವಚನಗಳಲ್ಲಿ ಆಧ್ಯಾತ್ಮಿಕತೆ ಮತ್ತು ಸಾಮಾಜಿಕತೆ- 2)
( ಶಿವಪ್ರಕಾಶರ ಮೊದಲ ಲೇಖನ: ವಚನ ಸಾಹಿತ್ಯ ಮತ್ತು ಜಾತಿ ವಿರೋಧ)
ಡಂಕಿನ್ ಜಳಕಿಯವರ ವಚನಗಳ ಕುರಿತ ಮಹಾಪ್ರಬಂಧವನ್ನು ಕುರಿತು ನಾನು ಈ ಅಂಕಣದ ಮಿತಿಯಲ್ಲಿ ಬರೆದ ಪ್ರತಿಕ್ರಿಯೆ ಸುಮಾರು ಒಂದು ತಿಂಗಳ ಕಾಲ `ಪ್ರಜಾವಾಣಿ'ಯಲ್ಲಿ ಹಲವು ನಿಟ್ಟನಿಂದಚರ್ಚಿತವಾಯಿತು. ಈ ಚರ್ಚೆ `ಪ್ರಜಾವಾಣಿ'ಯ ಪುಟಗಳನ್ನೂ ಮೀರಿ `ಫೇಸ್‌ಬುಕ್'ನಂಥ ಅಂತರ್ಜಾಲದ ವಲಯಗಳಲ್ಲಿ, ಸಾಹಿತ್ಯಕ ಪತ್ರಿಕೆಗಳಲ್ಲಿ ಕೂಡ ಚರ್ಚಿತವಾದದ್ದು ಚರ್ಚಿತ ವಿಚಾರಗಳ ಮಹತ್ವದ ಕುರುಹು.ಜಳಕಿ ವಿರೋಧಿಗಳಲ್ಲಿ ಕೆಲವು ಮಂದಿ ಗಣ್ಯರು ನನ್ನ ಮೇಲೂ ಹರಿಹಾಯ್ದದ್ದೂ ಆಯಿತು. ಶಿವಮೊಗ್ಗೆಯ ಕೆಲವು ಸಂಶಯಾಸ್ಪದ ಮಿತ್ರರು ನಾನು ಬಾಲಗಂಗಾಧರ ಅವರಿಂದ ಯಾವುದೋ ಅನುಕೂಲ ಪಡೆಯುವ ಉದ್ದೇಶದಿಂದ ಅವರ ಶಿಷ್ಯರೊಬ್ಬರ ವಿಚಾರಗಳಿಗೆ ಪ್ರಚಾರ ಕೊಟ್ಟೆನೆಂದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೂರಿದರು. ನನ್ನನ್ನು ಬಲ್ಲವರಿಗೆ ಅಂಥ ಲಾಭ ಪಡೆಯುವ ಉದ್ದೇಶ ನನಗಿಲ್ಲವೆಂದು ಸಮರ್ಥನೆ ನೀಡುವ ಅಗತ್ಯವಿಲ್ಲ. ಒಲ್ಲದವರಿಗೆ ನೀಡಿಯೂ ಪ್ರಯೋಜನವಿಲ್ಲ.
Posted in ಎಚ್.ಎಸ್ ಶಿವಪ್ರಕಾಶ್, ದೇವನೂರು ಮಹಾದೇವ, ರಾಜೇಂದ್ರ ಚೆನ್ನಿ, ವಚನ ಸಂವಾದ
08 May 2013
ಸಿದ್ಧಾಂತ ಮತ್ತು ಐಡಿಯಾಲಜಿ ಒಂದೇ ಅಲ್ಲ – “ಗೆಳೆಯ ಫಣಿರಾಜ್ ರವರ ಪತ್ರಕ್ಕೆ ಒಂದು ಪ್ರತಿಕ್ರಿಯೆ”
* ಪ್ರೊ.ಜೆ.ಎಸ್.ಸದಾನಂದ
(ಫಣಿರಾಜ್ ಅವರ ಪತ್ರವನ್ನು ಇಲ್ಲಿ ಓದಿ)
ನಿಮ್ಮ ಪತ್ರ ಓದಿದ ನಂತರ ಒಂದು ತರದ ಹಿತಕರ ಅನುಭವವಾಯಿತು. ಹಿತಕರ ಏಕೆಂದರೆ ಇದೂವರೆಗೂ ನಮ್ಮ ಬಗ್ಗೆ ಪ್ರತಿಕ್ರಿಯಿಸಿದ ಬಹಳಷ್ಟು ಮಂದಿಗೆ ನಮ್ಮ ಸಂಶೋಧನೆಯ ಹಿಂದಿರುವ ಕುತಂತ್ರ, ಹುನ್ನಾರ ಹಾಗೂ ಆಮಿಷಕ್ಕೆ ಒಳಗಾಗುತ್ತಿರುವುದಷ್ಟೇ ಕಾಣಿಸುತ್ತಿತ್ತು. ಅದಕ್ಕೆ ವ್ಯತಿರಿಕ್ತವಾಗಿ ನೀವು ನಮ್ಮ ಸಂಶೋಧನೆಯ ಬಗ್ಗೆ ನಿಮಗಿರುವ ಕೆಲವು ಸಂದೇಹಗಳ ಕುರಿತು ತುಂಬಾ (ಸಾಮಾಜಿಕ ಹೋರಾಟದಲ್ಲಿ ಬಹಳ ಕಾಲದಿಂದಲೂ ತೊಡಗಿಸಿಕೊಂಡ ಬದ್ಧತೆಯಿಂದ ಹುಟ್ಟಿದ) ಕಾಳಜಿಯಿಂದ ಚರ್ಚೆ ಮಾಡಲು ಹೊರಟಿದ್ದೀರಿ. ನಮ್ಮ ಉದ್ದೇಶವೂ ಸಹ ನಮ್ಮ ಕೇಂದ್ರದಲ್ಲಿ ಕ್ಯೆಗೊಳ್ಳುತ್ತಿರುವ ಸಂಶೋಧನೆಗಳು ಸಾರ್ವಜನಿಕ ವಿಮರ್ಶೆಗೊಳಪಡಬೇಕು ಮತ್ತು ಅದರ ಪರಿಣಾಮದಿಂದ ನಮಗೂ, ಈ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿರುವ, ಚಿಂತಿಸುತ್ತಿರುವ ಇತರರಿಗೂ ಪ್ರಚಲಿತ ಚಿಂತನೆಯಲ್ಲಿರುವ (ನಮ್ಮದನ್ನೂ ಒಳಗೊಂಡು) ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗಬೇಕು ಎನ್ನುವುದೇ ಆಗಿದೆ.Posted in ಪ್ರೊ.ಜೆ.ಎಸ್.ಸದಾನಂದ, ವಚನ ಸಂವಾದ
07 May 2013
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ಸಂಶೋಧನೆಗೆ ಭವಿಷ್ಯವಿದೆಯೆ?
* ಪ್ರೊ. ರಾಜಾರಾಮ ಹೆಗಡೆ ಮತ್ತು ಡಾ. ಷಣ್ಮುಖ. ಎ
ಇತ್ತೀಚೆಗೆ ಜಾಲತಾಣದಲ್ಲಿ ಸುತ್ತಾಡುತ್ತಿದ್ದ ಒಂದು ಪುಸ್ತಕ ವಿಮರ್ಶೆಯ ಪ್ರಾರಂಭಿಕ ಸಾಲುಗಳು ನಮ್ಮನ್ನು ಬೆಚ್ಚಿಬೀಳಿಸಿದವು. ಅವು ಹೀಗಿವೆ:
“ಈ ಕೃತಿಯು ನನ್ನಲ್ಲಿ ಹುಟ್ಟಿಸಿದ ವೈಚಾರಿಕ ಕುತೂಹಲವನ್ನು ಹೀಗೆ ವಿವರಿಸಬಹುದು. ಮನುಷ್ಯರು ಓದು, ಬುದ್ಧಿಶಕ್ತಿ, ತರ್ಕ ಹಾಗೂ ಭಾಷೆಯನ್ನು ಮಾನವ ದ್ವೇಷಿಯಾದ ಬೌದ್ಧಿಕ ಕೆಲಸಗಳಿಗೆ ಏಕೆ ಬಳಸುತ್ತಾರೆ? ಪಾಂಡಿತ್ಯವೆಂದು ಕರೆಯಲಾಗುವ ಸಂಗತಿಯು ಒಂದು ವಲಯದಲ್ಲಿ ಅಂತಃಕರಣ, ಪ್ರೀತಿ, ಇತರರ ಬಗ್ಗೆ ಸದ್ಭಾವನೆ ಮುಂತಾದ ಭಾವನೆಗಳಿಂದ ಸಂಪೂರ್ಣ ಪರಕೀಯವಾಗಿ, ಕ್ರೂರವಾದ ಅಭಿಪ್ರಾಯಗಳನ್ನು ಸಮರ್ಥಿಸುವ `ತರ್ಕದ ಟಗರ ಹೋರಟೆ’ ಯಾಕೆ ಆಗುತ್ತದೆ? ಬಹು ಸಂಖ್ಯಾತ ಜನರಿಗೆ ಮನುಷ್ಯರಾಗಿ ಬದುಕುವ ಅವಕಾಶಗಳೇ ಇಲ್ಲವಾಗುತ್ತಿರುವ ಬಡದೇಶದಲ್ಲಿ ಅತಿಶಯವಾದ ಸವಲತ್ತುಗಳನ್ನು ಪಡೆದಿರುವ ವಿಶ್ವವಿದ್ಯಾಲಯಗಳ ಬುದ್ಧಿಜೀವಿ ಹಾಗು ಸಂಶೋಧಕವರ್ಗವು ಈ ಜನರು ಆಳವಾಗಿ ನಂಬಿಕೊಂಡು ಬಂದಿರುವ ಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಉಡಾಫೆಯಿಂದ ತಿರಸ್ಕರಿಸುವ ದುಷ್ಟತನದ ಮೂಲವು ಎಲ್ಲಿದೆ? ನಿರ್ದಿಷ್ಟವಾಗಿ ಹೇಳುವುದಾದರೆ ಪಾಂಡಿತ್ಯ ಮತ್ತು ಬುದ್ಧಿಶಕ್ತಿಗಳು Evil ನ ಅತ್ಯಂತ ಆಳವಾದ ಕೆಡುಕಿನ ರೂಪಗಳೇಕೆ ಆಗುತ್ತವೆ?”
Posted in Research, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
03 May 2013
ದೇವನೂರರ ಬರಹದ ಕುರಿತು ನಡೆದ ಚರ್ಚೆಯ ಸುತ್ತ . . .
* ಡಾ. ಕಿರಣ್ ಗಾಜನೂರು
“ದೇವನೂರರ ಕುರಿತು ಅಪಾರ ಗೌರವ ಇಟ್ಟುಕೊಂಡೆ ಈ ಮಾತು ಹೇಳುತ್ತಿದ್ದೇನೆ ಅವರ ಲೇಖನದಲ್ಲಿ ಲಾಜಿಕ್ಕೆ ಇಲ್ಲ ಇನ್ನು ತಪ್ಪುಗಳನ್ನು ಹೇಗೆ ಗುರುತಿಸುವುದು ಈಗ ಒಬ್ಬರೂ ಒಂದು ಸಂಶೋಧನೆಯ ಮೂಲಕ ನಿಮಗೆ ಒಂದು ಪ್ರಶ್ನೆ/ವಾದ ಕೇಳುತ್ತಾರೆ ಎಂದು ಇಟ್ಟುಕೊಳ್ಳಿ ಅದಕ್ಕೆ ನೀವು ಬೌದ್ಧಿಕವಾಗಿ ಅಂಧರೆ ಆ ವ್ಯಕ್ತಿ ಯಾವ ಸಂಶೋಧಾನ ವಿಧಾನ ಬಳಸಿ ಯಾವ ಮಾಹಿತಿಯ ಆಧಾರದ ಮೇಲೆ ತನ್ನ ವಾದ ಮಂಡಿಸುತ್ತಿದ್ದಾನೆ ಅದರಲ್ಲಿರುವ ದೂಷಗಳೇನು ಅವನು ಬಳಸಿದ ವಿಧಾನ ಮತ್ತು ಪಡೆದ ಮಾಹಿತಿ ಹೇಗೆ ಆ ವಸ್ಥುವಿನ ಸರಿಯಾಗಿ ವಿವರಿಸುವಲ್ಲಿ ಎಡವಿದೆ ಎಂಬುದನ್ನು ಲಾಜಿಕಲಿ ಸಾಧಿಸಬೇಕಾಗುತ್ತದೆ. ಆದರೆ ದೆವನೂರರ ಬರಹದಲ್ಲಿ ಈ ಅಂಶವೇ ಇಲ್ಲ ಅವರೂ ಇದುವರೆಗೂ ನಂಬಿಕೊಂಡು ಬಂದ ಐಡಿಯಾಲಜಿಯನ್ನು ವಿವರಿಸಿದ್ದಾರೆ ಅಷ್ಟೆ ಈ ರೀತಿಯಾದರೆ ಯಾರೂ ಬೇಕಾದರೂ ಮಾತನಾಡಬಹುದು ಆದರೆ ಅದರಿಂದ ಎನೂ ಪ್ರಯೋಜನ? ಅದೂ ಅಲ್ಲದೆ ದೆವನೂರು ಮತ್ತು ಅವರ ಹಿಂಬಾಲಕರು ನಂಬಿದ ವಿಷಯಗಳೇ ಅಂತಿಮ ಅವರ ವಿವರಣೆಗೆ ವಿರುಧ್ಧದ ಸಂಶೋಧನೆ ಯಾರೂ ಮಾಡಬಾರದು ಮಾಡಿದರೆ ಅವರ ಮೇಲೆ ಕಣ್ಣಿಡಿ ವಿಚಾರಣೇ ಮಾಡಿ ಎಂಬಿತ್ಯಾದಿ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ವಿಷಯವು ಅಲ್ಲ ಒಂದೂ ಕಾಲದಲ್ಲಿ ಆರ್.ಎಸ್.ಎಸ್ ನವರನ್ನು ಯಾವ ಯಾವ ಕಾರಣಕ್ಕೆ ಇವರುಗಳು ವಿರೋಧಿಸಿದ್ದರೂ ಇವತ್ತು ಅವೇ ಲಕ್ಷಣಗಳನ್ನು ಇವರು ಅವಾಹಿಸಿಕೊಂಡು ಮಾತನಾಡುತ್ತಿದ್ದಾರೆ ಇತರರ ಸಂಶೋಧನೆ ಟೀಕಿಸುತ್ತಿದ್ದರೆ. ಅಂದರೆ ಯಾರೂ ಸಂಶೋಧನೆಯನ್ನೆ ಮಾಡಬಾರದು ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಎಚ್ಚರಿಸುತ್ತಿದ್ದಾರೆ ಇನ್ನು ಮುಂದೆ ಹೋಗಿ ಜಿನ್ನಾ ನೀಡಿದಂತೆ ಡೈರೆಕ್ಟ್ ಆಕ್ಷನ್ ಗೆ ಕರೆನೀಡುತ್ತಿದ್ದಾರೆ ನನಗೆ ಆಶ್ಚರ್ಯವಾಗುವುದೇ ಇದಕ್ಕೆ ಯಾರೂ ಎನೇ ಸಂಶೋಧನೆ ಮಾಡಲಿ ನಾವು ಅವರೂ ಎತ್ತುವ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಆ ಮಟ್ಟದ ಸೈಂಧಾಂತಿಕ ಪಕ್ವತೆ ನಾವು ನಂಬಿದ ಸಿಂಧಾಂತಕ್ಕೆ ಇದೆ ಎಂದು ಆತ್ಮವಿಶ್ವಾಸದಿಂದ ನುಡಿಯುಬೇಕಾದ ಈ ಚಿಂತಕರೂ ಹೀಗೆ ವರ್ತಿಸುತ್ತಿರುವುದು ನಮ್ಮ ಸಂಶೋಧನಾ ಮಾದರಿಯ ವೈಪಲ್ಯ ತೋರಿಸುತ್ತದೆ” ಪೇಸ್ ಬುಕ್ ನಲ್ಲಿ ನಾನೂ ಪ್ರಕಟಿಸಿದ ಈ ಬರಹಕ್ಕೆ ಹಲವರು ಅನೇಕ ರೀತಿಯ ಪ್ರಶ್ನೆಗಳನ್ನು/ಟೀಕೆಗಳನ್ನು ಮಾಡಿದ್ದಾರೆ ಅವೆಲ್ಲವುಗಳನ್ನು ಒಂದೂ ಚರ್ಚೆಯ ಮಾದರಿಯಲ್ಲಿ ಕೆಳಗೆ ಬರೆದಿದ್ದೇನೆ ನೋಡಿ. . . .
ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮತ್ತು ನಡೆದಿರುವ ಶೋಷಣೆಗಳ ಕುರಿತು ಅವುಗಳ ನಿವಾರಣೆಯಗಳ ಕುರಿತು ಇಲ್ಲಿರುವ ಎಲ್ಲರ ಪ್ರಯತ್ನ ಮತ್ತು ಭಾವನೆ ಎಲ್ಲವೂ ತುಂಬಾ ಗೌರವಿಸುವ ವಿಚಾರಗಳೆ ಅಂದರೆ ನಮ್ಮೇಲ್ಲರ ಹಾನೆಸ್ಟ್ ಗುರಿ ಒಂದೇ ಅದು ನಮ್ಮ ಸಮಕಾಲಿನ ಸಮಾಜದ ಶೋಷಣೆಗಳನ್ನು ಹೊಗಲಾಡಿಸಬೇಕು.
ಆದರೆ, ನಮ್ಮ ದಾರಿ ಬೇರೆ ಬೇರೆ ಉದಾಹರಣೆಗೆ ಆಧುನಿಕ ಭಾರತದ ಜಾತಿ ಶೋಷಣೆಗಳನ್ನು ಹೋಗಲಾಡಿಸಲು ರಾಜರಾಮರ ಕಾಲದಿಂದಲೂ ಪ್ರಯತ್ನಗಳು ನಡೆಯುತ್ತಿವೆ ಅವರು ಒಂದು ದಾರಿ ಬಳಸಿದರೆ ಗಾಂಧಿ ಒಂದು ಮಾರ್ಗ ಅನುಸರಿಸಿದ್ದಾರೆ ಅಂಬೇಡ್ಕರ‍್ ಮತ್ತೊಂದು ದಾರಿ ಅನುಸರಿಸಿದ್ದಾರೆ ಇವೆನ್ ಸೊ ಕಾಲ್ಡ್ ಬಲಪಂಥಿಯರೂ ಅವರದೇ ಅದ ದಾರಿಯನ್ನು ಅನುಸರಿಸಿದ್ದಾರೆ ಅದರೆ ಪಲಿತಾಂಶ ಮಾತ್ರ ಅಂದುಕೊಂಡಷ್ಟು ದೊರಕಿಲ್ಲ ಇಂದಿಗೂ ಶೋಷಣೆಗಳು ಅವಮಾನಗಳು ನಡೆಯುತ್ತಲೇ ಇವೆ ಇವತ್ತು ಆ ಶೋ಼ಣೆಗಳನ್ನು ಅರ್ಥ ಮಾಡಿಕೊಳ್ಳಕು ಬಾಲು ಹೊಸ ಒಂದೂ ಮಾರ್ಗ ತೋರುತ್ತಿದ್ದಾರೆ ಅಷ್ಟೆ ಅದರೆ ನಮ್ಮಲ್ಲಿ ಬಹಳ ಜನರಿಗೆ ಬಾಲು ಅವರು ಶೋಷಣೆಯನ್ನು ಅರ್ಥಮಾಡಿಕೊಳ್ಳಲು ಎಲ್ಲರಂತೆ ಒಂದೂ ಮಾರ್ಗವನ್ನು ತೋರಿಸುತ್ತಿದ್ದಾರೆ ಎಂದೂ ತಿಳಿಯುತ್ತಿಲ್ಲ ಬದಲಾಗಿ ಬಾಲು ಶೋಷಣೇಗಳೇ ಇಲ್ಲ ಎನ್ನುತ್ತಿದ್ದಾರೆ ಎಂದೂ ಅರ್ಥಮಾಡಿಕೊಂಡಿದ್ದಾರೆ (ಅದೂ ಸತ್ಯವಾಗಿದ್ದರೆ ನಾನೇ ಅವರನ್ನು ಒಪ್ಪುವುದಿಲ್ಲ) ಇದು ಸಮಸ್ಯೆಯ ಮೂಲ ಒಂದೂ ವೇಳೆ ಬಾಲು ತೋರಿಸುತ್ತಿರುವ ಮಾರ್ಗವೂ ಶೋಷಣೆಯನ್ನು ಅರ್ಥಮಾಡಿಸಲೂ ವಿಪಲವಾದರೆ ಮತ್ತೂಬ್ಬರು ಮತ್ತೂಂದು ದಾರಿ ತೋರಿಸುತ್ತಾರೆ ಅದರೆ ಅದಕ್ಕಿಂತ ಮುಂಚೆ ಬಾಲು ತೋರಿರುವ ದಾರಿಯ ಸಮಸ್ಯಗಳೇನು ಅದು ಹೇಗೆ ಸಮಾಜದ ಶೋಷನೆಗಳನ್ನು ಅರ್ಥಮಾಡಿಕೊಳ್ಳಲು ತೆಡೆಯಾಗಿದೆ ಎಂಧೂ ಯಾರದರೂ ತೋರಿಸಬೇಕಿದೆ ಆದರೆ ಇದುವರೆಗಿನ ನಮ್ಮ ವಿದ್ವತ್ ವಲಯದ ಚರ್ಚೆ ನಿಜ ಅರ್ಥದಲ್ಲಿ ಬಾಲುರ ಸೈದ್ದಾಂತಿಕ ಮಟ್ಟದ ಸಂಶೋಧನೆಯ ಕುರಿತು ಯಾವುದೆ ಆಸಕ್ತಿದಾಯಕ ಮತ್ತು ಅಗತ್ಯ ಪ್ರಶ್ನೆಯನ್ನೆ ಎತ್ತದೆ ತಾನೇ ತಾನಾಗಿ ಡಂಕಿನ್ ಮತ್ತು ಬಾಲು ಅವರಿಗೆ ವಿಜಯವನ್ನು ಒದಗಿಸಿದೆ. ಅದ್ದರಿಂದ ಸಮಾಜಿಕ ಸಮಸ್ಯಗಳ ಕುರಿತು ಸಮಾನ ಆಸಕ್ತಿ ಹೊಂದಿರುವ ನಾವು ಬಾಲು ಅವರನ್ನು ಒದಿ ಅಥವಾ ಮಾತನಾಡಿ ಅವರ ತಪ್ಪಿದ್ದರೆ ಇದೂ ನಿಮ್ಮ ಸಮಸ್ಯ ಎಂದೂ ತೋರಿಸಬೇಕಿದೆ.
ಈ ನೆಲೆಯಲ್ಲಿ ಬಷೀರ‍್, ದಿನೇಶ್,ದಯಾನಂದ,ಸಾಹಿಲ್, ಅಕ್ಷತಾ, ಹುಲಿಕುಂಟೆ ಮೂರ್ತಿ, ಅರುಣ್ ಜೋಳದ (ಇವರೆಲ್ಲರೂ ಸಮಾಜಿಕ ತಾಣಗಳಲ್ಲಿ ಬಾಲು ಬರವಣಿಗೆಗೆಳ ಕುರಿತು ಚರ್ಚಿಸುತ್ತಿದ್ದಾರೆ) ಇತರೆ ಸಮಾನ ಮನಸ್ಸಿನ ಎಲ್ಲರೂ ಒಮ್ಮೆ ಸಿ.ಎಸ್.ಎಲ್.ಸಿ ಗೆ ಭೇಟಿಕೊಟ್ಟು (ನಾನೂ ಇರುತ್ತೇನೆ) ನಾವು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತದ್ದೇವೆ, ನಿಮ್ಮ ವಾದಗಳು ನಮ್ಮಲ್ಲಿ ಕೆಲವೂ ಗೊಂದಲಗಳನ್ನು ಹುಟ್ಟಿಹಾಕಿವೆ, ಸೋ.. ನಿಮ್ಮ ಸಂಶೋಧನೆ ಏನೂ? ಹೇಗೆ ಮಾಡುತ್ತಿದ್ದಿರ? ಇದರ ಉದ್ದೇಶ ಏನೂ? ಒಬ್ಬ ಪ್ರಜ್ಞಾವಂತನಾಗಿ ನನಗೆ ತಿಳಿಯುವ ಹಕ್ಕಿದೆ ವಿವರಿಸಿ. ಎಂದೂ ಅವರೂಡನೆಯೆ ನೆರವಾಗಿ ಚರ್ಚಿಸಿ, ಅ ನಂತರ ಅವರ ವಾದಗಳನ್ನು ವಿಮರ್ಶಿಸಿದರೆ ಖಂಡಿತ ಕರ್ನಾಟಕದ ಮಟ್ಟಿಗಿನ ಪ್ರಮುಖ ಚರ್ಚೆಗೆ ನಾವೂ ಮುಖಾಮುಖಿಯಾದಂತೆ ಆಗುತ್ತದೆ. ಮತ್ತು ಇತರರಿಗೆ ನಾವು ಒಂದೂ ಒಳ್ಳೆ ಮಾದರಿಯನ್ನು ಹಾಕಿಕೊಟ್ಟಂತೆ ಆಗುತ್ತದೆ.ಇಲ್ಲವಾದರೆ,ಮೇಲೆ ತಿಳಿಸಿದ ನಾವುಗಳೇ ೨ದಿನ ಎಲ್ಲರೂ ಒಟ್ಟಿಗೆ ಎಲ್ಲಾದರೂ ಕುಳಿತು ಬಾಲುವಿನ ವಾದಗಳನ್ನು ಓದಿ ಚರ್ಚಿಸಿ ಮುಖ್ಯವಾದ ಪ್ರಶ್ನಗಳನ್ನು ಪಟ್ಟಿಮಾಡಿ ಒಂದು ಲೇಖನ ಮಾಡಿ ಪ್ರಕಟಿಸಿದರೆ ಅದೂ ಇನ್ನೂ ಉತ್ತಮ ಪ್ರಯತ್ನವಾಗುತ್ತದೆ? ಈ ನಿಟ್ಟಿನಲ್ಲಿ ನಾವೂ ಯೋಚಿಸಬೇಕಿದೆ ಇದ್ಯಾವುದನ್ನು ಮಾಡದ ನಾವು, ಕೇವಲ ನಮಗೆ ದೂರೆತ ಸೆಕೆಂಡರಿ ಸೋರ್ಸ್‌ಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯ ೪೫ ವರ್ಷದ ಸಂಶೋಧನೆಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. . . ಮತ್ತು ನಮ್ಮಗಳ ಮೂಲ ಉದ್ದೇಶಗಳೂ ( ಸಮಾಜದ ಶೋಷಣೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ) ಈಡೇರುವುದಿಲ್ಲ. ಸೋ, ನಾವೂ ಬದಲಾಗಬೇಕಿದೆ. ಪ್ರಶ್ನೆ ಮಾಡುವ ನಮ್ಮ ಮಾದರಿಗಳೂ ಬದಲಾಗಬೇಕಿದೆ.
ಗೆಳೆಯರೆ,ಈ ನೆಲೆಯಲ್ಲಿ ಮಾತನಾಡಿದ್ದಕ್ಕೆ ಮೇಲೆ ತೀಳಿಸಿದ ಲೇಖಕರು ದೇವನೂರರು ಸಂತನ ಹಾಗೆಯೇ ಬದುಕಿದ್ದಾರೆ, ಸಂತನ ಹಾಗೆಯೇ ಮಾತನಾಡಿದ್ದಾರೆ. ಲಾಜಿಕ್ಕು, ಸಂಶೋಧನೆಯ ವೈಧಾನಿಕತೆ, ವಾದ, ತರ್ಕ ಎಲ್ಲದಕ್ಕೂ ಮಣ್ಣುಬಿದ್ದು ಹೋಗಲಿ. ನಮಗೆ ಬೇಕಿರುವುದು ಕಣ್ಣಮುಂದೆ ನಿಗಿನಿಗಿ ಕೆಂಡದಂತಿರುವ ಸತ್ಯಗಳು.ಮನುವಾದಿ ಅಜೆಂಡಾ ಹೇರಲು ಬಂದಿರುವವರ ಸೋ ಕಾಲ್ಡ್ ಸಂಶೋಧನೆಗಳಲ್ಲ. ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅದಕ್ಕೆ ನಾನು, ನಮ್ಮ ವ್ಯವಸ್ಥೆಯಲ್ಲಿ ನಿತಿ ನಿರೂಪಣೆಗಳು ಸಾಮಾಜಿಕ ಸಂಶೋಧನೆ ರೂಪಿಸಿದ ಜ್ಞಾನದ ಮೇಲೆ ಆಗುತ್ತವೆಯೇ ಹೊರತು ಸಂತನ ಹಾಗೆ ಬದುಕುವುದರಿಂದ ಅಲ್ಲ ದೇವನೂರು ಸಂತರಾದರೆ ರವಿಶಂಕರ್ ಅವರ ತರ ಮಠ ತೆರೆದು ಬಂದವರಿಗೆ ಅಧ್ಯಾತ್ಮಿಕತೆ ಹೇಳಿಕೊಡಲಿ ನಾನೂ ಹೋಗುತ್ತೇನೆ ಆದರೆ ಅವರು ಸಾಮಾಜಿಕ ಚಿಂತಕರೂ ಅಂತಲೇ ತಮ್ಮನ್ನು ಕರೆದುಕೋಳ್ಳುತ್ತಾರೆ ಅಂತಾದಮೇಲೆ ಶೋಧನೆಯ ವೈಧಾನಿಕತೆ, ವಾದ, ತರ್ಕ ಎಲ್ಲವನ್ನೂ ಕಲಿಯಲೇಬೇಕು ಅಲ್ಲವೆ. ಎಂಬ ನನ್ನ ಮಾತಿಗೆ ಸಾತ್ವಿಕ್ ಅವರು ಸರ್.. ಲಾಜಿಕ್ಕು, ಸಂಶೋಧನೆಯ ವೈಧಾನಿಕತೆ, ವಾದ, ತರ್ಕ ಬೇಡ ಎಂದರೆ ಹೇಗೆ ಸರ್.. ಅಂಬೇಡ್ಕರರ ಬರಹಗಳು ಅವರ ಎದುರಾಳಿಗಳಿಗೆ ಪಾಠ ಕಲಿಸಿದ್ದೇ ಅವರ ಸಂಶೋಧನೆ, ತರ್ಕಗಳ ಮೂಲಕ. ಇಲ್ಲವಾಗಿದ್ದಲ್ಲಿ ಅವರ ಎದುರಾಳಿಗಳು ಅವರನ್ನು ಭಾವುಕತೆ ಬಂಧನದಲ್ಲಿ ಸಿಲುಕಿಸಿಬಿಡುತ್ತಿದ್ದರು. ಅವರ ಅಪಾರ ಓದು ಮತ್ತು ಅದರಿಂದ ದಕ್ಕಿದ ತಾಳ್ಮೆ ಅವರನ್ನು ಅಂಥ ಹೀನ ಮತ್ತು ಭ್ರಷ್ಟ ಸಮಾಜದ ನಡುವೆಯೂ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಮಾಡಿದ್ದು ಎಂಬುದು ನನ್ನ ನಂಬಿಕೆ. (ಈಗ ಅಂಬೇಡ್ಕರರನ್ನು ಓದಲು ಆರಂಭಿಸಿದ್ದೇನೆ. ಅದರ ಪೋರ್ಸ್ ನಲ್ಲಿ ಹೇಳಿದ ಮಾತಿರಬಹುದು ಎಂಬ ಮಾತುಗಳನ್ನು ಸೇರಿಸಿದರು ಇದನ್ನೆ ಮುಂದುವರಿಸಿ ನಾನು ನಮ್ಮಗಳ ಅಂತಿಮ ಉದ್ದೇಶ ಕನ್ನಡದ ಮಟ್ಟಿಗೆ ಒಂದೂ ಸಂಶೋಧನೆ ಈ ಮಟ್ಟಿಗೆ ಚರ್ಚೆಗೆ ಗ್ರಾಸವಾಗುತ್ತಿರುವುದು ನಮ್ಮಂತ ಯುವ ಸಂಶೋಧಕರಿಗೆ ಅಸರೆಯಾಗಲಿದೆ ಆದರೆ ಚರ್ಚೆ ಸಂಶೋಧನಾ ಎಲ್ಲೆ ಮಿರಿ ವಯಕ್ತಿಕ ಮಟ್ಟದ ಟಿಕೆಗಳಾಗಿ ಬದಲಾಗುತ್ತಿದೆ ಇದರಿಂದ ಯಾರಿಗೂ ಪ್ರಯೋಜನವಿಲ್ಲ? ಎರಡೂ ಕಡೆಯವರೂ ಸಂಯಮದಿಂದ ತಾಳ್ಮೆಯಿಂದ ಬೌದ್ಧಿಕವಾಗಿ ಚರ್ಚಿಸಿದರೆ ಒಂದೂ ದೊಡ್ಡ ಯುವ ಪೀಳಿಗೆ ಇದರಿಂದ ಲಾಭ ಪಡೆಯಲಿದೆ. . . . ಈ ನಿಟ್ಟಿನಲ್ಲಿ ನಾವು ಯೋಚಿಸಬೇಕಿದೆ ಎಂಬುದಾಗಿ ವಿವರಿಸಿದೆ.
ಇದಕ್ಕೆ ದಯಾನಂದ ಅವರು, ವಚನಚಳುವಳಿ ಯಾವ ಕಾರಣಕ್ಕೆ ಆಯಿತೋ ತಿಳಿದಿಲ್ಲ ಆದರೆ ಅದರಿಂದ ಜನರಿಗೆ ಒಳ್ಳೆಯದಾಗಿದೆ ಇಷ್ಟು ಸಾಕು ಒಂದೂ ಸಂಶೋಧನೆ ಮೂಲ ಉದ್ದೇಶವೇ ಇದು ವಚನಚಳುವಳಿ ಇದನ್ನು ಇಗಾಗಲೇ ಸಾಧಿಸಿರುವುದರಿಂದ ಅವುಗಳ ಕುರಿತ ಸಂಶೋಧನೆ ಅನಗತ್ಯ ಎಂಬ ಮಾತನ್ನು ಹೇಳಿದರು ಅದಕ್ಕೆ ನಾನು ಹಾಗಲ್ಲಾ ದಯಾ ನಾನೂ ನಿವೇ ಮಾತನಾಡುವ ನಮ್ಮ ವ್ಯವಸ್ಥೆಯಲ್ಲಿ ಕಾಯ್ಧೆ ಕಾನೂನುಗಳು ಯಾವುದರ ಆಧಾರದ ಮೇಲೆ ರೋಪುಗೊಳ್ಳುತ್ತವೆ ಮೇಲೆ ತಿಳಿಸಿದಂತೆ ಅದು ಸಮಾಜ ಸಂಶೋಧನೆ ಕಟ್ಟಿಕೊಟ್ಟ ಜ್ಞಾನದ ಆಧಾರ ಮೇಲೆ ಅಲ್ಲವೆ? ಹಾಗಾದರೆ ನಮ್ಮನ್ನು ಪ್ರತಿನಿಧಿಸುವ ಜ್ಞಾನದ ಆಧಾರದ ರೋಪುಗೊಂಡ ಕಾನೂನುಗಳು ಎಕೆ ಜನರಿಗೆ ಶೋಷಿತರಿಗೆ ನ್ಯಾಯ ಒದಗಿಸುತ್ತಿಲ್ಲ ಸಫಾಯಿ ಕರ್ಮಚಾರಿಗಳ ಕುರಿತ ನಿಮ್ಮ ಸಂಶೋಧನೆ ಮತ್ತು ಬರವಣಿಗೆ ಪ್ರಭುತ್ವದ ಅಂದರೆ ಕಾನೂನಿನ ಈ ದೋರಣೆಯನ್ನು ಖಂಡಿತ ಗುರುತಿಸಿರುತ್ತದೆ ಎಂದೂ ನಾನೂ ಭಾವಿಸಿದ್ದೇನೆ ( ದಯಾನಂದ ಕರ್ನಾಟಕದ ಸಫಾಯಿ ಕರ್ಮಚಾರಿಗಳ ಕುರಿತು ಹೋರಾಡುತ್ತಿರುವವರಲ್ಲಿ ಪ್ರಮುಖರು) ಮತ್ತು ಅದು ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಸೊ ಇದರ ಅರ್ಥ ಸಫಾಯಿ ಕರ್ಮಚಾರಿಗಳ ಕುರಿತಂತೆ ನಮ್ಮ ಸಂಶೋಧನೆಗಳು ರೋಪಿಸಿರುವ ಜ್ಞಾನ ನಿಜವಾದ ಅರ್ಥದಲ್ಲಿ ಅವರ ಬದುಕನ್ನು ಅಲ್ಲಿನ ಬವಣೆಗಳನ್ನು ವಿವರಿಸುತ್ತಿಲ್ಲ ಅಂತ ಅಲ್ಲವೆ? ಅದಕ್ಕಾಗಿಯೇ ಅಲ್ಲವೇ ತಾವು ರಾಜ್ಯ ಎಲ್ಲಾ ಸುತ್ತುವುದು ಮತ್ತು ಬರೆಯುವುದು ಮುಂದೂಂದು ದಿನ ನಿಮ್ಮ ಅಭಿಪ್ರಾಯವೇ ನಮ್ಮ ಸಪಾಯಿ ಕರ್ಮಚಾರಿಗಳ ಕುರಿತ ಜ್ಞಾನ ಎಂದೂ ನಿರೂಪಿತವಾದರೆ ಆದರ ಆಧಾರದ ಮೇಲೆ ನೀತಿ ನಿರೋಪಣೆಗಳು ರಚಿತವಾದರೆ. . . .ಹೇಗಿರುತ್ತದೆ ಇದನ್ನೆ ಸಂಶೋಧನೆ ಎನ್ನುವುದು ಅಲ್ಲವೆ ಇದಕ್ಕೆ ಸಂಶೋಧನೆಯ ವೈಧಾನಿಕತೆ, ವಾದ, ತರ್ಕ ಎಲ್ಲವನ್ನೂ ಕಲಿಯಲೇಬೇಕು ಇಲ್ಲವಾದರೆ ನಿಮ್ಮ ಈಡೀ ಪ್ರಯತ್ನ ಕೇವಲ ಭಾವನಾತ್ಮಕ ಹೇಳಿಕೆಗಳಾಗುತ್ತವೆ ಇಲ್ಲವೇ ಒಂದಾರು ಕತೆಗಳಾಗುತ್ತವೆ. . . ಜ್ಞಾನ ವಾಗುವುದಿಲ್ಲ ಅದೂ ಆಗಬೇಕಾದರೆ ನೀವು ಅದನ್ನು ಜ್ಞಾನದ ಮಾದರಿಯಲ್ಲಿಯೇ ಮಂಡಿಸಬೇಕು ಗೆಳೆಯ.ಎಂದೂ ವಿವರಿಸಿದೆ.
ಇದಕ್ಕೆ ಪ್ರತಿಕ್ರೀಯಿಸಿದ ರವಿ ಅರೆಹಳ್ಳಿ ಇವರು ಆನು ದೇವಾ ಹೊರಗಣದವನು ಕೃತಿಯನ್ನು ಬೆಂಬಲಿಸಿದ ಮನಸುಗಳೇ ಇಂದು ಡಂಕಿನರ ವಾದದ ತಳಹದಿಯನ್ನು ಅಲುಗಾಡಿಸುತ್ತಿರುವ ಅನಿವಾರ್ಯತೆಯನ್ನು ನಾವು ಬೆಂಬಲಿಸಲೇಬೇಕಿದೆ. ಪ್ರತಿಭೆ ಎನ್ನುವುದಕ್ಕೆ ಹಲವು ಆಯಾಮಗಳ ಒಳಗೊಳುವಿಕೆ ಇರುವಾಗ ನೋಟು ಎಣಿಸುವ ಮಶೀನಿನಂತೆ ವ್ಯವಹರಿಸುವ ಡಂಕಿನ ಬಳಗದ ಶೋಧಕಗಳ ಮೂಲ ಹುಡುಕುವ ವಿಧಿ ಈಗಷ್ಟೆ ಶುರುವಾಗಿದೆ. ಇತಿಹಾಸ ಅಂಕಿ ಅಂಶಗಳನ್ನು ಎಷ್ಟು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತೋ ಅಷ್ಟೆ ಬೇಗ ಅಳಿಸಿಯೂ ಬಿಡುತ್ತದೆ. ಅದರ ಪರಿಣಾಮಗಳಷ್ಟೆ ಕಾಲಾತೀತವಾಗಿ ಉಳಿಯುತ್ತವೆ. ಈವತ್ತಿಗೂ ಆನು ದೇವಾ ಹೊರಗಣದವನು ಕೃತಿ ನಿಷೇಧಿತ ಕೃತಿಯಾಗಿರುವುದು ಡಂಕಿನರ ಹಿಂದಿರುವ ಪ್ರಾಯೋಜಿತ ಮನಸುಗಳಿಂದಾನೆ ತಾನೆ ಎಂಬ ಮಾತನ್ನು ಹೇಳಿದರು .
ಇದಕ್ಕೆ ನಾನೂ, Ravi arehalli ತುಂಬಾ ಜನರ ತಪ್ಪು ತಿಳುವಳಿಕೆಯೆ.ಅದು ನನ್ನ ಪ್ರಕಾರ (ತಪ್ಪಿದ್ದರೆ ಡಂಕಿನ್ ಸರಿಮಾಡಿ) ಡಂಕಿನ್ ತಮ್ಮ ಒಂದೂ ವಾದದ ವಿವರಣೆಗೆ ಅಂಕಿ-ಅಂಶಗಳನ್ನು ಬಳಸಿಕೊಂಡಿದ್ದಾರೆಯೇ ವಿನಹ ಅವರ ಇಡೀ ವಾದವೇ ಅಂಕಿ-ಅಂಶಗಳ ಮೇಲೆ ನಿಂತಿಲ್ಲ . . .ಅದೂ ಅಲ್ಲದೆ ನಮ್ಮ ವ್ಯವಸ್ಥೆಯಲ್ಲಿ ನೀತಿ ನಿರೋಪಣೆಗಳು ಜಾರಿಗೊಳ್ಳುವುದೇ ಆಯಾ ಇಲಾಖೆಗಳು ನೀಡುವ ಅಂಕಿ-ಅಂಶಗಳ ಆಧಾರದ ಮೇಲೆ ಉದಾಹರಣೆಗೆ ಬಡತನ ಹೋಗಲಾಡಿಸಬೇಕು ಎಂದೂ ಹೊರಡುವ ಪ್ರಭುತ್ವ ಬಡತನ ಎಂದರೇನು? ಅವರುಗಳ ಸಂಖ್ಯೆ ಎಷ್ಟಿದೆ ? ಬಡತನಕ್ಕೆ ಕಾರಣಗಳೇನು? ಎಂದೂ ಅಂಕಿ-ಅಂಶ ಮತ್ತು ವರಧಿಯ ಆಧಾರದಲ್ಲಿ ಸರ್ಕಾರದ ಅರ್ಥಿಕ ತಜ್ಞರು ಯೋಜನೆ ರೂಪಿಸುತ್ತಾರೆಯೋ ಅಥವಾ ನಾಲ್ಕಾರು ಕಾದಂಬರಿಗಳಲ್ಲಿ/ಬಾಷಣಗಳಲ್ಲಿ ಸಾಹಿತಿಗಳು ಬಡತನದ ಕುರಿತು ಇರುವ ಭಾವುಕ ಹೇಳಿಕೆಗಳ ಮೇಲೆ ಯೋಜನೆ ರೂಪಿಸುತ್ತಾರೆಯೋ ಸಾಹಿತಿಗಳ ಹೇಳಿಕೆಗಳೂ ಪ್ರಭುತ್ವದ ನಿರ್ದಾರಗಳನ್ನು ಪ್ರಭಾವಿಸಬಹುದೇ ಹೊರತು ಅವುಗಳ ಆಧಾರದಲ್ಲಿ ನೀತಿ ನಿರೋಪಣೆ ನಡೆಯುವುದಿಲ್ಲ ನೀತಿ ನಿರೂಪಣೆಗೆ ಬೇಕಿರುವುದು ಅಂಕಿ-ಅಂಶ ಮತ್ತು ಅವುಗಳ ಆಧಾರದಲ್ಲಿ ತಜ್ಞರು ನೀಡುವ ವರಧಿಗಳು. ಎಂದು ವಿವರಿಸಿದೆ.
ಇದಕ್ಕೆ ರವಿಯವರು yes ನೀವು ಹೇಳೋದೇ ಸರಿ. ಆದರೆ ಅಂಕಿ ಅಂಶಗಳು ಒದಗಿ ಬಂದ ಆಧಾರಗಳ ಮೂಲವೂ ಬಹಳ ಅನುಮಾನಾಸ್ಪದವಾಗಿ ಇರುವಾಗ ಚರ್ಚೆ ಅವುಗಳ ಸುತ್ತಲೆ ಸುತ್ತೋದು ಸಹಜ. ಅಂಕಿ ಅಂಶಗಳನ್ನಷ್ಟೆ ಇಟ್ಟುಕೊಂಡು ಯೋಜನೆ ರೂಪಿಸವುದಾದರೆ “ತಜ್ಞರು” ಯಾಕೆ ಬೇಕು ಅರ್ಥ ಆಗುತ್ತಿಲ್ಲ. ಒಂದು ಮಶೀನು ಕೂಡ ಅಂಕಿ ಅಂಶಗಳನ್ನಿಟ್ಟುಕೊಂಡು ಯೋಜನೆ ರೂಪಿಸಬಹುದು ಅಲ್ವೆ. ಅನುಭವಗಳ ಮೂಟೆಗಳನ್ನಿಟ್ಟುಕೊಂಡ ತಜ್ಞರು ಯಾಕೆ… ಭಾವುಕತೆ ಒಂದು ಹಂತದ ತನಕ ತಡೆ ಒಡ್ಡಿದರೂ ಯೋಜನೆ, ಯೋಚನೆಗಳ ಮೂಲಕ್ಕೆ ಅನುಭವ ನೀಡುವ ಕಸುವು ಬಹಳ ಹೆಚ್ಚೇ ಇರುತ್ತೆ. ದೇವನೂರು ಮತ್ತು ಕಂಬಾರರಂತವರು ವಚನ ಚಳುವಳಿಯ ಅನುಭವ, ಫಲಿತಗಳನ್ನು ತಮ್ಮದಾಗಿಸಿಕೊಂಡ ಬಹುಸಂಖ್ಯಾತ “ತಜ್ಞ”ರಲ್ಲಿ ಸೇರುತ್ತಾರೆ ಎನ್ನುವುದನ್ನು ನೀವು ಒಪ್ಪುವುದಾದರೆ….ಅವರು ವರ್ತಮಾನದಲ್ಲಿ ಮಶೀನುಗಳಿಂತ ಹೆಚ್ಚು ಅಗತ್ಯವಾಗುತ್ತಾರೆ. ಎಂದು ವಿವರಿಸಿದರು ಅದಕ್ಕೆ ನಾನೂ ದೇವನೂರು ಮತ್ತು ಕಂಬಾರರಂತವರು ವಚನ ಚಳುವಳಿಯ ಅನುಭವ, ಫಲಿತಗಳನ್ನು ತಮ್ಮದಾಗಿಸಿಕೊಂಡ ಬಹುಸಂಖ್ಯಾತ “ತಜ್ಞ”ರಲ್ಲಿ ಸೇರುತ್ತಾರೆ ಎನ್ನುವುದನ್ನು ನೀವು ಒಪ್ಪುವುದಾದರೆ? ಎಂದೂ ಕೇಳಿದ್ದಿರಿ ಖಂಡಿತಾ ಒಪ್ಪುತ್ತೇನೆ ಅದೇ ರೀತಿ ಡಂಕಿನ್ರವರು ಸಹ ವಚನ ಚಳುವಳಿಯ ಅನುಭವ, ಫಲಿತಗಳನ್ನು ಭಿನ್ನ ಮಾದರಿಯಲ್ಲಿ ಪಡೆಯುವ ಪ್ರಯತ್ನ ಮಾಡಿದ್ದಾರೆ ಜ್ಞಾನ ಬೆಳೆಯುವುದೇ ಹೀಗೆ ಅದಕ್ಕೆ ಇಷ್ಟು ಅಸಹನೆ ಎಕೆ? ತಪ್ಪಿದ್ದರೆ ವಿಮರ್ಶಿಸಿ? ಅದು ಬಿಟ್ಟು ದೇವನೂರು ಮತ್ತು ಕಂಬಾರರಂತವರು ಪಡೆದ ವಚನ ಚಳುವಳಿಯ ಫಲಿತವೇ ಅಂತಿಮ ಇನ್ಯರು ವಚನಗಳ ಕುರಿತು ಬೇರೆ ನೆಲೆಯಲ್ಲಿ ಯೋಚಿಸಲೇ ಭಾರದು ಯೋಚಿಸಿದವರ ಮೇಲೆ ಕಣ್ನಿಡಿ ಎನ್ನುವ ನಿಲುವು ಎಷ್ಟು ಸರಿ. . . ಇದು ಒಂದೂ ಸಂಶೋಧನೆಗೆ ಮುಖಾಮುಖಿಯಾಗಿವ ಮಾದರಿಯೇ ರವಿ ನಿವೇ ಹೇಳಿ ಎಂದೂ ವಿವರಿಸಿದೆ ಅದಕ್ಕೆ ಮಂಜುನಾಥ್ ರವರು ಡಂಕಿನ್ ವಿದೇಶದಲ್ಲಿ ಕುಳಿತು ನಮ್ಮ ಸಮಾಜದ ಕುರಿತು ಸಂಶೋಧನೆ ಮಾಡುತ್ತಿದ್ದಾರೆ ಇದಕ್ಕೆ ಮಹತ್ವ ಇಲ್ಲ ಎಂಬ ಅವರಿಗೆ ಅಂಬೇಡ್ಕರ‍್ ಅವರು ನಮ್ಮ ಸಮಾಜದ ಶೋಷಣೆಗಳ ಕುರಿತು ತಮ್ಮ ನಿಲುವುಗಳನ್ನು ರೂಪಿಸಿಕೊಂಡಿದ್ದು ವಿದೇಶದ ಗ್ರಂಥಾಲಯಗಲ್ಲಿಯೇ ಗೆಳೆಯ . . . ಹಾಗದರೆ ಅವರು ತಪ್ಪೆ. . . ಹಾಗೆ ಡಂಕಿನ್ ಅವರೂ ಇಲ್ಲಿಯವರೆ ಇಲ್ಲಿನ ಸಮಾಜದ ಕುರಿತು ಸಂಶೋಧನೆ ಮಾಡಿಯೇ ವಿದೇಶಕ್ಕೆ ಹೋಗಿರುವುದು ಅದು ಉನ್ನತ ಶಿಕ್ಷಣಕ್ಕೆ.. . . ವಿಷಯ ಅದಲ್ಲ ಎಲ್ಲಿದ್ದರೆ ಎನೂ ನಾವು ಮಾತನಾಡುವ ನೆಲೆ ಸರಿಯಾಗಿರಬೇಕು ಅಷ್ಟೆ. ಎಂಬ ನನ್ನ ವಿವರಣೆ ಉತ್ತರವಾಯಿತು. . .
ಇದಾದ ನಂತರ ಚರ್ಚೆ ಬೇರೆ ನೆಲೆಯತ್ತ ಹೊರಳಿತು ಅದರ ವಿವರ ಹೀಗಿದೆ …
http://savithru.blogspot.in/2013/04/blog-post_29.html?m=1 ಸಮಾಜಿಕ ತಾಣದಲ್ಲಿ ನೀಡಿರುವ ಕೆಲವು ವಚನಗಳ ಕುರಿತು ಚರ್ಚೆ ನಡೆಯಿತು ಅದಕ್ಕೆ ನಾನು ನಮ್ಮಲ್ಲಿ ಬಹುತೇಕರು ಬಾಲು ಅವರ ಬರವಣಿಗೆಗಳನ್ನು ಒರಿಜಿನಲ್ ಓದಿಲ್ಲ (ಓದಿದ್ದರೆ ಅವರ ಲೇಖನಗಳ ಆಧಾರದ ಮೇಲೆ ಚರ್ಚೆ ನಡೆಯುತ್ತಿತ್ತು) ಬದಲಾಗಿ ಅವರ ಚಿಂತನೆಯ ಕುರಿತ ಹಲವಾರು ಸೆಕೆಂಡರಿ source ಆಧಾರದ ಮೇಲೆ ಚರ್ಚೆ ಮಾಡುತ್ತಿದ್ದೇವೆ. . . ಮೇಲೆ ನೀಡಿರುವ ಲಿಂಕ್ ನಲ್ಲಿನ ವಚನಗಳು ಪ್ರಾಥಮಿಕ ಮಾಹಿತಿಯೇ ಅಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಜಾತಿ ವ್ಯವಸ್ಥೆ ಕಾರಣ ಎಂದೂ ನಾವು ಅಂದುಕೊಳ್ಳುತ್ತಿದ್ದೇವೆ. ಅದು ಜಾತಿ ತಾರತಮ್ಯ ಇದ್ದ ಸಮಾಜದಲ್ಲಿ ನಡೆದ ಘಟನೆ ಅಷ್ಟೆ.ಆ ರೀತಿಯ ಘಟನೆಗಳು ಈಗಲೂ ನಡೆಯುತ್ತಿವೆ ಪರಿಹಾರ ಏನು? ಜಾತಿ ವ್ಯವಸ್ಥೆ ಇದೆ.ಅದ್ದರಿಂದ ಈ ಘಟನೆ ನಡೆಯುತ್ತಿವೆ ಅದ್ದರಿಂದ ಅದನ್ನು ಇಲ್ಲವಾಗಿಸಬೇಕು ಎಂಬ ನಮ್ಮ ಚಿಂತಕರ ಬಡಬಡಿಕೆ ಅತನ ಅವಮಾನಕ್ಕೆ ಪರಿಹಾರವಾಗುತ್ತವೆಯೇ? ಇಲ್ಲ. ಇದರಿಂದ ಶೋಷಣೆ ಮಾಡಿದವನಿಗೆ ತನ್ನ ತಪ್ಪಿನ ಅರಿವೆ ಆಗದೆ ನಾನೂ ಮಾಡಿದ್ದೆ ಸರಿ ಎಂಬ ಸಮರ್ಥನೆ ಸಿಗುತ್ತದೆ.
ಶೋಷಣೆಗೆ ಒಳಗಾದವನಿಗೆ ನಾನೂ ಈ ಜಾತಿಯಲ್ಲಿ ಹುಟ್ಟಿದ್ದೆ ಇದಕ್ಕೆಲ್ಲ ಕಾರಣ ಅನ್ನುವ ಹತಾಷೇ ಮೂಡುತ್ತದೆ.ಅವನು ಪ್ರಜ್ಞಾವಂತನಾಗಿದ್ದರೆ ತನ್ನ ಮುಂದಿನ ಪೀಳಿಗೆಯನ್ನು ಮೇಲ್ಜಾತಿಗಳ ರೀತಿ ಬೆಳೆಸುತ್ತಾನೆ. ಅಂದರೆ, ಅಮಾಯಕರನ್ನು ಶೋಷಿತರನ್ನಾಗಿಸುತ್ತಾನೆ (ವಿದ್ಯಾವಂತ ಮತ್ತು ನೌಕರ ದಲಿತರನ್ನು ನೊಡಿ ಅರ್ಥವಾಗುತ್ತದೆ) ಸುಮ್ಮನೆ ಯೋಚಿಸಿ, ಜಾತಿವ್ಯವಸ್ಥೆ ಇದೆ ಎಂದೂ ಒಪ್ಪಿಕೊಂಡರೆ ಅದರ ಅಧಾರದ ಮೇಲೆ ದಲಿತರ ಕುರಿತು ಏನೆಲ್ಲಾ ಅಸಹ್ಯ ಹೇಳಿಕೆಗಳು ನೀಡಲ್ಪಟ್ಟಿವೆಯೋ ಅವೆಲ್ಲ ಸತ್ಯವೆ ಆಗಿ ಬಿಡುತ್ತವೆ. . . ಅಲ್ಲವೆ?ಅಂದರೆ, ದಲಿತರು ಕುಲಹಿನರು, ಕೊಳಕರು, ಸಂಸ್ಕಾರ ಹಿನರು ಚಂಡಾಲರು ಒಂದೇ ಮಾತಿನಲ್ಲಿ ಹೇಳುವುದಾರೆ ಮನುಷ್ಯಾಗಿ ಬದುಕುತ್ತಿರುವ ಪ್ರಾಣಿಗಳು ನಾಗರಿಕ ಸಮಾಜದಲ್ಲಿ ನಾಗರಿಕರಂತೆ ಬದುಕಲು ಅರ್ಹತೆ ಇಲ್ಲದವರು ಸ್ವಂತ ಬುದ್ದಿ ಇಲ್ಲದವರು ಪರಾವಲಂಬಿಗಳು ಅದ್ದರಿಂದಲೇ ಅವರು ಈ ಸಮಾಜದ ಮುಖ್ಯವಾಹಿನಿಯಿಂದ ದೂರವಿರಬೇಕು ಇತ್ಯಾದಿ … ವಿವರಣೆಗಳೇ ಜಾತಿ ಶ್ರೇಣಿಕರಣದ ಕೊನೆಗೆ ಅವರನ್ನು ತಳ್ಳಲ್ಪಟ್ಟಿವೆ ಎಂಬ ವಿವರಣೆಗಳೂ ಸರಿಯೇ? ಸೊ ಕಾಲ್ಢ್ ಜಾತಿ ವ್ಯವಸ್ಥೆಯ ಸಿದ್ದಾಂತ ಇವೇ ಕಾರಣಗಳಿಗಾಗಿಯೇ ಅವರನ್ನು ತನ್ನ ಶ್ರೇಣಿಕರಣದ ಕೊನೆಯಲ್ಲಿ ಇಟ್ಟಿದೆ ಅಥವಾ ಹೊರಗೆ ಇಟ್ಟಿದೆ(ಇದಕ್ಕೆ ಸಾವಿರ ಆಧಾರಗಳು ಸಿಗುತ್ತವೆ). . ಜಾತಿ ವ್ಯವಸ್ಥೆ ಇದೆ ಮತ್ತು ಅದರಲ್ಲಿ ದಲಿತರೂ ಕೊನೆಯಲ್ಲಿ ಇದ್ದಾರೆ ಎಂದೂ ಸಾರಿ ಸಾರಿ ಹೇಳುವ ನೀವು ದಲಿತರೂ ಎಕೆ ಅಲ್ಲಿದ್ದಾರೆ ಎಂಬ ಜಾತಿ ಸಿದ್ದಾಂತದ ಮೇಲಿನ ಹೇಳಿಕೆಗಳನ್ನು ಒಪ್ಪಿದಂತೆಯೇ ಅಲ್ಲವೆ. . . . ಅದ್ದರಿಂದ ಇಂದೂ ದಲಿತ ಶೋಷಣೆಗೆ ತಮ್ಮಗಳ (ಜಾತಿ ಸಿದ್ದಾಂತ ಇದೆ ದಲಿತರು ಅಲ್ಲಿ ಕೆಳಗಿದ್ದಾರೆ ) ನಿಲುವು ಸಮರ್ಥನೆ ಒದಗಿಸುತ್ತಿಲ್ಲವೆ.
ನನ್ನ ಪ್ರಕಾರ ಜಾತಿ ವ್ಯವಸ್ಥೆ ಇದೆ ಅಂತ ವಾದಿಸುತ್ತಿರುವವರು ಹಾಗೆ ಅಂದುಕೊಳ್ಳಲೇ ಬೇಕು ಜಾತಿ ವ್ಯವಸ್ಥೆ ಅಂದರೆನೇ “ಶ್ರೇಣೀಕರಣ ಇತ್ತು” ಮತ್ತು “ಅದರಲ್ಲಿ ದಲಿತರು ಕೆಳಗಿದ್ದರು” ಎಂಬ ವೈಜ್ಞಾನಿಕ ವಿವರಣೆ ಎಂದೂ ವಿವರಿಸಿದೆ. ನಂತರ, ಸಾಹಿಲ್ ನನಗೆ ಅಂಬೇಡ್ಕರ್,ಪೂಲೆ ಇವರುಗಳ ಕುರಿತು ಅಭಿಪ್ರಾಯ ಕೇಳಿದರು. ಅದಕ್ಕೆ ನಾನೂ, ಭಾರತದ ಸಂಧರ್ಭದಲ್ಲಿ ಸಮಾಜಿಕ ಸಮಸ್ಯಗಳನ್ನು ಭಿನ್ನವಾಗಿ ನೋಡಿದವರಲ್ಲಿ ಇವರೂ ಪ್ರಮುಖರು.ಅದಕ್ಕೆ ಅವರುಗಳ ಬರವಣಿಗೆಗೆಗಳೇ ಸಾಕ್ಷೀ. ಆದರೆ, ತಾವು ಅನುಭವದಿಂದ ಕಂಡುಕೊಂಡ ಅವಮಾನಗಳಿಗೆ, ಶೋಷಣೆಗಳಿಗೆ ಅವರೂ ಪರಿಹಾರ ಹುಡುಕಿದ್ದು ಮತ್ತದೇ ಯೋರೋಪಿಯನ್ ಸಿದ್ಧಾಂತಗಳಲ್ಲಿ. ಇದೂ ಸಮಸ್ಯೆ ಖಂಡಿತಾ ಆ ಕಾಲದಲ್ಲಿಯೇ ಭಾರತೀಯ ಸಮಾಜದ ಕುರಿತ ಒಂದೂ ಸಾಲಿಡ್ ಸಿದ್ಧಾಂತ ರಚಿಸುವ ಎಲ್ಲಾ ಅವಕಾಶ ಮತ್ತು ಅರ್ಹತೆ ಇದ್ದರೂ ಆ ಕೆಲಸ ಆಗಲಿಲ್ಲ. ಕಾರಣ, ಇಂಗ್ಲೀಷ್ ಶಿಕ್ಷಣ ಮತ್ತು ಅದು ಸೃಷ್ಟಿಸಿದ ಬೌದ್ಧಿಕ ಚೌಕಟ್ಟು ಇರಬಹುದು ಇಲ್ಲಾ ಅಂಬೆಡ್ಕರ್ ಕಾಲಕ್ಕಾಗಲೇ ಭಾರತೀಯ ಜ್ಞಾನ ಎಂಬಂತೆ ರಚಿತವಾಗಿದ್ದ ಕಲೊನಿಯಲ್ ಇತಿಹಾಸವೂ ಕಾರಣವಿರಬಹುದು. . . (ಅಂಬೇಡ್ಕರ್ ತಮ್ಮ ವಾದಕ್ಕೆ ಬಳಸಿದ ಒದು ಇದನ್ನು ಸಮರ್ಥಿಸುತ್ತದೆ) ಇದರ ಅರ್ಥ, ಅಂಬೇಡ್ಕರ್ ಪೂಲೆ ಮುಖ್ಯ ಅಲ್ಲ ಅಂತ ಖಂಡಿತಾ ಅಲ್ಲ.ಅಂದಿನ ಕಾಲದಲ್ಲಿಯೇ, ಸಮಾಜಿಕ ಸಮಸ್ಯೆಗಳನ್ನು ಶೋಷಣೆಗಳನ್ನು ಅಂತ್ಯಂತ ಯಶಸ್ವಿಯಾಗಿ ಗುರುತಿಸಿ ವಿರೋಧಿಸಿದ ಅವರ ನಿಲುವು ಎಂದಿಗೂ ಪ್ರಶಂಶನೀಯ ಮತ್ತು ಮೌಲ್ವಿಕವಾದುದು.ಆದರೆ, ಅವುಗಳ ಪರಿಹಾರಕ್ಕೆ ಅವರೂ ತೋರಿದ ದಾರಿ ಯಶಸ್ವಿಯಾಗಲಿಲ್ಲ ಅದನ್ನೂ ಅಂಬೇಡ್ಕರ್ ಅವರೆ ಒಪ್ಪುತ್ತಾರೆ. . (ಕಲಿತ ದಲಿತರ ಕುರಿತ ತಮ್ಮ ಅಭಿಪ್ರಾಯ ಮತ್ತು ಚುನಾವಣೆಯ ಸೋಲಿನ ಸಮಯದಲ್ಲಿ) ಮತ್ತು ತಾನೂ ತಂದು ನಿಲ್ಲಿಸಿದ ರಥವನ್ನು ಮುಂದಕ್ಕೆ ತರುವ ಯುವಕರನ್ನು ಭವಿಷ್ಯದ ಭಾರತದಲ್ಲಿ ಕಾಣಬಯಸುತ್ತಾರೆ.
ಇದರ ಅರ್ಥ ತಮ್ಮ ಕಾಲದ ಸಂಶೋಧನೆಯನ್ನು ಮುಂದುವರೆಸುವ ಮಾದರಿ ಯುವಪಡೆ ಅವರ ಕನಸಾಗಿತ್ತು ನಿಜಕ್ಕೂ ಹಾಗೆ ಆಗಿದೆಯೇ?ಈಗಿರುವ ಕೆಲವರು ಅಥವಾ ಬಹುಪಾಲು ಜನರು ಅವರ ಅಮೂಲ್ಯ ಚಿಂತನೆಗಳನ್ನು ವಾದಗಳನ್ನು ಕೇವಲ ತಮ್ಮ ರಾಜಕೀಯ ನಿಲುವು ಗಟ್ಟಿಗಳಿಸಿಕೊಳ್ಳಲು ಡಿಫೇನ್ಸಿವ್ ಆಗಿ ಬಳಸುತ್ತಿದ್ದಾರೆ ಇದನ್ನು ನೀವು ಒಪ್ಪುತ್ತಿರ ಎಂಬುದು ನನ್ನ ಭಾವನೆ ಇನ್ನೂ ಸಂಶೋಧನೆ ಮಾಡಲೇ ಬೇಡಿ ಎಂಬ ಹೇರಿಕೆಗಳು ಬೇರೆ ಹೇರುತ್ತಿದ್ದಾರೆ.ನೀವೇ ಯೋಚಿಸಿ ಜಾತಿವ್ಯವಸ್ಥೆ ಇದೆ. ಎಂದೂ ಒಪ್ಪೊಕೊಂಡರೆ ಅದರ ಆಧಾರದ ಮೇಲೆ ದಲಿತರ ಕುರಿತು ಎನೆಲ್ಲಾ ಅಸಹ್ಯ ಹೇಳಿಕೆಗಳು ನೀಡಲ್ಪಟ್ಟಿವೆಯೋ ಅವೆಲ್ಲ ಸತ್ಯವೆ ಆಗಿ ಬಿಡುತ್ತವೆ. . . ಅಲ್ಲವೆ ಅಂದರೆ ದಲಿತರು ಕುಲಹಿನರು, ಕೊಳಕರು, ಸಂಸ್ಕಾರ ಹಿನರು ಚಂಡಾಲರು ಒಂದೇ ಮಾತಿನಲ್ಲಿ ಹೇಳುವುದಾರೆ ಮನುಷ್ಯಾಗಿ ಬದುಕುತ್ತಿರುವ ಪ್ರಾಣಿಗಳು ನಾಗರಿಕ ಸಮಾಜದಲ್ಲಿ ನಾಗರಿಕರಂತೆ ಬದುಕಲು ಅರ್ಹತೆ ಇಲ್ಲದವರು ಸ್ವಂತ ಬುದ್ದಿ ಇಲ್ಲದವರು ಪರಾವಲಂಬಿಗಳು ಅದ್ದರಿಂದಲೇ ಅವರು ಈ ಸಮಾಜದ ಮುಖ್ಯವಾಹಿನಿಯಿಂದ ದೂರವಿರಬೇಕು ಇತ್ಯಾದಿ ಇತ್ಯದಿ. . . ವಿವರಣೆಗಳೇ ಜಾತಿ ಶ್ರೇಣಿಕರಣದ ಕೊನೆಗೆ ಅವರನ್ನು ತಳ್ಳಲ್ಪಟ್ಟಿವೆ ಎಂಬ ವಿವರಣೆಗಳೂ ಸರಿಯೇ? ಸೊ ಕಾಲ್ಢ್ ಜಾತಿ ವ್ಯವಸ್ಥೆಯ ಸಿದ್ದಾಂತ ಇವೇ ಕಾರಣಗಳಿಗಾಗಿಯೇ ಅವರನ್ನು ತನ್ನ ಶ್ರೇಣಿಕರಣದ ಕೊನೆಯಲ್ಲಿ ಇಟ್ಟಿದೆ ಅಥವಾ ಹೊರಗೆ ಇಟ್ಟಿದೆ(ಇದಕ್ಕೆ ಸಾವಿರ ಆಧಾರಗಳು ಸಿಗುತ್ತವೆ). . ಜಾತಿ ವ್ಯವಸ್ಥೆ ಇದೆ ಮತ್ತು ಅದರಲ್ಲಿ ದಲಿತರೂ ಕೊನೆಯಲ್ಲಿ ಇದ್ದಾರೆ ಎಂದೂ ಸಾರಿ ಸಾರಿ ಹೇಳುವ ನೀವು ದಲಿತರೂ ಎಕೆ ಅಲ್ಲದ್ದಾರೆ ಎಂಬ ಜಾತಿ ಸಿದ್ದಾಂತದ ಮೇಲಿನ ಹೇಳಿಕೆಗಳನ್ನು ಒಪ್ಪಿದಂತೆಯೇ ಅಲ್ಲವೆ. . . . ಅದ್ದರಿಂದ ಇಂದೂ ದಲಿತ ಶೋಷಣೆಗೆ ತಮ್ಮಗಳ (ಜಾತಿ ಸಿದ್ದಾಂತ ಇದೆ ದಲಿತರು ಅಲ್ಲಿ ಕೆಳಗಿದ್ದಾರೆ ) ನಿಲುವು ಸಮರ್ಥನೆ ಒದಗಿಸುತ್ತಿಲ್ಲವೆ. . . .ನನ್ನ ಪ್ರಕಾರ ಜಾತಿ ವ್ಯವಸ್ಥೆ ಇದೆ ಅಂತ ವಾದಿಸುತ್ತಿರುವವರು ಹಾಗೆ ಅಂದುಕೊಳ್ಳಲೇ ಬೇಕು ಜಾತಿ ವ್ಯವಸ್ಥೆ ಅಂದರೆನೇ “ಶ್ರೇಣೀಕರಣ ಇತ್ತು” ಮತ್ತು “ಅದರಲ್ಲಿ ದಲಿತರು ಕೆಳಗಿದ್ದರು” ಎಂಬ ವೈಜ್ಞಾನಿಕ ವಿವರಣೆ ಇದನ್ನೂ ಅಲ್ಲಗಳೆಯಲೂ ಸಾಧ್ಯವೇ ಆಧಾರ ಸಮೇತ ವಿವರಿಸಿ. ಎಂಬ ಪ್ರಶ್ನೆಯನ್ನು ಹಾಕಿದೆ ಚರ್ಚೆ ಸಮಾಪ್ತಿಯಾಯಿತು. . . ನಂತರ ಮುಂದುವರಿದರೂ ಯಾವ ಉತ್ತಮ ಹೊಳಹುಗಳು ದೊರೆಯಲಿಲ್ಲ.
( ಪ್ರೊ.ರಾಜಾರಾಮ ಹೆಗಡೆ ದೇವನೂರರ ಲೇಖನಕ್ಕೆ ಪ್ರತಿಕ್ರಿಯಿಸಿದ್ದಾರೆ)
Posted in ದೇವನೂರು ಮಹಾದೇವ, ವಚನ ಸಂವಾದ
01 May 2013
ಸಂಶೋಧನೆ ಅಂದರೇನು? – ಒಂದು ಚರ್ಚೆ
“ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ ಶುರುವಾದಾಗ ಒಂದು ’ಅಕಾಡೆಮಿಕ್ ಚರ್ಚೆ’ಯ ನಿರೀಕ್ಷೆ ನಾಡಿನ ಸಂಶೋಧನಾ ವಿದ್ಯಾರ್ಥಿವಲಯದಲ್ಲಿತ್ತು.ಆದರೆ ಈ ಚರ್ಚೆ ಅಕಾಡೆಮಿಕ್ ಆಗುವುದಕ್ಕಿಂತಲೂ ಹೆಚ್ಚಾಗಿ ಪೊಲಿಟಿಕಲ್ ಚರ್ಚೆಯಾಗಿ ಮಾರ್ಪಟ್ಟಿದೆ.೨೧ ಸಾವಿರಕ್ಕೂ ಹೆಚ್ಚು ವಚನಗಳನ್ನು ಅಧ್ಯಯನ ಮಾಡಿದವರ ಜೊತೆ ೨೧ ವಚನಗಳನ್ನೂ ಸರಿಯಾಗಿ ಓದಿಕೊಳ್ಳದವರು ವಾದಕ್ಕಿಳಿಯುತಿದ್ದಾರೆ. ಗೂಗಲ್ ನಲ್ಲಿ ಸರ್ಚ್ ಮಾಡುವುದನ್ನೆ ’ರಿಸರ್ಚ್’ ಅಂದುಕೊಂಡಿರುವಂತಿದೆ ಕೆಲವರು. “ಸಂಶೋಧನೆ” ಅಂದರೇನು ಅನ್ನುವ ಕುತೂಅಲವನ್ನಿಟ್ಟುಕೊಂಡು ನಾನು ಸಿ.ಎಸ್.ಎಲ್.ಸಿ ತಂಡದವರ ಜೊತೆ ನಡೆಸಿದ ಮಾತುಕತೆಯಿದೆ ಇಲ್ಲಿದೆ ನೋಡಿ
ಸಾತ್ವಿಕ್ : ಸಂತೋಷ್ ಶೆಟ್ಟಿ, ಸಂಶೋಧನೆಗೆ ಹೈಪೋಥಿಸಿಸ್ ರಚಿಸಿಕೊಳ್ಳುವಾಗ ಜನರಿಗೆ ಬೇಕಾದ (ಜನಪ್ರಿಯ) ವಾದಗಳನ್ನು ಆರಿಸಿಕೊಳ್ಳಬೇಕೋ ಇಲ್ಲವೇ ಕಠಿಣವಾದರೂ ಸತ್ಯದ ಕಡೆ ಹೆಜ್ಜೆ ಹಾಕಬೇಕೋ? ಅಥವಾ ಇಂದಿನ ಸಂಶೋಧನೆಗಳು ಯಾವ ದಿಕ್ಕಿನಲ್ಲಿವೇ?
ಸಂತೋಷ್ ಶೆಟ್ಟಿ : ಸಾತ್ವಿಕ್ , ಜನರಿಗೆ ಬೇಕಾದ ಜನಪ್ರಿಯ ವಾದಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಮಾಡಲು ಏನಿದೆ? ಈಗಾಗಲೆ ಪ್ರಚಲಿತದಲ್ಲಿರುವ ವಾದವನ್ನು ಪುಷ್ಠೀಗೊಳಿಸಬೇಕೆಂಬ ಐಡಿಯಾಲಜಿಯ ಬೆನ್ನು ಹತ್ತಿದರೆ ಅಂತಹ ವಿಷಯಗಳನ್ನು ಆಯ್ಕೆ ಮಾಡಬಹುದು, ಹಾಗೆ ಮಾಡುವ ಮೂಲಕ ಚಲಾವಣೆಯಲ್ಲಿರುವ ವಾದವೇ ಸತ್ಯವೆಂದು ಕೆಲವಾರು ಫ್ಯಾಕ್ಡ್ ನ್ನು ಸೇರಿಸಬಹುದು. ಹೀಗೆ ಮಾಡುವುದರಿಂದ ಯಾವ ಸಂಶೋಧನೆಯೂ ಆಗುವುದಿಲ್ಲ, ಏಕೆಂದರೆ ಮೊದಲೇ ಹೇಳಿದಂತೆ ಸಂಶೋಧನೆ ಮಾಡಿ ಕಂಡುಕೊಳ್ಳುವಂತದ್ದು ಅಲ್ಲಿ ಏನೂ ಇರುವುದಿಲ್ಲ.ಇನ್ನೊಂದು ಮಾರ್ಗವೆಂದರೆ ಅಧ್ಯಯನ ಮಾಡಲು ಮೊದಲು ಅಧ್ಯಯನದ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಪರಿಶೀಲಿಸಿ ಅಲ್ಲಿಂದ ಸಮಸ್ಯೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಜನರು ಏನನ್ನು ಒಪ್ಪುತ್ತಾರೆ ಏನನ್ನು ತಿರಸ್ಕರಿಸುತ್ತಾರೆ ಎಂಬುದಕ್ಕಿಂತ ಆ ವಿಷಯದ ಕುರಿತು ಏನೇನು ಅಧ್ಯಯನಗಾಳಗಿವೆ ಎಂಬುದನ್ನು ಗಮನಿಸಿ ಅದಕ್ಕಿಂತ ಮುಂದೆ ಹೋಗುವ ಕಾರ್ಯವನ್ನು ಸಂಶೋಧನೆ ಮಾಡಬೇಕಾಗುತ್ತದೆ. ಇನ್ನು ಈಗಿರುವ ಸಂಶೋಧನೆಯ ಕುರಿತು ನಾನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಸಂಶೋಧನೆ ಮಾಡದೆ ಮತ್ತು ಸಂಶೋಧನೆಯನ್ನು ಅರ್ಥವೂ ಮಾಡಿಕೊಳ್ಳದೆ ಹಾಗೂ ಚರ್ಚೆಯನ್ನೂ ಮಾಡದೆ ಪ್ರತಿಕ್ರಿಯಿಸುವವರು ಮಾತ್ರ ಹೆಚ್ಚಾಗಿದ್ದಾರೆ. ಅವರ ಬಹುತೇಕ ಪ್ರಶ್ನೆಗಳು ನಿಜವಾಗಿಯೂ ತಿಳಿದುಕೊಳ್ಳಲು ಇರುವ ಹಂಬಲವನ್ನು ಸೂಚಿಸದೆ ಅವರ ಅಸಮಾಧಾನವನ್ನು ಹೊರಹಾಕುವುದನ್ನು ಸೂಚಿಸುತ್ತದೆ…
ಸಾತ್ವಿಕ್ : ಹಾಗಾದರೆ, ನೀವು ಹೇಳುವಂತೆ ಸಂಶೋಧನೆಯ ವಿಚಾರಗಳಿಗೂ ಸಾಮಾನ್ಯ ತಿಳುವಳಿಕೆಗೂ ವ್ಯತ್ಯಾಸವಿದೆ ಅಂತ ಆಯ್ತು. ಹಾಗಾದ್ರೆ ಸಂಶೋಧನೆ ಅಂದ್ರೆ ಒಂಥರಾ ಈ ಆಧ್ಯಾತ್ಮದ ಸತ್ಯದ ಹುಡುಕಾಟದ ಹಾಗೆ ಅಲ್ವಾ?
ಸಂತೋಷ್ ಶೆಟ್ಟಿ : ಸಾಮಾನ್ಯ ತಿಳುವಳಿಕೆ ಮತ್ತು ಸಂಶೋಧನೆಗೂ ನಿಜವಾಗಿಯೂ ವ್ಯತ್ಯಾಸವಿದೆ, ಅವೆರಡೂ ಒಂದೇ ಆದರೆ ಮತ್ತೆ ಹೇಳುತ್ತೇನೆ, ಸಂಶೋಧನೆ ಮಾಡುವುದರ ಫಲವೇನು? ಸಂಶೋಧನೆಯಲ್ಲಿ ತೊಡಗಿಕೊಂಡವರು ಅದನ್ನು ಯಾವ ರೀತಿಯಾದರೂ ನೋಡಬಹುದು, ಕೆಲವರಿಗೆ ಆಧ್ಯಾತ್ಮದ ಸಾಧನೆಯಂತೆ ತೋರಬಹದು, ಮತ್ತೆ ಕೆಲವರಿಗೆ ಆಳವಾದ ಅಧ್ಯಯನದಂತೆ ತೋರಬಹುದು, ಅದು ಸಂಶೋಧಕರ ಮೇಲೆ ಅವಲಂಬಿತವಾದುದು. ಆದರೆ ಒಂದಂತೂ ಸತ್ಯ ಸಂಶೋಧನೆ ಎಂಬುದು ಒಂದು ಸಂಗತಿಯ ಕುರಿತು ಇರುವ ಜ್ಞಾನವನ್ನು ಹೆಚ್ಚಿಸುವ ಅಥವಾ ಇರುವ ಜ್ಞಾನಕ್ಕೆ ಪರ್ಯಾಯವನ್ನು ಹುಡುಕುವ ಕೆಲಸ…
ಸಾತ್ವಿಕ್ : ಸಂಶೋಧಕನೊಬ್ಬ ತನ್ನ ಸಂಶೋಧನೆಯ ಮೂಲಕ ಜನಪ್ರಿಯ ಅಥವಾ ಸ್ಥಾಪಿತ ಹಿತಾಸಕ್ತಿಗೆ ವಿರುದ್ಧವಾದ ಫಲಿತಗಳನ್ನು ಹೇಳಬೇಕಾಗಿ ಬರುತ್ತದೆ. ಇದರಿಂದ ಸಂಶೋಧಕನ ವೈಯಕ್ತಿಕ ಚಾರಿತ್ರ್ಯಹರನವೂ ಆಗಬಹುದು. ಇದನ್ನೆಲ್ಲ ಸಂಶೋಧಕ ನಿಭಾಯಿಸುವುದು ಕಷ್ಟ ಅಲ್ವಾ? ಈ ತರಹದ ಕೆಸರು ಎರಚುವ ಕೆಲಸ ಬೇರೆ ದೇಶಗಳಲ್ಲೂ ಆಗುತ್ತಾ?
ಸಂತೋಷ್ ಶೆಟ್ಟಿ : ಇದು ಎಲ್ಲಾ ದೇಶ ಕಾಲಗಳಲ್ಲಿಯೂ ಇದ್ದೇ ಇರುತ್ತದೆ, ಜನಸಾಮಾನ್ಯರು ಅಂದುಕೊಂಡಿರುವುದಕ್ಕಿಂತ ಬೇರೆಯದನ್ನೇ ಹೇಳಿದರೆ ಚಾರಿತ್ರ‍್ಯಹರಣ ಆಗೇ ಆಗುತ್ತದೆ. ಅದಕ್ಕೂ ಮುಂದಿನ ಹಂತ ತಲುಪುವ ಸಾಧ್ಯತೆಗಳೂ ಇರುತ್ತವೆ. ಗೆಲಿಲಿಯೋ ಭೂಮಿಕೇಂದ್ರಿತ ತಿಳುವಳಿಕೆಗೆ ಪರ್ಯಾಯವಾಗಿ ಸೂರ್ಯಕೇಂದ್ರಿತ ಸಿದ್ಧಾಂತವನ್ನು ಪ್ರತಿಪಾದಿಸಿದ. ಆದರೆ ಭೂಮಿಕೇಂದ್ರಿತ ತಿಳುವಳಿಕೆಯನ್ನ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಪ್ರಬಲ ಸಮುದಾಯಗಳು ಅಂತಿಮವಾಗಿ ಗೆಲಿಲಿಯೋ ಗೆಲಿಲಿಯನ್ನು ಏನು ಮಾಡಿದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಂದು ಗೆಲಿಲಿ ಹೇಳಿರುವುದು ಜಗತ್ತಿನ ಕುರಿತ ಸತ್ಯ ಎಂಬುದರಲ್ಲಿ ಯಾರಿಗೂ ಅನುಮಾನವಿರಲಿಕ್ಕಿಲ್ಲ.
ಸಾತ್ವಿಕ್ : ಹಾಗಾದ್ರೆ ತನಗೆ ವೈಯುಕ್ತಿಕವಾಗಿ ಹಾಗೂ ಗೆಲಿಲಿಯ ಹಾಗೆ ದೈಹಿಕವಾಗಿ ದೌರ್ಜನ್ಯಗಳನ್ನು ಸಮಾಜದಿಂದ ಪಡೆಯುವುದಾದರೆ ಆ ಸಮಾಜಕ್ಕೆ ಸಂಶೋಧಕ ತನ್ನ ಸಂಶೋಧನೆಯ ಫಲಗಳನ್ನು ನೀದುವ ಕೆಲಸ ಯಾಕೆ ಮಾದಬೇಕು?
ಶಂಕರ್ ಎನ್.ಎಸ್ : ಸಂಶೋಧಕನು ಸಾಮಾಜಿಕ ಸಮಸ್ಯೆಗೂ ಮತ್ತು ಸಂಶೋಧನಾ ಸಮಸ್ಯೆಗೂ ಇರುವ ವ್ಯತ್ಯಾಸವನ್ನು ಗುರುತಿಸಬೇಕು. ಸಾಮಾಜಿಕ ಸಮಸ್ಯೆಯು ಒಂದು ವಿದ್ಯಮಾನವಾಗಿರುವತ್ತದೆ. ಉದಾಹರಣೆಗೆ ಬಡತನ, ಶೋಷಣೆ ಇತ್ಯಾದಿ. ಇಂತಹ ವಿದ್ಯಮಾನಗಳ ಬಗ್ಗೆ ಸಾಮಾಜಿಕ ವಿಜ್ಞಾನಿಗಳು ಈಗಾಗಲೇ ವಿವರಣೆಗಳನ್ನು ನೀಡಿರುತ್ತಾರೆ. ಇಂತಹ ವಿವಣೆಗಳೇ ಥಿಯರಿಗಳು. ಇಂತಹ ವಿದ್ಯಮಾನದ ಬಗ್ಗೆ ಈಗಾಗಲೇ ಇರುವ ಥಿಯರಿಗಳು ನೀಡಿದ ವಿರವಣೆಗಳಲ್ಲಿರುವ ಸಮಸ್ಯೆಯನ್ನು ಗುರುತಿಸುವ ಮೂಲಕ ಸಂಶೋಧನೆಯ ಸಮಸ್ಯೆಯನ್ನು ತಿಳಿದುಕೊಳ್ಳಲಾಗುವುದು. ಆದರೆ ಇಂತಹ ಪ್ರಾಥಮಿಕ ಅಂಶಗಳೇ ನಮಗೆ ತಿಳಿದಿರುವುದಿಲ್ಲ.
ಸಂತೋಷ್ ಶೆಟ್ಟಿ : ಒಬ್ಬನಿಗೆ ಸತ್ಯ ಅಂತ ಅನ್ನಿಸಿದ್ದನ್ನು ಹೇಳಬೇಕಾಗುತ್ತದೆ, ಸತ್ಯಕ್ಕೆ ಯಾರ ಅಂಜಿಕೆ ಭಯವೂ ಇಲ್ಲ, ನಾವು ಮಾಡದಿದ್ದರೆ ಮತ್ಯಾರಾದರೂ ಮಾಡಿಯೇ ಮಾಡುತ್ತಾರೆ. ಮತ್ತೆ ಸಂಶೋಧನೆಯನ್ನ ಜಗತ್ತಿಗೆ ಏನೋ ಸತ್ಯ ಹೇಳುತ್ತೇನೆಂದು ಹೊರಡುವ ಅಗತ್ಯವೂ ಇಲ್ಲ. ಅದರ ಬದಲಿಗೆ ಎಲ್ಲಿ ಸಮಸ್ಯೆ ಎಂದೆನೆಸುತ್ತದೆಯೋ ಅಲ್ಲಿಂದ ಸಂಶೋಧನೆ ಪ್ರಾರಂಭವಾಗುತ್ತದೆ, ಅದರ ಮೂಲಕ ಬರುವ ಫಲಿತಾಂಶಗಳು ಏನಾದರೂ ಆಗಿರಬಹುದು.
ಸಾತ್ವಿಕ್ : ಸಂಶೋಧನೆ ಎಂಬುದು ಶೂನ್ಯದಲ್ಲಿ ನಡೆಯುವ ಪ್ರಕ್ರಿಯೆಯೇನು ಅಲ್ಲ. ಈಗಾಗಲೆ ನಮ್ಮ ತಲೆಯಲ್ಲಿ ಒಂದು ಐಡಿಯಾಲಜಿ ಎಂಬುದು ಇರುತ್ತದೆ. ಇದರ ಪರಿಣಾಮ ಸಂಶೋಧನೆಯ ಮೇಲೆ ಆಗುವುದಿಲ್ಲವೇ? ಸಾಮಾಜಿಕ ಸಮಸ್ಯೆಗಳು ಸಂಶೋಧನೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರದೇ ಇರುತ್ತವಯೇ?
ಸಂತೋಷ್ ಶೆಟ್ಟಿ : ಐಡಿಯಾಲಜಿ ಮತ್ತು ಸಿದ್ಧಾಂತ ಎರಡೂ ಒಂದೇ ಅಲ್ಲ. ಐಡಿಯಾಲಜಿಯು ಬೇರೆ ಬೇರೆ ಸಿದ್ಧಾಂತಗಳಿಂದ ಮತ್ತು ಹಲವಾರು ವಿಚಾರಗಳಿಂದ ಐಡಿಯಾಗಳನ್ನು ತೆಗೆದುಕೊಂಡು, ಒಂದು ರೀತಿಯ ಚಿಂತನೆಯನ್ನು ರೂಪಿಸಿಕೊಳ್ಳುವುದು. ಆದರೆ ಸಂಶೋಧನೆಯ ಮೂಲಕ ಸಿದ್ಧಾಂತ ರೂಪಿಸುವುದು ಬೇರೆಯದೆ ಕೆಲಸ. ಐಡಿಯಾಲಜಿಯು ಪ್ರಸ್ತುತದಲ್ಲಿರುವ ಜ್ಞಾನವನ್ನೇ ಅವಲಂಬಿಸಿ ಮಾರ್ಗದರ್ಶನವಾಗಿ ಕೆಲಸಮಾಡುತ್ತಿರುತ್ತದೆ, ಮತ್ತು ಹೊಸ ಜ್ಞಾನಕ್ಕೆ ಅವಕಾಶವನ್ನು ನೀಡುವುದಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಸಿದ್ಧಾಂತಗಳು ಸದಾ ಇರುವ ಜ್ಞಾನವನ್ನು ಒರೆಗೆ ಹಚ್ಚಿ ವಿದ್ಯಮಾನದ ಕುರಿತ ವಿವರಣೆಯನ್ನು ಹೆಚ್ಚೆಚ್ಚು ಸ್ಪಷ್ಟಗೊಳಿಸುತ್ತಾ ಹೋಗುತ್ತದೆ. ಹಾಗಾಗಿ ಐಡಿಯಾಲಜಿಯನ್ನು ಇಟ್ಟುಕೊಂಡು ಸಂಶೋಧನೆ ಮಾಡುವುದು ಎಂದರೆ ಇರುವ ಜ್ಞಾನವನ್ನೇ ಪುನರುತ್ಪಾದನೆ ಮಾಡುವುದು ಎಂದರ್ಥ. ಇನ್ನೂ ಸಾಮಾಜಿಕ ಸಮಸ್ಯೆಗಳು ಸಂಶೋಧನೆಯ ಮೇಲೆ ಪ್ರಭಾವ ಬೀರಬಹುದು, ಆದರೆ ಸಂಶೋಧನಾ ಸಮಸ್ಯೆ ಮತ್ತು ಸಾಮಾಜಿಕ ಸಮಸ್ಯೆ ಎರಡೂ ಒಂದೇ ಅಲ್ಲ, ಅವೆರಡಕ್ಕೂ ವ್ಯತ್ಯಾಸವಿದೆ.. ಸಾತ್ವಿಕ್
ಸಾತ್ವಿಕ್ : ಈಗ ಸಂಶೋಧನಾ ಆಕರಕ್ಕೂ ನನಗೂ ಒಂದು ಸಂಬಂಧವಿರುತ್ತದೆ ಅಂದುಕೊಳ್ಳಿ. ಸುಮ್ಮನೆ ಉದಾಹರಣೆಗೆ ಹೇಳುವುದಾದರೆ ನಾನು ಲಿಂಗಾಯತನಾಗಿದ್ದು ವಚನಗಳ ಬಗ್ಗೆ ಸಂಶೋಧನೆಗೆ ಇಳಿದರೆ ನಾನು ಈ ಐದೆಂಟಿತಿಯಿಂದ ಹೇಗೆ ಅಂತರ ಕಾದುಕೊಳ್ಳುವುದು?
ಶಂಕರ್ ಎನ್.ಎಸ್ : ಲಿಂಗಾಯಿತ, ಬ್ರಾಹ್ಮಣ ಎಂಬ ಜಾತಿಯ ಗುರುತುಗಳು ಸಂಶೋಧಕನಿಗೆ ಮುಖ್ಯವಲ್ಲ, ಬದಲಿಗೆ ಸಂಶೋಧಕನಿಕೆ ಕೆಲಸು ಕೌಶಲ್ಯಗಳ ಅವಶ್ಯಕತೆ ಇರುತ್ತದೆ. ಅಂಹತ ಕೌಶಲ್ಯಗಳನ್ನು ಕರಗತವನ್ನು ಮಾಡಿಕೊಂಡವರು ಸಂಶೋಧಕರು ಎನಿಸಿಕೊಳ್ಳುತ್ತಾರೆ. ಅಂತಹ ಕೌಶಲ್ಯಗಳೆಂದರೆ 1. ಒಂದು ವಿದ್ಯಾಮಾನದ ಕುರಿತು ಈಗಾಗಲೇ ಇರುವ ಪುಸ್ತಕಗಳು ಮತ್ತ…ಮತ್ತಷ್ಟು ನೋಡಿರಿ
ಸಂತೋಷ್ ಶೆಟ್ಟಿ : ಒಂದು ಸಮುದಾಯದ ಸದಸ್ಯನಾಗಿದ್ದುಕೊಂಡು, ಆ ಸಮುದಾಯದ ಕುರಿತು ನೀಡಿರುವ ವಿವರಣೆ ಒಂದೊಮ್ಮೆ ಆ ವ್ಯಕ್ತಿಯ ಅನುಭವಕ್ಕೆ ವ್ಯತಿರಿಕ್ತವಾಗಿದ್ದರೆ ಅಲ್ಲಿ ಸಮಸ್ಯೆ ಏಳುತ್ತದೆ, ಆಗ ಆ ಸಮಸ್ಯೆಯನ್ನು ಅಧ್ಯಯನದ ಸಮಸ್ಯೆಯನ್ನಾಗಿ ಮಾರ್ಪಡಿಸಿಕೊಂಡು ಸಂಶೋಧನೆ ನಡೆಸಬಹುದು. ಈಗ ನೋಡಿ ಭಾರತೀಯನಾಗಿದ್ದುಕೊಂಡು ಭಾರತದ ಬಗ್ದೆ ಸಂಶೋಧನೆ ನಡೆಸಿದರೆ ಆ ಅಸ್ಮಿತೆ ಹಿಂದೆ ಬರುವುದಿಲ್ಲವೇ? ಎಂದು ಕೂಡ ಕೇಳಬಹುದು, ಅಂತಹ ಅಸ್ಮಿತೆ ಇದ್ದೊಡನೆ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಐಡಿಯಾಲಜಿಯ ಮೊರೆ ಹೋಗಬೇಕಿಲ್ಲ, ಆ ಸಮಸ್ಯೆಯನ್ನು ಅಧ್ಯಯನದ ಸಮಸ್ಯೆಯನ್ನಾಗಿ ಮಾರ್ಪಡಿಸಿ ಸಂಶೋಧನೆ ಮಾಡಬಹುದು.
ಸಾತ್ವಿಕ್ : ಶಂಕರ್ ಎನ್.ಎಸ್, ಸಾಮಾಜಿಕ ಪರಿಪ್ರೇಕ್ಷೆಗಳಿಂದ ವ್ಯಕ್ತಿಯೊಬ್ಬ ಬಿಡಿಸಿಕೊಳ್ಳುವುದು ನೀವು ಹೇಳಿದಷ್ಟು ಸುಲಭ ಸಾಧ್ಯವಲ್ಲ. ಹೀಗಾಗಿಯೇ ಇವತ್ತಿನ ಕೆಲವು ಸಂಶೋಧನೆಗಳು ‘ಜಾತಿಯಲ್ಲಿರುವ ಸಾಂಸ್ಕೃತಿಕ ವಿಶೇಷಗಳನ್ನು ಇಲ್ಲವೇ ಅನನ್ಯತೆಗಳನ್ನು ಹೇಳುವ ಮೂಲಕ ತನ್ನ ಜಾತಿಯ ಐಡೆಂಟಿಟಿಗೆ ಹೊಸದೊಂದು ಕಾಯಕಲ್ಪ ನೀಡುವ ಕೆಲಸಕಷ್ಟೇ ನಿಂತು ಬಿಟ್ಟಿವೆ. ಅಥವಾ ಈಗಾಗಲೇ ಸಿದ್ಧ ಮಾದರಿಯ ವಾದಗಳಿಗೆ ಸಾಮಾಜಿಕ ಸಂಗತಿಗಳನ್ನು ಜೋದಿಸುವುದನ್ನೇ ಸಂಶೋಧನೆ ಎಂದು ಕರೆಯುವುದು ಕಂಡು ಬರುತ್ತಿದೆ. ಈ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿ.
ಶಂಕರ್ ಎನ್.ಎಸ್ : ಸಾತ್ವಿಕ್ . ಅವರೆ ಸಂಶೋಧನೆಯು ಕಲಿಕೆಗೆ ಸಂಬಂಧಿಸಿದ್ದು, ಯಾವ ದೇವರೋ ವರವಾಗಿ ಕೊಟ್ಟಿದ್ದಲ್ಲ. ಹಾಗಾಗಿ ಒಬ್ಬ ಸಂಶೋಧಕನಿಗೆ ಸಂಶೋಧನೆಗೆ ಬೇಕಾದ ಯಾವ ಅಂಶಗಳನ್ನು ಕಲಿಯಬೇಕು ಮತ್ತು ಯಾವ ಅಂಶಗಳನ್ನು ಕಲಿಯಬಾರದು ಎಂಬುದರ ಬಗ್ಗೆ ತಿಳುವಳಿಕೆಯು ಇರಬೇಕಾಗುತ್ತದೆ. ಆದ್ದರಿಂದ ಸಂಶೋಧಕನು ಜಾತಿಯ ಅನನ್ಯತೆಯಿಂದ ಬಿಡಿಸಿಕೊಳ್ಳಬೇಕೆಂಬ ವಿಷಯವೇ ಇಲ್ಲಿ ಅಪ್ರಸ್ತುತ. ಅಂದರೆ ಒಬ್ಬ ಸಂಶೋಧಕನು ತಾನು ಇಂತಹ ಜಾತಿಯವನು ಹಾಗಾಗಿ ತನ್ನ ಸಂಶೋಧನೆಯಿಂದ ಇಂತಹ ತೀರ್ಮಾನಗಳನ್ನೇ ತೆಗೆದುಕೊಳ್ಳಬೇಕೆಂದು ಹೊರಟರೆ ಅದು ಸಂಶೋಧನೆ ಎನಿಸುವುದಿಲ್ಲ, ಬದಲಿಗೆ ಅಂತಹ ಸಂಶೋಧನೆಯು ಪ್ರಿಟಿಶಿಯೊ ಪ್ರಿನಿಕಿಪಿ ಎಂಬ ತಾರ್ಕಿಕ ದೋಷದಿಂದ ಕೂಡಿದ್ದಾಗಿರುತ್ತದೆ. ಪ್ರಿಟಿಶಿಯೊ ಪ್ರಿನಿಕಿಪಿ ಎಂದರೆ ಸಂಶೋಧನೆಯಿಂದ ಹೊರಬೀಳಬೇಕಾಗಿದ್ದ ಫಲಿತಾಂಶವನ್ನು ಮುಂಚೆಯೇ ತೀರ್ಮಾನಿಸಿಕೊಂಡು ಸಂಶೋಧನೆಗೆ ತೊಡಗುವುದು. ಅಸಲಿಗೆ ಅಂತಹ ಸಂಶೋಧನೆಯು ಸಂಶೋಧನೆಯೇ ಅಲ್ಲ. ಜೊತೆಗೆ ಮುಂಚೆಯೇ ತೀರ್ಮಾನಿಕೊಂಡ ಫಲಿತಾಂಶಕ್ಕೂ ಹೈಪೋಥೀಸಿಸ್ ಗೂ ವ್ಯತ್ಯಾಸವಿದೆ. ಅಂದರೆ ಒಬ್ಬ ಸಂಶೋಧಕನು ಹೈಪೋಥೀಸಿಸ್ ಇಟ್ಟುಕೊಂಡು, ಅದನ್ನು ಪರೀಕ್ಷೆ ಮಾಡುವಾಗ ಸಿಗುವ ಆಧಾರಗಳು ಅಂತಹ ಹೈಪೋಥೀಸಿಸ್ ಸುಳ್ಳು ಎಂದು ದೃಢಪಡಿಸಿದರೆ, ಅಂತಹ ಹೈಪೋಥೀಸಿಸ್ ಅನ್ನು ಮಾರ್ಪಡಿಸಬೇಕಾಗುತ್ತದೆ. ಅಂತಹ ಬದಲಾವಣೆಯನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಮಾತ್ರ ಕಾಣಲು ಸಾಧ್ಯ.
ಸಾತ್ವಿಕ್ : ಪ್ರಿಟಿಶಿಯೊ ಪ್ರಿನಿಕಿಪಿ ಇದರ ಇನ್ನಷ್ಟು ಮಾಹಿತಿ ನೀಡಿ.. ಯಾಕಂದರೆ ಈ ರೀತಿಯ ಸಂಶೋಧನೆಗಳೆ ಹೆಚ್ಚು ಎನಿಸುತ್ತಿದೆ ಶಂಕರ್ ಎನ್.ಎಸ್
ಶಂಕರ್ ಎನ್.ಎಸ್ : ಹೆಚ್ಚಿನ ಮಾಹಿತಿಗೆ ನೋಡಿ:
1. http://en.wikipedia.org/wiki/Begging_the_question ;
2. http://philosophy.lander.edu/logic/circular.html ;
3. http://courses.csusm.edu/fallacies/petitio.htm ;
4. http://www.thefreedictionary.com/petitio+principii etc.
Begging the question – Wikipedia, the free encyclopedia
en.wikipedia.org
ಸಾತ್ವಿಕ್ : ಥ್ಯಾಂಕ್ಯು ಶಂಕರ್. ಈಗ ನಮ್ಮ ಸಮಾಜ ವಿಜ್ನಾನದ ಸಂಶೋಧನೆಗಳು ಪಶ್ಚಿಮ ಪ್ರಣೀತವಿಚಾರಗಳಿಂದ ಪ್ರೇರಿತವಾಗಿವೆ ಎನ್ನುತ್ತಾರೆ ಬಾಲು ಅವರು. ಈ ಸಂಶೋಧನೆ ಎನ್ನುವುದೇ ಪಶ್ಚಿಮ ಪ್ರಣಿತ ಕಲ್ಪನೆ ಅಲ್ಲವೇ?
ಶಂಕರ್ ಎನ್.ಎಸ್ : ಈ ಸಂಶೋಧನೆ ಎಂದರೆ ಯಾವುದು?
ಸಾತ್ವಿಕ್ : ಸಂಶೋಧನೆ ಎನ್ನುವ ಪ್ರಕ್ರಿಯೆ .
ಷಣ್ಮುಖ ಆರ್ಮುಗಂ : ಪ್ರಿಟಿಶಿಯೊ ಪ್ರಿನಿಕಿಪಿ ಎಂದರೆ ವಾಸ್ತವ ವೆಂದು ತೋರಿಸದೇ ಇರುವ ಒಂದು ವಾದವನ್ನೇ ಆಧಾರವಾಗಿಟ್ಟುಕೊಂಡು ಮತ್ತೊಂದು ವಾದವನ್ನು ಕಟ್ಟುವುದು. ಉಧಾ: ಭಾರತದಲ್ಲಿ ಜಾತಿವ್ಯವಸ್ತೆ, ಪುರೋಹಿತಶಾಹಿ, ವೈಧಿಕ/ಹಿಂಧೂ ರಿಲಿಜನ್ ಗಳಿವೆ/ಇತ್ತು ಎನ್ನುವ ವಾದವನ್ನು ನಂಬಿಕೊಂಡು ವಚನಗಳು ಜಾತಿವ್ಯವಸ್ಥೆ ವಿರುದ್ಚದದ ಚಳುವಳಿ ಎನ್ನುವ ವಾದ ಈ ಪ್ರಿಟಿಶಿಯೊ ಪ್ರಿನಿಕಿಪಿ ಗೆ ಅತ್ಯುತ್ತಮ ಉಧಾಹರಣೆ.
ಶಂಕರ್ ಎನ್.ಎಸ್ : ವಿಜ್ಞಾನಗಳು ಸೃಷ್ಟಿಯಾದುದು ಪಶ್ಚಿಮದಲ್ಲಿ ಎಂದರೆ ತಪ್ಪಾಗಲಾರದು. ಅಂತಹ ವಿಜ್ಞಾನಗಳು ನೈಸರ್ಗಿಕ ವಿದ್ಯಮಾನಗಳ ಕುರಿತ ವೈಜ್ಞಾನಿಕ ವಿವರಣೆಗಳನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಆದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಕುರಿತ ವೈಜ್ಞಾನಿಕ ಅಧ್ಯಯನಗಳನ್ನು ಮಾಡಲು ಇವು ವಿಫಲವಾಗಿವೆ. ಏಕೆಂದರೆ ಬಾಲಗಂಗಾಧರ ಅವರು ಹೇಳಿದಂತೆ ಇಂದಿನ ಸಮಾಜ ವಿಜ್ಞಾನಗಳು ಕ್ರಿಶ್ಚಿಯನ್ ಥಿಯಾಲಜಿಯ ಅಂಶಗಳನ್ನು ಸೆಕ್ಯುಲರ್ ರೂಪದಲ್ಲಿ ಪುನರ್ ಪಟಿಸುವುದಕ್ಕೆ ಸೀಮಿತವಾಗಿವೆ. ಹಾಗೆಂದ ಮಾತ್ರಕ್ಕೆ ಇಂತಹ ಸಾಂಸ್ಕೃತಿ ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಅಸಾಧ್ಯ ಎಂದಲ್ಲ, ಬದಲಿಗೆ ಇಂತಹ ವಿದ್ಯಮಾನಗಳ ಕುರಿತು ಚರ್ಚೆಯನ್ನು ತಾರ್ಕಿಕವಾಗಿ ಮತ್ತು ಅನುಭವಾತ್ಮಕವಾಗಿ ಭಾರತದ ಮಹಾನ್ ಪುರುಷರು ಮಾಡಿದ್ದಾರೆ. ಉದಾಹರಣೆಗೆ ಬುದ್ಧ, ಶಂಕರ, ಬಸವ, ಅಲ್ಲಮ, ರಾಮಕೃಷ್ಣ ಪರಮಾಂಸರು ಇತ್ಯಾದಿ…
ಷಣ್ಮುಖ ಆರ್ಮುಗಂ : ಜಾತಿವ್ಯವಸ್ತೆ, ಪುರೋಹಿತಶಾಹಿ, ವೈದಿಕ/ಹಿಂದೂ ರಿಲಿಜಿನ್ ಇದೆ/ಇತ್ತು ಎಂದು ತೋರಿಸಲು or ಎನ್ನುವ ವಾದವನ್ನು ಕಟ್ಟಲು ವಚನಗಳು ಜಾತಿವಿರುದ್ದ ಚಳುವಳಿಯಾಗಿತ್ತು ಎನ್ನುವ ವಾದವನ್ನು ಆದರಿಸುವುದು. ಅಂದರೆ ”ಈ ವಾದವನ್ನು ಕಟ್ಟಲು ‘ಆ’ ವಾದವನ್ನು ಆದರಿಸುವುದು; ಮತ್ತು ‘ಆ’ ವಾದವನ್ನು ಕಟ್ಟಲು ‘ಈ’ ವಾದವನ್ನು ಆದರಿಸುವುದು. ಇದನ್ನು ‘ವಿಷಿಯಸ್ ಸರ್ಕಲ್’ (ಒಂದು ವಿಷವರ್ತುಲ ಎಂದ ಹಾಗೆ) ಎನ್ನುತ್ತಾರೆ.
ಸಾತ್ವಿಕ್ : ಷಣ್ಮುಖ ಆರ್ಮುಗಂ ಸರ್ ನೀವು ಹೇಳಿದ್ದು ಸಂಸ್ಕೃತಿ ಕುರಿತ ಸಂಶೋಧನೆಯ ಮಾದರಿಗಳಿಗೆ ಸರಿ. ಅದಲ್ಲದೇ ಇತರೆ ಸಮಾಜ ವಿಜ್ನಾನದ ಶಾಖೆಗಳ ವಿಚಾರದಲ್ಲಿ ಈ ಅಂಶವನ್ನು ಹೇಗೆ ಅನ್ವಯಿಸಬಹುದು? ಉದಾಹರಣೆಗೆ ಪತ್ರಿಕೋದ್ಯಮದ ಒಂದು ಸಂಶೋಧನೆ.
ಷಣ್ಮುಖ ಆರ್ಮುಗಂ : ಸಂಸ್ಕೃತಿ ಕುರಿತ ಚಿಂತನೆ ಮತ್ತು ಸಮಾಜ ಕುರಿತ ಚಿಂತನೆಗಳಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಸಾಮಾಜಿಕ ಜಗತ್ತಿನ ಕುರಿತ ಇರುವ ವಿವರಣೆಗಳೇ ಸಮಾಜ ವಿಜ್ಞಾನಗಳಾಗಿವೆ. ಸಂಸ್ಕೃತಿಗಳು ಒಂದು ಸಮಾಜದಲ್ಸಲಿರುವ ಇರುವ ಕಲಿಕಾ ಪ್ರಕ್ರಿಯೆ ಎನ್ನುತ್ತಾರೆ ಬಾಲು. ಯೂರೂಪು ಮತ್ತು ಏಷ್ಯಾ/ಭಾರತ ಸಮಾಜದಲ್ಲಿ ವ್ಯತ್ಯಾಸವೇ ಈ ಕಲಿಕಾ ಪ್ರಕ್ರಿಯೆಲ್ಲಿರುವ ವ್ಯತ್ಯಾಸ. ಹಾಗಾಗಿ, ಸಮಾಜ ವಿಜ್ಞಾನಗಳ ಕುರಿತ ವೈಜ್ಞಾನಿಕ ಸಂಶೋಧನೆಗಳೇ ಸಂಸ್ಕೃತಿ ಅಧ್ಯಯನಕ್ಕೂ ಅನ್ವಯವಾಗುತ್ತದೆ.
ಪತ್ರಿಕೋಧ್ಯಮವೂ ಸಹ ಸಮಾಜದ ಓರೆ ಕೋರೆಗಳ ಕುರಿತು ವರಧಿ ಸಲ್ಲಿಸುವಾಗ ಹಾಗೆಯೇ ಸಾಮುದಾಯಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಾದಾಗ ಇದೇ ರೀತಿಯ ವೈಜ್ಞಾನಿಕ ಸಿದ್ದಾಂತಗಳನ್ನು ಬಳಸುವುದು ಅಥವಾ ಬೆಳಸುವುದು ಅನಿವಾರ್ಯ. ಆದರೆ ಇಂದು ಬಹುತೇಕ ಪತ್ರಿಕೋದ್ಯ ಸಂಶೋಧನೆಗಳು ಒಂದಲ್ಲಾ ಒಂದು ಐಡಿಯಾಲಜಿಯ ಬಾಗವಾಗಿ ನಡೆಯುವುದರಿಂದ ವಾಸ್ತವಕ್ಕಿಂತ ವ್ಯತಿರಿಕ್ತವಾದ ಐಡಿಯಾಲಜಿಗಳ ಘೋಷಣೆಗಳು ಅಥವಾ ಅದಕ್ಕೆ ಪೂರಕವಾದ ಫ್ಯಾಕ್ಟ್ ಗಳಷ್ಟೇ ಅಲ್ಲಿ ಪ್ರದರ್ಶಿಸಲ್ಪಡುತ್ತವೆ.
ಸಾತ್ವಿಕ್ : ಸರ್, ಮತ್ತೊಂದು ವಿಷಯ ವಿವಿಗಳಲ್ಲಿ ಹರಿದಾಡುತ್ತಿರುತ್ತದೆ. ನಾವು ಇದಿಗ ಬಳಸುತ್ತಿರುವ ವೈಧಾನಿಕತೆಗಳು ಹಳೆಯ ಮಾದರಿಯವು ಅಂತ. ಇದು ನಿಜವೇ? ಸಂಶೋಧನಾ ವಲಯದಲ್ಲಿ ಇತ್ತಿಚೆಗೆ ಆಗಿರುವ ಬದಲಾವನೆಗಳೇನು?
ಶಂಕರ್ ಎನ್.ಎಸ್ : ಜಾತಿಯ ಅನನ್ಯತೆಯು ಕೇವಲ ಸಂಶೋಧಕರಿಗೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಇಂದಿನ ಶಿಕ್ಷಿತರಲ್ಲೂ ಇದೆ. ಶಿಕ್ಷಿತರಲ್ಲಿರುವ ಈ ಜಾತಿಯ ಅನನ್ಯತೆಯ ಅಂಶವನ್ನು ಕ್ಷೇತ್ರಕಾರ್ಯ ಮಾಡುವಾಗ ತಿಳಿದುಕೊಂಡೆನು: 1. ಒಂದು ಸರ್ಕಾರಿ ಕಛೇರಿಯಲ್ಲಿ ಇರುವ ಬ್ರಾಹ್ಮಣ ಅಧಿಕಾರಿಯು, ಅದೇ ಕಛೇರಿಯಲ್ಲಿರುವ ಅಸ್ಪೃಶ್ಯ ಅಟೆಂಡರಿಗೆ ತನ್ನ ಪಾತ್ರೆಯನ್ನು ಮುಟ್ಟಿಸುವುದರಲ್ಲಿ ತಪ್ಪಿಲ್ಲ ಎಂದೂ ಗೊತ್ತಿದ್ದರೂ ಮುಟ್ಟಿಸುತ್ತಿರಲಿಲ್ಲ. ಏಕೆಂದು ಆ ಪ್ರಶ್ನಿಸಿದಾಗ, ಈ ಅಸ್ಪೃಶ್ಯ ವ್ಯಕ್ತಿಯು ತನ್ನ ಪಾತ್ರೆಗಳನ್ನು ಮುಟ್ಟಿದರೆ, ತನ್ನ ಬ್ರಾಹ್ಮಣ್ಯ ಹಾಳಾಗುತ್ತದೆ ಎಂದು ಉತ್ತರವನ್ನು ನೀಡಿದರು. ಆದರೆ ಪಾತ್ರೆ ಮುಟ್ಟುವುದರಿಂದ ಬ್ರಾಹ್ಮಣರ ಬ್ರಾಹ್ಮಣ್ಯ ಹಾಳಾಗುವುದಿಲ್ಲ ಎಂಬ ಅರಿವು ಆ ಬ್ರಾಹ್ಮಣನಿಗೆ ಇರಲಿಲ್ಲ. 2. ಅದೇ ರೀತಿ ಒಬ್ಬ ದಲಿತ ಚಳುವಳಿಕಾರರು, ತನ್ನ ಜಾತಿಗೆ ಸೇರಿದ ಒಬ್ಬ ಬಾಲಕನ ಸಮಸ್ಯೆಯ ಬಗ್ಗೆ ಹೇಳುತ್ತಾರೆ. ಅದೇನೆಂದರೆ ‘ಅಸ್ಪೃಶ್ಯ’ ವಿದ್ಯಾರ್ಥಿಯು ಕಾಲೇಜಿಗೆ ಹೋಗುವಾಗ ತನ್ನ ಊರಿನವರೇ ಆದ ಲಿಂಗಾಯಿತ ಜಾತಿಗೆ ಸೇರಿದ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದನಂತೆ, ಇದು ಆ ವಿದ್ಯಾರ್ಥಿನಿಗೆ ಸರಿ ಎನಿಸಿಲಿಲ್ಲವಂತೆ, ಅದನ್ನು ಗಮನಿಸಿಯೂ, ಆ ‘ಅಸ್ಪೃಶ್ಯ’ ಜಾತಿಗೆ ಸೇರಿದ ವಿದ್ಯಾರ್ಥಿಯು ಲಿಂಗಾಯಿತ ಜಾತಿಗೆ ಸೇರಿದ ವಿದ್ಯಾರ್ಥಿನಿಯನ್ನು ಚುಡಾಯಿಸುವುದನ್ನು ಮುಂದುವರೆಸುತ್ತಾನಂತೆ. ಹಾಗೂ ಇದರಲ್ಲಿ ‘ಅಸ್ಪೃಶ್ಯ’ ವಿದ್ಯಾರ್ಥಿಯದ್ದೇ ತಪ್ಪು ಎಂದು ಆ ಚಳುವಳಿಕಾರರು ಹೇಳುತ್ತಾರೆ. ಆದರೂ ಆ ಚಳುವಳಿಕಾರರು ತನ್ನ ಜಾತಿಗೆ ಸೇರಿದ ವಿದ್ಯಾರ್ಥಿಯ ಪರವಾಗಿ ನಿಲ್ಲದಿದ್ದರೆ ತಪ್ಪಲ್ಲವೇ ಎಂದು ತಪ್ಪು ಇರುವ ತನ್ನ ಜಾತಿಯ ವಿದ್ಯಾರ್ಥಿಯ ಪರವಾಗಿ ನಿಲ್ಲುತ್ತಾರೆ. ಈ ಎರಡು ಘಟನೆಗಳಲ್ಲಿ ಶಿಕ್ಷಿತ ಬ್ರಾಹ್ಮಣ ಮತ್ತು ದಲಿತ ಚಳುವಳಕಾರರು ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಜಾತಿಯ ಅನನ್ಯತೆಯು ಅವರನ್ನು ಹಾಗೇ ಮಾಡಿಸಲು ಒತ್ತಾಯಿಸುತ್ತದೆ.ನೀವು ಹೇಳಿದಂತೆ, ಇಂತಹ ಜಾತಿ ಅನನ್ಯತೆಯು ಎಲ್ಲಾ ಜಾತಿಗಳಿಗೆ ಸೇರಿದ ಸಂಶೋಧಕರಲ್ಲೂ ಇದೆ. ಬ್ರಾಹ್ಮಣ ಸಂಶೋಧಕರಾದರೆ ಹೇಗಾದರೂ ಮಾಡಿ ಬ್ರಾಹ್ಮಣರ ಮೇಲಿರುವ ಆರೋಪವನ್ನು ತೆಗೆದುಕೊಳ್ಳಬೇಕೆಂದು ವಾದಿಸುವುದರಲ್ಲೇ ಕಾಲವನ್ಮುಂನು ಕಳೆದರೆ, ದಲಿತ ಸಂಶೋಧಕರಾದರೆ, ತಮ್ಮ ಜಾತಿಗಳು ಶತಮಾನಗಳ ಕಾಲ ಶೋಷಣೆಗೆ ಒಳಗಾಗಿದ್ದವು ಎಂದು ತೋರಿಸುವ ಪ್ರಯತ್ನದಲ್ಲೇ ತಮ್ಮ ಸಂಶೋಧನ ಪ್ರಬಂಧವನ್ನು ರಚಿಸುತ್ತಾರೆ. ಇವರಿಗೆ ತಮ್ಮ ಜಾತಿಗಳ ಸಾಮಾನ್ಯ ಜನರು ಎದರಿಸುವ ನೈಜ ಸಮಸ್ಯೆಗಳೇನು ಮತ್ತು ಅವುಗಳನ್ನು ಹೇಗೆ ಸರಿಪಡಿಸಬೇಕು ಎಂಬ ವಿಷಯಗಳ ಬಗ್ಗೆ ಗಮನವೇ ಇರುವುದಿಲ್ಲ. ಬದಲಿಗೆ ಈಗಾಗಲೇ ಮಂಡಿಸಲಾದ ವಾದಗಳನ್ನೇ ಇಟ್ಟುಕೊಂಡು ಇನ್ನೊಂದು ದೃಷ್ಟಿಕೋನದಿಂದ ನೋಡಿದಾಗಲೂ ಮತ್ತೆ ಅದೇ ರೀತಿ ಕಾಣುತ್ತದೆ ಎಂದು ಹೇಳುವುದರಲ್ಲೇ ಕಾಲವನ್ನು ಕಳೆಯುತ್ತಿದ್ದಾರೆ. ಇದರಿಂದ ಈಗಾಗಲೇ ಹೇಳಿದ ಬ್ರಾಹ್ಮಣ ಅಧಿಕಾರಿ ಮತ್ತು ದಲಿತ ಚಳುವಳಿಕಾರರಿಗೂ ಹಾಗೂ ಸಂಶೋಧಕರಿಗೂ ಏನಾದರೂ ವ್ಯತ್ಯಾಸ ಇದೆಯೇ? ಎಂಬ ಪ್ರಶ್ನೆಯು ನನ್ನಲ್ಲೂ ಕಾಡುತ್ತಿದೆ. ಏಕೆಂದರೆ, ಸಮಾಜದ ಕುರಿತು ಸಂಶೋಧನೆಯನ್ನು ಮಾಡುವ ಸಂಶೋಧಕರಿಗೆ ಸಮಾಜವು ಸಾಮಾನ್ಯ ಜನರಿಗಿಂತ ಭಿನ್ನವಾಗಿ ಕಾಣಬೇಕು. ಅಂದರೆ ಬೆಳಗಿನ ಸೂರ್ಯೋದಯವನ್ನು ಒಬ್ಬ ಸಾಮಾನ್ಯ ವ್ಯಕ್ತಿಯು ನೋಡುವುದಕ್ಕೂ ಮತ್ತು ಕವಿ ಅಥವಾ ಛಾಯಾಗ್ರಹಾಕ ಅಥವಾ ಭೌತಶಾಸ್ತ್ರದ ವಿಜ್ಞಾನಿಗಳು ನೋಡುವುದಕ್ಕೂ ಭಿನ್ನವಾಗಿರುತ್ತದೆ. ಅದೇ ರೀತಿ ಸಮಾಜದಲ್ಲಿರುವ ವಿದ್ಯಮಾನಗಳನ್ನು ಸಾಮಾನ್ಯ ವ್ಯಕ್ತಿ ನೋಡುವುದಕ್ಕೂ ಮತ್ತು ಸಂಶೋಧಕರು ನೋಡುವುದಕ್ಕೂ ಭಿನ್ನವಾಗಿರಬೇಕು. ಆದರೆ ಈ ಭಿನ್ನತೆಯು ಇಂದಿನ ಸಮಾಜ ವಿಜ್ಞಾನಗಳಲ್ಲಿ ನಡೆಯುವ ಸಂಶೋಧನೆಗಳಲ್ಲಿ ಕಾಣುತ್ತಿಲ್ಲ.
ಸಾತ್ವಿಕ್ : ಖಂಡಿತಾ ಶಂಕರ್. ಸಂಶೋಧಕನ ಅನನ್ಯತೆಯು ಆತನ ದೃಷ್ಟಿಕೋನದಲ್ಲಿರುತ್ತದೆ ಅಲ್ಲವೇ? ರೋಗವಿಡಿದ ಮರದ ಎಲ್ಲ ಎಲೆಗಳಿಗೂ ಚಿಕಿತ್ಸೆ ಕೊಡುವ ಅಗತ್ಯವಿಲ್ಲ. ಬದಲಾಗಿ ನೇರವಾಗಿ ಬೇರಿಗೆ ಮದ್ದು ಕೊದಬಹುದು. ಇದು ಸಂಶೋಧಕನ ಆಶಯವಾಗಿರಬೇಕು ಕೂಡ. ನಿಜ ಹೇಳಬೇಕು ಅಂದ್ರೆ ನಾನು ಸಂಶೋಧಕ ಎಂಬ ಮನಸ್ಥಿತಿ ತಂದುಕೊಳ್ಳುವುದೇ ಸಂಶೋಧನೆಯ ದೊಡ್ಡ ಧನಾತ್ಮಕ ಆರಂಭ
ಶಂಕರ್ ಎನ್.ಎಸ್ : ನಿಮ್ಮ ಪ್ರಶ್ನೆಯು ನನಗೆ ಅರ್ಥವಾಗಲಿಲ್ಲ.
ಸಾತ್ವಿಕ್ : ಅಂದ್ರೆ ಸಮಸ್ಯೆಯ ಮೂಲವನ್ನು ಗುರುತಿಸುವ ಬಗ್ಗೆ ಹೇಳಿದೆ..
ಸಂತೋಷ್ ಶೆಟ್ಟಿ : ಸದ್ಯಕ್ಕೆ ಒಪ್ಪಿತವಾಗಿರುವ ಸಂಶೋಧನಾ ವಿಧಾನವು ಹಳೆಯ ಮಾದರಿಯದೆ. ಬಹುತೇಕ ಮಟ್ಟಿಗೆ ಆ ವಿಧಾನವು ಫ್ಯಾಕ್ಟ್ ಗಳನ್ನು ಕಲೆಹಾಕುವುದರ ಕುರಿತು ಕಲಿಸುತ್ತದೆ. ಅಂದರೆ ಕ್ಷೇತ್ರಕಾರ್ಯವನ್ನು ಮಾಡುವುದರ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿದೆ. ಎಷ್ಟು ಸ್ಯಾಂಪ್ಲಿಂಗ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಎಷ್ಟು ಜನರವನ್ನು ಸಂದರ್ಶಿಸಬೇಕು, ಉತ್ತಮ ಸಂಶೋಧಕನ ಧೋರಣೆ ಹೇಗಿರಬೇಕು ಇನ್ನೂ ಮುಂತಾದ ಇಂತವೇ ಸಂಗತಿಗಳನ್ನು ತಿಳಿಸುತ್ತದೆ. ಆದರೆ ಸೈದ್ಧಾಂತಿಕವಾಗಿ ಸಂಶೋಧನೆ ನಡೆಸಲು ಬೇಕಾದ ತಯಾರಿಯನ್ನು ಅದು ಕಲಿಸುವುದಿಲ್ಲ ಎಂದರೆ ತಪ್ಪಾಗಲಾರದು. ಅಸ್ತಿತ್ವದಲ್ಲಿರುವ ಯಾವುದೋ ಸಿದ್ಧಾಂತಕ್ಕೆ ಫ್ಯಾಕ್ಟ್ ಗಳನ್ನು ಕಲೆಹಾಕುವುದೇ ಸಂಶೋಧನೆಯಾಗಿದೆ. ಸಮಾಜವಿಜ್ಞಾನ ಸಂಶೋಧನೆಯಲ್ಲಿ ಕೇವಲ ಅನ್ವಯಿಕ ಸಂಶೋಧನೆಗಳು ಮಾತ್ರ ಆಗುತ್ತಿವೆ, ಶುದ್ಧ (ಪ್ಯೂರ್ ರಿಸರ್ಚ್) ಆಗುತ್ತಿಲ್ಲ ಎಂದು ಕೆಲವರು ವಾದಿಸುತ್ತಾರೆ. ಅನ್ವಯಿಕ ಸಂಶೋಧನೆಗೆ ಬೇಕಾದ ಪರಿಕರ ಪರಿಭಾಷೆಗಳನ್ನು ಕಲಿಸಿಕೊಡುತ್ತಾ ಶುದ್ಧ ಸಂಶೋಧನೆ ಆಗುತ್ತಿಲ್ಲ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಅದರ ಜೊತೆಗೆ ಶುದ್ಧವಾದ ಅಂದರೆ ಹೊಸ ಜ್ಞಾನವನ್ನು ಸೃಷ್ಟಿಸುವ ಕೆಲಸ ಯಾರಾದರೂ ಪ್ರಾರಂಭಿಸಿದರೆ ಇವರ ವೈಧಾನಿಕತೆ ಸರಿ ಇಲ್ಲ ಎಂದು ಅತಾರ್ಕಿಕವಾಗಿ ಜರುಗುತ್ತಾರೆ. ಇಲ್ಲಿ ಸಂಶೋಧನಾ ವಿಧಾನ ಇಂತದ್ದೇ ಇರಬೇಕೆಂದು ಹೇಳುವುದು ಒಳ್ಳೆಯದಲ್ಲ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಸಂಶೋಧನಾ ಸಮಸ್ಯೆ ಮತ್ತು ಹೈಪೋಥೀಸಿಸ್ ಗಳ ಆಧಾರದ ಮೇಲೆ ವೈಧಾನಿಕತೆಯನ್ನು ನಿರ್ಧಾರ ಪಡಿಸಿಕೊಳ್ಳಬೇಕೇ ಹೊರತು ವೈಧಾನಿಕತೆಯಿಂದ ಹೈಪೋಥೀಸಿಸ್ ರೂಪುಗೊಳ್ಳುವುದು ಅನವಶ್ಯಕ. ಹಾಗೂ ಹೈಪೋಥೀಸಿಸ್ ಗಳು ಯಾವುದಾದರೂ ಒಂದು ಸಿದ್ಧಾಂತದ ಹಿನ್ನೆಲೆಯಲ್ಲಿ ರೂಪುಗೊಂಡರೆ ಅದನ್ನು ಪರೀಕ್ಷಿಸುವ ಮಾರ್ಗವೂ ಸುಲಭವಾಗಿರುತ್ತದೆ. ಕೇವಲ ೪ ಫ್ಯಾಕ್ಟ್ ಗಳನ್ನು ನೋಡಿ ಅದರ ಆಧಾರದ ಮೇಲೆ ಕಟ್ಟುವ ಹೈಪೋಥೀಸಿಸ್ ತಾತ್ಪೂರ್ತಿಕವಾಗಿರುತ್ತದೆ (ಆಡ್ ಹಾಕ್). ಇಂತಹ ಹೈಪೋಥೀಸಿಸ್ ಗಳನ್ನು ಪರೀಕ್ಷಿಸುವ ಯಾವ ವಿಧಾನಗಳೂ ಇಲ್ಲ. ಒಂದೊಮ್ಮೆ ಹೈಪೋಥೀಸಿಸ್ ಗಳನ್ನು ಪರೀಕ್ಷಿಸಲು ಸಾಧ್ಯವಿರದಿದ್ದರೆ ವಿದ್ಯಮಾನದ ಕುರಿತ ಜ್ಞಾನವೂ ಸಹ ಬೆಳೆಯಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಕ್ಷೇತ್ರಕಾರ್ಯವನ್ನು ಏಕೆ ಮಾಡಬೇಕು ಯಾವ ಸಿದ್ಧಾಂತದ ಭಾಗವಾಗಿ ತನ್ನ ಸಂಶೋಧನೆ ನಡೆಯುತ್ತಿದೆ ಎಂಬುದು ಅಜ್ಞಾತವಾಗಿ ಉಳಿಯುವಂತಹ ವೈಧಾನಿಕತೆ ಪ್ರಸ್ತುತದಲ್ಲಿದೆ. ಈಗ ಸೈದ್ಧಾಂತಿಕ ಸಂಶೋಧನೆಯ ಒಲವು ಹೆಚ್ಚಾಗುತ್ತಿದೆ ಸಾತ್ವಿಕ್.
ಶಂಕರ್ ಎನ್.ಎಸ್ : ಈಗಾಗಲೇ ಹೇಳಿದಂತೆ ಸಂಶೋಧಕನಿಗೆ ಸಾಮಾಜಿಕ ಸಮಸ್ಯೆಗೂ ಮತ್ತು ಸಂಶೋಧನಾ ಪ್ರಶ್ನೆಗೂ ಇರುವ ವ್ಯತ್ಯಾಸದ ಅರಿವು ಇರಬೇಕು. ಸಂಶೋಧಕನಿಗೆ ಸಾಮಾಜಿಕ ಸಮಸ್ಯೆಯ ಬಗ್ಗೆ ಕಾಳಜಿ ಇರಬೇಕು, ಅದರೆ ಅದಕ್ಕೂ ಹೆಚ್ಚಿನದಾಗಿ ಸಂಶೋಧನಾ ಸಮಸ್ಯೆ ಏನೆಂದು ತಿಳಿದುಕೊಳ್ಳಬೇಕು ಮತ್ತು ಅಂತಹ ಸಮಸ್ಯೆಗೆ ಹೈಪೋಥೀಸಿಸ್ ರೂಪದಲ್ಲಿ ಉತ್ತರ ನೀಡಬೇಕು. ನಂತರ ತನ್ನ ಹೈಪೋಥೀಸಿಸ್ ಸಂಬಂಧಪಟ್ಟ ಸಾಮಾಜಿಕ ಸಮಸ್ಯೆಗೆ ಉತ್ತರವನ್ನು ನೀಡಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಅದನ್ನು ಬಿಟ್ಟು ನೇರವಾಗಿ ಇರುವ ಸಾಮಾಜಿಕ ಸಮಸ್ಯೆಯ ಬಗ್ಗೆ ಪರಿಹಾರವನ್ನು ನೀಡುತ್ತೇನೆ ಎಂದುಕೊಂಡು ಸಂಶೋಧನೆಯನ್ನು ಮಾಡಲು ಹೊರಟರೆ, ದೊರೆಯುವುದು ಈಗಾಗಲೇ ಇರುವ ವಿವರಣೆಗಳ ಪರವಾಗಿ ಅಥವಾ ವಿರುದ್ಧವಾಗಿ ನೀಡುವ ಹೇಳಿಕೆಗಳಿಗೆ ಸಂಶೋಧನೆಯು ಸೀಮಿತವಾಗುತ್ತದೆ.
ಸಮಾಜ ವಿಜ್ಞಾನಗಳ ಸಂಶೋಧನೆಯಲ್ಲಿ ಈ ದೃಷ್ಟಿಕೋನಗಳ ಸಂಸ್ಕೃತಿ ಬೆಳದದ್ದೂ ಸಹ ಸೆಕ್ಯುಲರಿಕೃತ ಕ್ರಿಶ್ಚಿಯನ್ ಥಿಯಾಲಜಿಯಯಿಂದ ಎಂದರೆ ತಪ್ಪಾಗಲಾರದು. ಹೇಗೆಂದರೆ, ಪ್ರತಿಯೊಬ್ಬ ಮಾನವರಿಗೂ ಅವರದ್ದೇ ಆದ ಸೋಲ್ ಗಳಿವೆ. ಒಬ್ಬರ ಸೋಲ್ ಇನ್ನೊಬ್ಬರ ಸೋಲ್ ನಂತೆ ಇರುವುದಿಲ್ಲ. ಪ್ರತಿಯೊಂದು ಸೋಲ್ ಗೂ ಅದರದ್ದೇ ಆದ ವೈಶಿಷ್ಟತೆ ಮತ್ತು ಅನನ್ಯತೆ ಇದೆ. ಪ್ರತಿಯೊಂದು ಸೋಲ್ ಗೂ ತನ್ನದೇ ಆದ ರೀತಿಯಲ್ಲಿ ಪ್ರಪಂಚವನ್ನು ಗ್ರಹಿಸವಸಹ ಸ್ವತಂತ್ರವಿದೆ. ಪ್ರಪಂಚವನ್ನು ಒಂದು ಸೋಲ್ ಒಂದು ರೀತಿ ಗ್ರಹಿಕೆಯು ಬೇರೆ ಸೋಲ್ ಮತ್ತೊಂದು ರೀತಿಯಲ್ಲಿ ಗ್ರಹಿಸುತ್ತದೆ. ಹಾಗಾಗಿ ಪ್ರಪಂಚವನ್ನು ಗ್ರಹಿಸವು ರೀತಿಯಲ್ಲೂ ಭಿನ್ನತೆ ಇದೆ. ಇಂತಹ ಭಿನ್ನತೆಯನ್ನು ಮಾನವರಾಗಿ ನಾವು ಒಪ್ಪಿಕೊಳ್ಳಲೇ ಬೇಕು. ಹಾಗಾಗಿ ಜಗತ್ತಿನಲ್ಲಿ ಇರುವ ಮತ್ತು ಮರಣ ಹೊಂದಿದ ಮತ್ತು ಮುಂದೆ ಹುಟ್ಟುವ ಎಷ್ಟು ಮನುಷ್ಯರು ಇದ್ದಾರೋ, ಅಷ್ಟು ಸೋಲ್ ಗಳಿವೆ ಮತ್ತು ಅಷ್ಟು ಭಿನ್ನವಾದ ದೃಷ್ಟಿಕೋನಗಳಿವೆ. ಇಂತಹ ಭಿನ್ನ ದೃಷ್ಟಿಕೋನಗಳನ್ನು ಪ್ರತಿಯೊಬ್ಬ ಮಾನವರು (ಸಂಶೋಧಕರು) ಒಪ್ಪಿಕೊಳ್ಳಲೇ ಬೇಕು. ಇಲ್ಲವಾದರೆ ವ್ಯಕ್ತಿಯ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹರಣ ಮಾಡಿದಂತಾಗುತ್ತದೆ (ಇಂತಹ ಹರಣವನ್ನು ಸಂಶೋಧನೆಯಲ್ಲೂ ಕಾಣುತ್ತೇವೆ). ಇಲ್ಲಿ ಹುಟ್ಟುಕೊಳ್ಳುವ ಒಂದು ಸಮಸ್ಯೆ ಎಂದರೆ ಈಗಾಗಲೇ ಮರಣ ಹೊಂದಿದ, ಈಗ ಇರುವ ಮತ್ತು ಮುಂದೆ ಹುಟ್ಟು ಮನುಷ್ಯರಲ್ಲಿರುವ ಭಿನ್ನ ದೃಷ್ಟಿಕೋನಗಳನ್ನು ಇಟ್ಟುಕೊಂಡು ಸಂಬಂಧಪಟ್ಟ ಸಾಮಾಜಿಕ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ? ಹಾಗಾಗಿ ಸಾಮಾಜಿಕ ಸಂಶೋಧನೆಗೆ ಅಸಂಖ್ಯಾತ ದೃಷ್ಟಿಕೋನಗಳ ಮಾರ್ಗಕ್ಕಿಂತ, ವಿಜ್ಞಾನವು ಹಾಕಿಕೊಟ್ಟ ಹಾದಿಯೇ ಸೂಕ್ತ ಎನಿಸುತ್ತದೆ.
ಶಂಕರ್ ಎನ್.ಎಸ್ : ಸಾತ್ವಿಕ್ ಅವರೆ ಭಾರತೀಯ ಸಮಾಜದ ಕುರಿತು ಅಧ್ಯಯನ ಮಾಡುವ ಸಂಶೋಧಕರ ಬಗ್ಗೆ ಮೊನ್ನೆ ಬಾಲಗಂಗಾಧರ ಅವರು ಮುಂದಿನಂತೆ ಹೇಳಿದರು: ಸಂಶೋಧಕನು ಯಾವುದನ್ನು ಕಲಿಯಬೇಕು ಎನ್ನುವುದಕ್ಕಿಂತ ಯಾವುದನ್ನು ಕಲಿಯಬಾರದು ಎಂಬುದನ್ನು ಕಲಿಸಿಕೊಂಡುವುದೇ ಒಂದು ಚಾಲೆಂಜ್ ಆಗಿದೆ.
ಸಾತ್ವಿಕ್ : ಸಂತೋಷ್ ಶೆಟ್ಟಿ, ಶಂಕರ್ ಎನ್.ಎಸ್, ಸಂಶೋಧನೆಗೆ ಬಳಸುವ ಭಾಷೆ ವಿಶಿಷ್ಠವಾದುದೇ? ಅಥವಾ ಸಂಶೋಧನೆಗೆ ಮಾತ್ರ ಸಂಬಂಧಿಸಿದ ಪರಿಭಾಷೆಗಳು ಇವೆಯೇ?
ಶಂಕರ್ ಎನ್.ಎಸ್ : ಶಬ್ದಕ್ಕೂ ಮತ್ತು ಪರಿಭಾಷೆಗೂ ವ್ಯತ್ಯಾಸಗಳಿವೆ. ಅಂದರೆ ನೈಸರ್ಗಿಕ ವಿಜ್ಞಾನಗಳಲ್ಲಿರುವ ಪರಿಭಾಷೆಗಳಂತೆ ಸಮಾಜ ವಿಜ್ಞಾನಗಳಲ್ಲೂ ಪರಿಭಾಷೆಗಳಿವೆ. ಉದಾಹರಣೆಗೆ ಸಾಮಾನ್ಯ ಜನರು ತಮ್ಮನ್ನು ಜನರು ಅಥವಾ ವ್ಯಕ್ತಿಗಳು ಎಂದು ಕರೆದುಕೊಂಡರೆ, ಜೀವಶಾಸ್ತ್ರದಲ್ಲಿ ಇದೇ ಮನುಷ್ಯರನ್ನು ಹೋಮೊ ಸೆಫಿಯನ್ಸ್ ಎಂಬ ಪರಿಭಾಷೆಯಲ್ಲಿ ಗುರುತಿಸುತ್ತಾರೆ. ಮತ್ತು ಜೀವಶಾಸ್ತ್ರದಲ್ಲಿ ಬಳಸುವ ಈ ಪರಿಭಾಷೆಗೇ ಜೀವಶಾಸ್ತ್ರಜ್ಞರು ತಮ್ಮದೇ ಆದ ರೀತಿಯಲ್ಲಿ ಗ್ರಹಿಸಕೊಂಡು ಮಾನವ ವಿಕಾಸದ ಬಗ್ಗೆ ಅಧ್ಯಯನವನ್ನು ಮಾಡುತ್ತಿದ್ದಾರೆ. ಹಾಗೇಯೇ ಸಮಾಜಶಾಸ್ತ್ರದಲ್ಲಿ ಇದೇ ಮಾನವರನ್ನು ಸಮಾಜದದಲ್ಲಿರು ‘ಸಾಮಾಜಿಕ ವಸ್ತುಗಳು’ ಎಂದು ಗ್ರಹಿಕೊಳ್ಳುತ್ತಾರೆ. ಇಂತಹ ನಿರ್ದಿಷ್ಟ ಅರ್ಥದಲ್ಲಿ ಬಳಿಸಿದರೆ ಮಾತ್ರ ಸಂಶೋಧನೆಯ ಬೆಳವಣಿಗೆ ಸಾಧ್ಯವಾಗುತ್ತದೆ. ಏಕೆಂದರೆ ವಿಜ್ಞಾನಗಳಲ್ಲಿ ಬಳಸುವ ಪರಿಕಲ್ಪನೆಗಳಿಗೆ ತ,ಮ್ಮದೇ ಆದ ಇತಿಹಾಸವಿದೆ, ನಿರ್ದಿಷ್ಟ ಅರ್ಥವಿದೆ, ಸೈದ್ಧಾಂತಿಕ ಚೌಕಟ್ಟಿದೆ. ಆ ಚೌಕಟ್ಟಿನಲ್ಲೇ ನಿರ್ದಿಷ್ಟ ವಿದ್ಯಮಾನದ ಕುರಿತ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಂತಹ ಚೌಕಟ್ಟನ್ನು ಒಪ್ಪಿಕೊಳ್ಳದೇ ನಿಮ್ಮ ದೃಷ್ಟಿಕೋನ ಬೇರೆ ನನ್ನ ದೃಷ್ಟಿಕೋನವು ಬೇರೆ ಎಂದು ಭಿನ್ನವಾಗಿ ಗ್ರಹಿಸಿ ಅರ್ಥೈಸಿದರೆ, ಅಂತಹ ಸಂಶೋಧನೆ ಮತ್ತು ಪರಿಶೀಲನೆ ಮಾಡಿದಂತಾಗುವುದಿಲ್ಲ.
ಷಣ್ಮುಖ ಆರ್ಮುಗಂ: ಹೌದು, ಸಂತೋಷ್ ಮತ್ತು ಶಂಕರ್ ಹೇಳಿದ್ದು ಸರಿ. ಸಂಶೋಧನ ವಿಧಾನ ಮತ್ತು ತಂತ್ರಗಳು ಸಂಶೋಧನೆಗೆ ಆಯ್ದುಕೊಂಡಿರುವ ಸಮಸ್ಯೆಯನ್ನು ಅವಲಂಬಿಸಿರುತ್ತದೆ. ಇಲ್ಲಿ ಎರಡು ವಿಚಾರಗಳಿಗೆ ಸಂಬಂದಿಸಿದಂತೆ ವೈಧಾನಿಕತೆಯ ಆಯ್ಕೆ ಪ್ರಶ್ನೆ ಬರುತ್ತದೆ. ಒಂದು ಸಂಶೋಧನಾ ಸಮಸ್ಯೆಯನ್ನು ರೂಪಿಸಿಕೊಳ್ಳುವುಕ್ಕೆ ಸಂಬಂದಿಸಿದ್ದು; ಎರಡನೆಯದು ಮಾಹಿತಿ ಕಲೆ ಹಾಕುವುದಕ್ಕೆ ಸಂಬಂದಿಸಿದ್ದು. ಮೊದಲನೆಯದಾಗಿ ಸಂಶೋಧನೆಗೆ ಸಮಸ್ಯೆಗಳನ್ನು ರೂಪಿಸುವಾಗ ಯಾವ ವಿಧಾನ ಅನುಸರಿಸಿದೆವು ಎನ್ನುವುದು ಮುಖ್ಯು. ಅಂದರೆ, ಐಡಿಯಾಲಜಿಗಳ ಚೌಕಟ್ಟುಗಳಲ್ಲಿ ಸಮಸ್ಯೆ ರೂಪಿತವಾದರೆ ಅಲ್ಲಿಗೆ ಆರಂಭದಲ್ಲೇ ಸಂಶೋಧನಾ ಫಲಿತಾಂಶವೂ ನಿರ್ಧರಿತವಾಗಿಬಿಡುತ್ತದೆ.ಇದು ವೈಜ್ಞಾನಿಕ ವಿಧಾನವೆಂದಾಗುವುದಿಲ್ಲ. ಹಾಗಾಗಿ ಒಂದು ಸಂಗತಿ ಅಥವಾ ವಿಚಾರದ ಬಗ್ಗೆ ತರ್ಕಬದ್ದವಾದ ಮತ್ತು ಸಸಂಭದ್ದವಾದ ಪ್ರಶ್ನೆಗಳನ್ನು ಕೇಳಿಕೊಂಡು ಸಮಸ್ಯೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಉಧಾ: ಕೊಡುವುದಾದರೆ. ಭಾರತೀಯ ಸಮಾಜದಲ್ಲಿರುವ ಆಚರಣೆಗಳನ್ನು ಶ್ರದ್ದೆಯಿಂದ ಬಹುತೇಕ ಜನರು ಆಚರಿಸಿ ಕೊಳ್ಳುತ್ತಾ ಬರುತ್ತಿದ್ದಾರೆ. ಅನ್ಯ ಸಂಸ್ಕೃತಿಯಿಂದ ಉಧಾ: ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಬಂದವರು ಈ ಆಚರಣೆಗಳನ್ನು ಮೂಢ ನಂಬಿಕೆಗಳು ಎಂದು ವಿವರಿಸುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಈ ಸಂಧರ್ಭದಲ್ಲಿ ಈ ಆಚರಣೆಗಳು ಮೂಡ ನಂಭಿಕೆಗಳೇ ಸರಿಯಾದ ನಂಭಿಕೆಗಳೇ ಎಂದು ಎನ್ನುವ ಪ್ರಶ್ನೆಗಳನ್ನು ನೇರವಾಗಿ ಎತ್ತಿಕೊಂಡು ಬಿಡುತ್ತೇವೆ. ಅದರ ಬದಲಿಗೆ ಇದರ ಬಗ್ಗೆ ಇನ್ನೊಂದು ರೀತಿಯಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಅದು ಪಾಶ್ಚಿಮಾತ್ಯರಿಗೆ ಇವು ಏಕೆ ಮೂಢ ನಂಬಿಕೆಯಾಗಿ ಕಾಣುತ್ತಿದೆ? ಭಾರತೀಯರೇಕೆ ಅವನ್ನು ಹಾಗೆ ಭಾವಿಸದೆ ಶ್ರದ್ದೆಯಿಂದ ಆಚರಿಸುತ್ತಿದ್ದಾರೆ? ಮೊದಲನೆಯ ಪ್ರಶ್ನೆಗೆ ಉತ್ತರಿಸಲು ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಎರಡನೇ ಪ್ರಶ್ನೆಗೆ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಮಾಡಲು ಎರಡೂ ಸಂಸ್ಕೃತಿಗಳನ್ನು ವಿವರಿಸುವ ಸಿದ್ದಾಂತಗಳನ್ನು ಬೆಳಸಬೇಕಾಗುತ್ತದೆ. ಹೀಗೆ ಮಾಡಿದ ಮೇಲೆ ಭಾರತದಲ್ಲಿರುವುದು ಮೂಢನಂಬಿಕೆಗಳೇ ಅಲ್ಲವೇ ಎನ್ನುವ ಪ್ರಶ್ನೆಯ ಸಮಂಜಸತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
30 April 2013
ದೇವನೂರು ಮಹಾದೇವರ ಪ್ರತಿಕ್ರಿಯೆ ಮತ್ತು ನನ್ನ ಗೊಂದಲಗಳು
ಪ್ರಜಾವಾಣಿಯಲ್ಲಿ ದೇವನೂರು ಮಹಾದೇವ ರವರು ಬರೆದ ಲೇಖನಕ್ಕೆ ಪ್ರತಿಕ್ರಿಯೆ.
ನನ್ನ ವಿದ್ಯಾರ್ಥಿ ಜೀವನದಿಂದಲೂ ದೇವನೂರು ಮಹಾದೇವ ಎಂಬ ಆದರ್ಶವ್ಯಕ್ತಿಯ ಕುರಿತು ಕೇಳಿದ್ದೆ, ಹಾಗೂ ಕೆಲವೊಮ್ಮೆ ನೋಡುವ ಭಾಗ್ಯವೂ ಒದಗಿತ್ತು. ಕನ್ನಡ ಬಂಡಾಯ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಶಾಂತಿ ಮತ್ತು ಅಹಿಂಸಾ ಮಾರ್ಗವಾಗಿ ಹೋರಾಡುತ್ತಿರುವುದು ಅವರ ವ್ಯಕ್ತಿತ್ವದ ಆಕರ್ಷಣೆಯಾಗಿದೆ. ಇದಕ್ಕೆ ಮಾರುಹೋದ ಹಲವಾರು ಯುವಸಮುದಾಯಗಳು ಅವರನ್ನು “ಆಧುನಿಕ ಸಂತ” ಎಂಬಂತೆ ಬಿಂಬಿಸುತ್ತವೆ. ಅಷ್ಟು ಶಾಂತಚಿತ್ತ ಮತ್ತು ಧೀಮಂತ ಹೋರಾಟಗಾರೆಂದೆ ಖ್ಯಾತಿ ಪಡೆದ ದೇವನೂರು ರವರು ಏನೇ ಬರೆದರೂ ಅದನ್ನು ಓದಲು ನನ್ನನ್ನೂ ಸೇರಿ ಅಪಾರ ಅಭಿಮಾನಿಗಳ ಬಳಗವೇ ಇದೆ. ವಚನ ಕುರಿತ ಚರ್ಚೆಗೆ ಅವರ ಪ್ರತಿಕ್ರಿಯೆಯನ್ನು ಓದಿದ ಮೇಲೆ ಅವರ ಮೇಲಿದ್ದ ನನ್ನ ಗೌರವ, ನಂಬಿಕೆಗಳು ಆ ಲೇಖನವನ್ನು ಅವರೇ ಬರೆದಿದ್ದಾ ಎಂಬ ಅನುಮಾನವನ್ನು ಮೂಢಿಸಿದೆ. ಅದೇನೇ ಇದ್ದರೂ ದೇವನೂರು ಮಹಾದೇವ ರವರು ಕೆಲವು ತಪ್ಪುನಂಬಿಕೆಗಳ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆದಿದ್ದಾರೆ, ಅವುಗಳನ್ನು ನನ್ನ ಓದಿನ ಮಿತಿಯಲ್ಲಿ ಚರ್ಚಿಸಲು ಬಯಸುತ್ತೇನೆ.
೧. ಲೇಖನದ ಪ್ರಾರಂಭದಲ್ಲಿ ಒಂದು ಉದಾಹರಣೆಯನ್ನು ನೀಡುವ ಮೂಲಕ ಅಂಕಿ ಸಂಖ್ಯೆಯ ಆಧಾರವಾದ ವಿವರಣೆಯನ್ನು ವಿರೋಧಿಸಿದ್ದಾರೆ: ಅದೆಂದರೆ “ತಾಯಿಯನ್ನು ’ತಾಯಿ” ಎಂದು ಇಷ್ಟು ಸಾರಿ (ಅಂಕಿ ಸಂಖ್ಯೆಗಳ ಲೆಕ್ಕದಲ್ಲಿ) ಕರೆಯದಿದ್ದರೆ ಬಂಜೆ ಎಂದು ಕರೆದು ದಿಗ್ವಿಜಯ ಸಾಧಿಸಿಬಿಡುತ್ತಾರೆ”. ಇಲ್ಲಿ ತೆಗೆದುಕೊಂಡಿರುವ ಉದಾಹರಣೆಯನ್ನು ಮತ್ತೊಂದು ರೀತಿಯಲ್ಲಿ ಇಡಬಹುದು, ಒಲ್ಲೊಬ್ಬರು ಮಹಿಳೆ ಇದ್ದಾರೆ ಹಾಗೂ ಮಗನ ವಯಸ್ಸಿನ ವ್ಯಕ್ತಿಯೊಬ್ಬ ಇದ್ದಾನೆ ಎಂದಿಟ್ಟುಕೊಳ್ಳಿ. ಆಕೆಗೆ ಅಪಾರ ಆಸ್ತಿ ಇದ್ದು ಬೇರೆ ಯಾರೂ ವಾರಸ್ದಾರರು ಇಲ್ಲ ಎಂದಿಟ್ಟುಕೊಳ್ಳುವ, ಅವಳ ಆಸ್ತಿಯನ್ನು ಕಬಳಿಸಲು ಯಾರೋ ಆಕೆಯನ್ನು ಅಮ್ಮ ಅಮ್ಮ ಎಂದು ನೂರು ಸಾವಿರ ಲಕ್ಷ ಬಾರಿ ಕರೆಯುತ್ತಾರೆ ಎಂದಾದರೆ, ಅವರ ನಡುವೆ ಇರುವುದು ತಾಯಿ ಮಕ್ಕಳ ಸಂಬಂಧವೆ? ಅಥವಾ ಬೇರೆ ತರಹದ ಸಂಬಂಧವೆ? ಇಲ್ಲಿ ಆಸ್ತಿಗೋಸ್ಕರ ಆತ ಎಷ್ಟು ಬಾರಿ ತಾಯಿ ಎಂದು ಕರೆದರೂ ಆಕೆ ಆತನಿಗೆ ತಾಯಿಯಾಗಲು ಸಾಧ್ಯವಿಲ್ಲ, ಇದನ್ನು ಪ್ರಮಾಣೀಕರಿಸುವುದು ಹೇಗೆ? ಹೇಗೆಂದರೆ ಅವರ ನಡುವೆ ನಿಜವಾಗಿಯೂ ತಾಯಿ-ಮಗನ ಸಂಬಂಧವಿದೆಯೇ? ಎಂದು ಪರೀಕ್ಷೆ ಮಾಡುವುದು. ಆ ಪರೀಕ್ಷೆಯನ್ನೇ ಮಾಡದೆ ಕೆಲವು ಬಾರಿ ಆತ ಆಕೆಯನ್ನು ತಾಯಿ ಎಂದು ಕರೆದಿದ್ದಾನೆ ಆದ್ದರಿಂದ ಆಕೆ ಆತನ ತಾಯಿಯೇ ಎಂದು ನಿರ್ಣಯಕ್ಕೆ ಬರುವುದು ತೀರಾ ಅವಾಸ್ತವಿಕವಾಗುತ್ತದೆ. ಅಂತೆಯೇ ಜಾತಿ, ಕುಲ ಎಂಬ ಪದಗಳು ವಚನಗಳಲ್ಲಿ ಇದ್ದ ಮಾತ್ರಕ್ಕೆ ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಜಾತಿ ವಿರೋಧ ಎಂದು ನಿರ್ಣಯಕ್ಕೆ ಬರುವುದು ಅವಸರದ ತೀರ್ಮಾನವಾಗುತ್ತದೆ. ಹಾಗೆ ನೋಡಿದರೆ ಅಂಕಿ ಅಂಶಗಳ ಮೂಲಕ ವಚನಗಳನ್ನು ಅರ್ಥೈಸುವುದು ಮುಖ್ಯವಾದ ಗುರಿ ನಮ್ಮದಲ್ಲ ಹಾಗೂ ಅದರ ಆಧಾರದ ಮೇಲೆಯೇ ವಚನಗಳ ಕುರಿತ ವಾದವೂ ಬೆಳೆದಿಲ್ಲ, ಬದಲಿಗೆ ವಚನಗಳನ್ನು ಸಮಗ್ರವಾಗಿ ನೋಡಿದಾಗ ಹೇಗೆ ಕಾಣುತ್ತದೆ ಎಂಬುದನ್ನು ವಾದಿಸುವ ಸಂದರ್ಭದಲ್ಲಿ ನಗಣ್ಯವಾಗಿ ಅಥವಾ ಅಷ್ಟೇನೂ ಪ್ರಮುಖವಲ್ಲದ ವಿಷಯ ಅದಾಗಿದೆ.
೨. ಆ ಲೇಖನದಲ್ಲಿ ಮತ್ತೊಂದು ಉಪಮೆ ಕೊಡುತ್ತಾರೆ, ಅದೆಂದರೆ “ಬಡವನೊಬ್ಬ ಸಂತೆಗೆ ಆಡು ಮಾರಲು ಹೊರಟಾಗ ಕಳ್ಳರು ಅವನಿಗೆ ಮಂಕುಬೂದಿ ಎರಚಿ ನಾಯಿ ಎಂದು ನಂಬಿಸಿ ಕಳ್ಳತನ ಮಾಡಿಕೊಂಡು ಹೋಗುತ್ತಾರೆ”. ಇದರ ಅರ್ಥ (ದೇವನೂರು ರವರ ಪ್ರಕಾರವೇ) ಬಾಲುರವರ ಸಂಶೋಧನೆ ಇಲ್ಲಿರುವ ಜನರಿಗೆ ಮಂಕುಬೂದಿ ಎರಚುತ್ತಿದೆ, ಬಾಲು ಬರಹಗಳನ್ನು ಓದಿದ ಮತ್ತು ಓದುತ್ತಿರುವ ಬುದ್ದಿಜೀವಿಗಳು, ಜನಸಾಮಾನ್ಯರು ಇವೆರಲ್ಲರಿಗೂ ಮಂಕು ಕವಿದಿದೆ. ಆದರೆ ವಾಸ್ತವ ಸ್ಥಿತಿ ತೀರಾ ಭಿನ್ನವಾಗಿ ಇದೆ. ವಚನಗಳನ್ನು ಕೆಲವು ಸಂಪ್ರದಾಯಗಳು ಮುಂದುವರೆಸಿಕೊಂಡು ಬಂದಿವೆ, ಅವರು ಮುಂದುವರೆಸಿಕೊಂಡು ಬಂದಿರುವ ವಚನ ಸಂಪ್ರದಾಯಗಳನ್ನು ಜಾತಿವಿರೋಧಿ ಚಳುವಳಿ ಎಂದು ಹೇಳಿ ಮಂಕುಬೂದಿ ಎರಚುತ್ತಿರುವವರು ಯಾರು? ಭಾರತಕ್ಕೆ ಬಂದ ಪಾಶ್ಚಾತ್ಯರು ಅದೊಂದು ಪ್ರಾಟಸ್ಟಂಟ್ ಚಳುವಳಿ ಎಂದು ಹೇಳಿದರು, ಏಕೆಂದರೆ ಹಾಗೆ ಹೇಳಲು ಅವರಿಗೆ ಅವರ ಸಾಂಸ್ಕೃತಿಕ ಹಿನ್ನೆಲೆ, ಮತ್ತು ಕ್ರಿಶ್ಚಿಯಾನಿಟಿಯಲ್ಲಾದ ಸುಧಾರಣಾ ಚಳಿವಳಿಗಳು ಚೌಕಟ್ಟೊಂದನ್ನು ರೂಪಿಸಿಕೊಟ್ಟಿತ್ತು. ಆದರೆ ಅದೇ ವಾದವನ್ನು ಪರೀಕ್ಷಿಸದೆ ಇರುವ ಕೆಲವು ವಚನಗಳನ್ನೇ ಪದೇ ಪದೇ ಹೇಳುವ ಮೂಲಕ ವಚನಗಳನ್ನು ಮುಂದುವರೆಸಿಕೊಂಡು ಬಂದ ಸಂಪ್ರದಾಯಗಳಿಗೆ ಮಂಕುಬೂದಿ ಎರಚಿದರವರು ಯಾರು ಎಂಬುದು ಮೇಲ್ನೋಟಕ್ಕೆ ವೇದ್ಯವಾಗುತ್ತದೆ. ಅಷ್ಟೆ ಅಲ್ಲದೆ ಅದೇ ವಿವರಣೆಯನ್ನು ಎಲ್ಲರೂ ಒಪ್ಪುವಂತೆ ಧಮಕಿ ಹಾಕುವುದು ದೇವನೂರು ಮಹಾದೇವ ರಂತಹ ಚಿಂತಕರಿಂದ ಅನಿರೀಕ್ಷಿತವಾದುದು. ಅಂತೆಯೇ ವಚನಗಳ ಕುರಿತು ಮತ್ತೊಂದು ರೀತಿಯಲ್ಲಿ ಅರ್ಥೈಸಲು ಪ್ರಯತ್ನಿಸಿರುವ ಎಲ್. ಬಸವರಾಜುರವರ ನಿರೂಪಣೆಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?
೩. ಜಾತಿ ಜಾತಿಗಳ ನಡುವೆ ಇರುವ ಮೇಲು ಕೀಳು ಇಲ್ಲವೆಂದು ಬಾಲುರವರು ವಾದಿಸುತ್ತಾರೆಂದು ದೇವನೂರು ರವರು ಹೇಳುತ್ತಾರೆ. ಜಾತಿವ್ಯವಸ್ಥೆ ಇಲ್ಲ ಎಂದಾದರೆ ತಾರತಮ್ಯವೇ ಇಲ್ಲ ಎಂದು ಹೇಳಿದಂತಾಗುವುದಾದರೂ ಹೇಗೆ? ಇಲ್ಲಿ ಜಾತಿ ಆಧಾರಿತ ಮತ್ತು ಜಾತಿಆಧಾರಿತವಲ್ಲದ ತಾರತಮ್ಯಗಳಿವೆ, ಅವುಗಳನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ. ಜಾತಿಆಧಾರಿತ ತಾರತಮ್ಯಗಳು ಎಷ್ಟು ಪ್ರಮುಖವೋ ಜಾತಿರಹಿತ ಅಥವಾ ಜಾತಿಹೊರತಾದ ತಾರತಮ್ಯ ಅನ್ಯಾಯಗಳೂ ಅಷ್ಟೆ ಮುಖ್ಯ. ಇವನ್ನು ಹೋಗಲಾಡಿಲು ಇದೊಂದು ರಾಚನಿಕ ಅನ್ಯಾಯ ಎಂದು ಪರಿಗಣಿಸಿ ರಚನೆಯನ್ನು ಟೀಕಿಸಿದರೆ ಅನ್ಯಾಯ ಸಂಪೂರ್ಣವಾಗಿ(ಅಥವಾ ಅಪೂರ್ಣವಾಗಿ) ಹೋಗಲು ಸಾಧ್ಯವಿಲ್ಲ, ಇದಕ್ಕೆ ಎರಡು ಸಾಧ್ಯತೆಗಳಿವೆ, ೧. ಜಾತಿವ್ಯವಸ್ಥೆಯೇ ಸಾಮಾಜಿಕ ರಚನೆಯಾಗದಿರುವಾಗ ಜಾತಿವ್ಯವಸ್ಥೆಯೇ ಸಾಮಾಜಿಕ ರಚನೆ ಎಂದು ಟೀಕೆ ಮಾಡುವುದರಿಂದ ಇಲ್ಲದೆ ಇರುವ ವ್ಯವಸ್ಥೆಯನ್ನು ಹೋಗಲಾಡಿಸಲು ವ್ಯರ್ಥಪ್ರಯತ್ನ ಮಾಡಿದ ಹಾಗೆ ಆಗುತ್ತದೆ, ಇದಕ್ಕೆ ಕಳೆದ ೬೦ ವರ್ಷಗಳಲ್ಲಿ ಶೋಷಿತ ಸಮುದಾಯಗಳ ಮೇಲೆ ಕಡಿಮೆಯಾಗದ ದಬ್ಬಾಳಿಕೆಗಳೇ ನಿದರ್ಶನಗಳಾಗಿವೆ, (ಖೈರ್ಲಾಂಜಿ, ಕಂಬಾಲಪಲ್ಲಿ). ಜಾತಿಯ ತಾರತಮ್ಯಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗುತ್ತದೆ, ಅದು ಮೇಲ್ಜಾತಿಯವರಿರಲಿ ಅಥವಾ ಕೆಳಜಾತಿಯವರಿರಲಿ. ೨. ಈ ಮೊದಲೇ ಹೇಳಿದಂತೆ ಜಾತಿಯ ಹೊರತಾದ ಶೋಷಣೆ, ತಾರತಮ್ಯಗಳೂ ಭಾರತದಲ್ಲಿ ಇವೆ, ಕೇವಲ ಜಾತಿವ್ಯವಸ್ಥೆಯಿಂದ ಮಾತ್ರ ಅನ್ಯಾಯ ಆಗುತ್ತಿದೆ ಎಂದು ಹೇಳುವುದರಿಂದ ಜಾತಿಯ ಹೊರತಾಗಿ ನಡೆಯುತ್ತಿರುವ ಅನ್ಯಾಯಗಳನ್ನು ಗುರುತಿಸುವಲ್ಲಿ ಸೋಲುತ್ತೇವೆ. ಹಾಗೆಯೇ ಸಮಾಜದಲ್ಲಿರುವ ಶೋಷಣೆಗಳನ್ನು ಪರಿಹರಿಸಲು ಜಾತಿ ಚೌಕಟ್ಟೊಂದೇ ಸಾಕು ಎಂಬುದರ ಅರ್ಥ ಜಾತಿ ಹೊರತಾದ ಅನ್ಯಾಯಗಳು ಮುಖ್ಯವಲ್ಲ ಎಂಬುದೇ ಆಗಿರುತ್ತದೆ. ಆದ್ದರಿಂದ ಸಮಾಜದಲ್ಲಿರುವ ಎಲ್ಲಾ ರೀತಿಯ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸುವಲ್ಲಿ ಈ ಜಾತಿವ್ಯವಸ್ಥೆ ಸಿದ್ಧಾಂತ ಸೋಲುತ್ತದೆ. ಜೊತೆಗೆ ಮಾನವೀಯ ಸಂಬಂಧಗಳಲ್ಲಿ ಹುಟ್ಟುವ ಹಲವಾರು ಸಮಸ್ಯೆಗಳನ್ನು ಜಾತಿಸಮಸ್ಯೆಯನ್ನಾಗಿ ಬದಲಾಯಿಸುತ್ತದೆ. ಹಾಗಾಗಿ ಎಲ್ಲಾ ರೀತಿಯ ಅನ್ಯಾಯಗಳು ತೊಲಗಿ ಉತ್ತಮ ಸಮಾಜದ ಅಗತ್ಯವಿಲ್ಲ ಕೆಲವು ರೀತಿಯ ಶೋಷಣೆಗಳು ಮಾತ್ರ ತೊಲಗಲಿ ಎಂಬುದು ದೇವನೂರು ಮಹಾದೇವರವರ ಆಶಯ ಅಲ್ಲ ಎಂದು ನಂಬುತ್ತೇನೆ.
ಮೊತ್ತೊಂದು ವಿಷಯ, ವರ್ಣಬೇದ ಈ ಜಗತ್ತು ಕಂಡ ಘನ ಘೋರ ಅನ್ಯಾಯ, ಅದು ಪಾಶ್ಚಿಮಾತ್ಯ ರಾಷ್ಟದಲ್ಲಿ ಸಾಮಾಜಿಕ ರಚನೆಯ ಸಮಸ್ಯೆ ಎಂದು ಪರಿಗಣಿಸದೆ ಅದನ್ನು ಪರಿಹರಿಸುವತ್ತ ಹೆಚ್ಚಿನ ಗಮನ ಹರಿಸಿ ಯಶಸ್ವಿಯಾದರು.. ಆದರೆ ಇಲ್ಲಿ ಜಾತಿ ತಾರತಮ್ಯಗಳನ್ನು ರಚನಾತ್ಮಕ ಎಂದು ಪರಿಗಣಿಸಿ ದಿನೇ ದಿನೇ ಅದು ಕಡಿಮೆಯಾಗುವ ಸಾಧ್ಯತೆಯನ್ನು ದೂರವಿಡುವಂತೆ ಕಾಣುತ್ತಿದೆ. ಆದ್ದರಿಂದಲೆ ಇಂತಹ ಅನ್ಯಾಯಗಳನ್ನು ಪರಿಹರಿಸಲು ರಾಚನಿಕ ಎಂದು ಪರಿಗಣಿಸುವ ಬದಲು ಅದೊಂದು ಶೋಷಣೆ ಎಂದು ಪರಿಗಣಿಸಬೇಕಾಗಿದೆ. ಶೋಷಣೆ ಎಂದು ಪರಿಗಣಿಸಿದ್ದರೂ ಸಹ ಅದರ ಮೂಲ ಜಾತಿವ್ಯವಸ್ಥೆ ಎಂದು ತಪ್ಪಾಗಿ ಭಾವಿಸಲಾಗಿದೆ. ಇಲ್ಲಿ ನಮ್ಮ ಪ್ರಶ್ನೆ, ಶೋಷಣೆಯನ್ನು ಹೋಗಲಾಡಿಸುವುದು ಮುಖ್ಯವೋ ಅಥವಾ ಇಲ್ಲದ ಮೂಲವನ್ನು ಹುಡುಕಿಕೊಂಡು ಹೋಗುವುದು ಮುಖ್ಯವೋ? ಅದರ ಮೂಲ ಎಂದು ಗುರುತಿಸಿರುವ ಸಂಗತಿಯ ಬಗ್ಗೆ ಇನ್ನೂ ೧೦೦ ವರ್ಷ ಹಾಗೆಯೇ ಮುಂದುವರೆದು ಇರುವ ಶೋಷಣೆಯನ್ನು ಹೆಚ್ಚಿಸುವುದು ಮುಖ್ಯವೋ? ಇದನ್ನು ಬಾಲುರವರು ಸಂಶೋಧನೆಯ ಮೂಲಕ ಹೇಳಿದರೆ ಅದು ತೀರ ಮುಳ್ಳು ಚುಚ್ಚಿಸಿಕೊಂಡವರಂತೆ ಅಲವತ್ತುಕೊಳ್ಳುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಸಂಶೋಧಕರಿಗೂ ಇತರರಿಗೆ ಇರುವಂತೆ ಸಾಮಾಜಿಕ ಕಾಳಜಿ ಇದ್ದೇ ಇರುತ್ತದೆ. ಅನ್ಯಾಯ, ಶೋಷಣೆಗಳನ್ನು ಹೋಗಲಾಡಿಸಲು ಒಬ್ಬರು ಕಂಡುಕೊಂಡ ಪರಿಹಾರ ಮಾರ್ಗ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದೆನಿಸಿದರೆ ಮತ್ತೊಬ್ಬರು ಮತ್ತೊಂದು ಮಾರ್ಗವನ್ನು ಕಂಡುಕೊಳ್ಳುವಲ್ಲಿ ತಪ್ಪೇನಿದೆ? ಇಂತಹ ಮಾರ್ಗವನ್ನೇ ಕಂಡುಕೊಳ್ಳಬಾರದು ಎಂಬ ಕಟ್ಟಪ್ಪಣೆ ಮಹಾದೇವರಂತವರಿಂದ ಬರತಕ್ಕದ್ದಲ್ಲ. ಅದರ ಬದಲಿಗೆ ನಿಮ್ಮ ಪರಿಹಾರ ಮಾರ್ಗ ನಮ್ಮ ಮಾರ್ಗಕ್ಕಿಂತ ಹೇಗೆ ಹೆಚ್ಚು ಸಮಂಜಸ ಎಂದು ಚರ್ಚೆಮಾಡಬಹುದಿತ್ತು. ಇದುವರೆಗಿನ ಪರಿಹಾರ ಮಾರ್ಗವನ್ನು ನಾನು ಅರ್ಥೈಸಿಕೊಂಡಿರುವಂತೆ ಅದನ್ನು ದೇವನೂರು ರವರ ಭಾಷೆಯಲ್ಲೇ ಹೇಳುವುದಾದರೆ ಇಲಿಯನ್ನು ಹಿಡಿದು ಗುಡ್ಡ ತೆಗೆಯುತ್ತಿದ್ದಾರೆ. ಇಲಿ ತೆಗೆಯುವ ಬದಲು ಗುಡ್ಡವನ್ನು ತೆಗೆಯುವ ಮಹಾತ್ಕಾರ್ಯಕ್ಕೆ ಕೈಹಾಕಿದ್ದಾರೆ. (ಇಲ್ಲಿ ಇಲಿ ಎಂದರೆ ತಾರತಮ್ಯ ಹಾಗೂ ಗುಡ್ಡ ಎಂಬುದು ಇಡೀ ಭಾರತೀಯ ಸಂಸ್ಕೃತಿ)
೪. ಕಣ್ಣೆದುರು ಕಾಣುತ್ತಿರುವ ಸತ್ಯವನ್ನು ನಿಜವಾಗಿಯೂ ಯಾರು ಮರೆಮಾಚುತ್ತಿದ್ದಾರೆ? ದೇವನೂರುರವರಾ ಅಥವಾ ಬಾಲುರವರಾ? ಒಂದೊಮ್ಮೆ ದೇವನೂರು ರವರು ಹೇಳುವ ಹಾಗೆ ನಮ್ಮ ಸಮಾಜ, ಸಂಸ್ಕೃತಿ ಕೇವಲ ತಾರತಮ್ಯ ಮಾಡಿಕೊಂಡು ಬಂದಿರುವುದೇ ಹೌದಾದರೆ ಈ ಮುಂದಿನ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ: ೧. ಇಲ್ಲಿ ಯಾರ ನಡುವೆಯೂ ಮಾನವೀಯ ಸಂಬಂಧವೇ ಇದ್ದಿಲ್ಲ ಎಂದಾದರೆ ಒಂದು ಸಮಾಜವಾಗಿ ಅಥವಾ ಹಲವು ಸಮಾಜಗಳಾಗಿ ಇಲ್ಲಿಯವರೆಗೂ ಬದುಕಿ ಬಂದಿರಲು ಹೇಗೆ ಸಾಧ್ಯ? ಹಾಗೂ ಕೇವಲ ಅನ್ಯಾಯ ತಾರತಮ್ಯ ಮಾಡಿಕೊಂಡೇ ಶತಮಾನಗಳ ಕಾಲ ಒಂದು ಸಮಾಜ ನಡೆದು ಬರುತ್ತದೆ ಎಂದರೆ ಅದಕ್ಕಿಂತ ಪರಮಾಶ್ಚರ್ಯವಾದ ವಿಷಯ ಮತ್ತೊಂದಿಲ್ಲ, ಒಂದೊಮ್ಮೆ ಹಾಗೆ ಮಾಡಿಕೊಂಡು ಬಂದರೆ ಯಾವ ಸಮಾಜವೂ ಇಲ್ಲಿಯವರೆಗೆ ಬದುಕಿರಲು ಸಾಧ್ಯವೇ ಇಲ್ಲ.
೫. ಜಾತಿವ್ಯವಸ್ಥೆ ಇಲ್ಲ ಎಂದರೆ ಜಾತಿಗಳನ್ನು ನಾಶಮಾಡಿ ಉಪಜಾತಿಗಳಿಂದ ಕೂಡಿದ ಭಾರತವನ್ನು ಕಟ್ಟಬೇಕೆಂದು ಬಾಲು ತಂಡ ವಾದಿಸುತ್ತದೆ ಎಂದು ದೇವನೂರು ರವರು ಆರೋಪಿಸುತ್ತಾರೆ. ಜಾತಿ ಮತ್ತು ಉಪಜಾತಿಯ ಸಂಕೀರ್ಣ ಸಂಬಂಧದ ಕುರಿತು ಜಾತಿವ್ಯವಸ್ಥೆಯ ಸಿದ್ಧಾಂತ ತನ್ನ ವಾದವನ್ನು ಮಂಡಿಸುತ್ತದೆ. ಅಂದರೆ ಜಾತಿವ್ಯವಸ್ಥೆಯ ಅಸ್ತಿತ್ವಕ್ಕೆ ಜಾತಿ ಮತ್ತು ಉಪಜಾತಿ ಗಳ ನಡುವಿನ ಸಂಬಂಧ ಮುಖ್ಯವಾದವು ಎಂಬಂತೆ ಆ ಸಿದ್ಧಾಂತಗಳು ತಿಳಿಸುತ್ತವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಜಾತಿವ್ಯವಸ್ಥೆ ಇರದಿದ್ದರೆ ಜಾತಿ ಉಪಜಾತಿಗಳ ಸಂಬಂಧದ ಪ್ರಶ್ನೆಯೇ ಏಳುವುದಿಲ್ಲ. ಹಾಗೆ ನೋಡಿದರೆ ಉಪಜಾತಿಗಳು ಎಂಬ ಪ್ರಭೇದದ ಅಸ್ತಿತ್ವವೇ ಇಲ್ಲವಾಗಿಬಿಡುತ್ತದೆ, ಹಾಗೆಂದ ಮೇಲೆ ಬಾಲು ರವರು ಅವುಗಳ ಅಸ್ತಿತ್ವವನ್ನೇ ಅನುಮಾನದಲ್ಲಿಟ್ಟಿರುವಾಗ ಉಪಜಾತಿಗಳಿಂದ ಕೂಡಿದ ಭಾರತವನ್ನು ಕಟ್ಟಲು ಹೊರಟಿದ್ದಾರೆ ಎಂಬ ವಾದವನ್ನು ಮಂಡಿಸಲು ಹೇಗೆ ಸಾಧ್ಯ? ಜಾತಿವ್ಯವಸ್ಥೆ ಇಲ್ಲ ಜಾತಿ ಇದೆ ಎಂದು ಹೇಳುತ್ತಿರುವುದನ್ನು ದೇವನೂರು ರವರು ಸ್ವತಃ ನಮೂದಿಸುತ್ತಾರೆ, ಆದರೆ ಜಾತಿ ಇದೆ ಎಂದ ಮಾತ್ರಕ್ಕೆ ಉಪಜಾತಿಗಳೂ ಇವೆ ಎಂಬ ಅರ್ಥವನ್ನು ಅದು ಹೊರಡಿಸುವುದಿಲ್ಲ. ಜಾತಿವ್ಯವಸ್ಥೆಯ ಸಿದ್ಧಾಂತಕ್ಕೆ ಉಪಜಾತಿಗಳ ವರ್ಗೀಕರಣ ಮುಖ್ಯವಾಗುತ್ತದೆಯೇ ಹೊರತು ಆ ಸಿದ್ಧಾಂತವನ್ನು ವಿರೋಧಿಸಲು ಅಲ್ಲ, ಹಾಗೆ ನೋಡಿದರೆ ಆ ಸಿದ್ಧಾಂತವನ್ನು ವಿರೋಧಿಸುವುದು ಉಪಜಾತಿ ವರ್ಗೀಕರಣವನ್ನೂ ಸಹ ವಿರೋಧಿಸಿದಂತೆಯೇ ಆಗುತ್ತದೆ. ಮತ್ತೊಂದು ವಿಷಯವೆಂದರೆ ಬಾಲುರವರು ಜಾತಿ ನಾಶವಾಗಬೇಕು ಅಥವಾ ಇರಬೇಕು ಎಂಬಂತಹ ನಿರ್ಣಾಯಕ ವಾದವನ್ನು ನನಗೆ ತಿಳಿದಿರುವ ಮಟ್ಟಿಗೆ ಎಲ್ಲಿಯೂ ಮಂಡಿಸಿಲ್ಲ, ಹಾಗೆಯೇ ಉಪಜಾತಿಗಳು ಇರಬೇಕು ಎಂದೂ ಸಹ ಹೇಳಿಲ್ಲ. ಆದ್ದರಿಂದ ಬಾಲುರವರನ್ನು ಟೀಕಿಸುವವರು ಅವರ ಬರಹಗಳನ್ನು ಸರಿಯಾಗಿ ಓದದೆ, ತಿರುಚಿ ಮಾತನಾಡುತ್ತಿದ್ದಾರೆ ಈ ಕಾರಣಕ್ಕೆ ಬಾಲುರವರ ಕುರಿತು ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆ ಎಂಬ ಅನುಮಾನ ಬರುತ್ತದೆ. ಇನ್ನು ಆಚರಣೆಗಳು ಮತ್ತು ಉಪಜಾತಿಗಳ ನಡುವೆ ಏನು ಸಂಬಂಧ ಎಂದೂ ಸಹ ಮಹಾದೇವ ರವರು ಎಲ್ಲಿಯೂ ವಿವರಿಸಿಲ್ಲ. ನನ್ನ ಪ್ರಕಾರ ಅವೆರಡಕ್ಕೂ ಯಾವ ಸಂಬಂಧವೂ ಇಲ್ಲ, ಅಂದರೆ ಒಂದು ಆಚರಣೆಯನ್ನು ಮಾಡಿಕೊಂಡು ಹೋಗುವುದಕ್ಕೂ ಒಂದು ಜಾತಿ ಅಸ್ತಿತ್ವಕ್ಕೆ ಬರುವುದಕ್ಕೂ ಏನು ಸಂಬಂಧವಿದೆ ಎಂದು ಇದುವರೆಗೂ ಯಾರೂ ವಿವರಿಸಿಲ್ಲ.
೬. ಭಾರತದಲ್ಲಿ ಧರ್ಮಗಳು ಇರಬಾರದು ಎನ್ನುವುದು ಬಾಲು ರವರ ಹುನ್ನಾರ ಎಂದು ಮಹಾದೇವರ ರವರ ಮತ್ತೊಂದು ಆರೋಪ. ಆದರೆ ಬಾಲು ತಮ್ಮ ಹೀದನ್ ಇನ್ ಹಿಸ್ .. ಪುಸ್ತಕದಲ್ಲಿ ಭಾರತದಲ್ಲಿ ಧರ್ಮವಿರಬಾರದು ಎಂದು ವಾದಿಸಿಲ್ಲ, ಬದಲಿಗೆ ರಿಲಿಜನ್ ಎಂದು ಕರೆಯುವಂತಹ ವಿದ್ಯಮಾನ ಭಾರತದಲ್ಲಿ ಇಲ್ಲ, ಇಲ್ಲಿರುವುದು ಸಂಪ್ರದಾಯ ಎನ್ನುತ್ತಾರೆ. ಹಾಗೆಯೇ ರಿಲಿಜನ್ ನ್ನು ಧರ್ಮ ಎಂದು ತಪ್ಪಾಗಿ ಅನುವಾದ ಮಾಡಿಕೊಂಡು ಬಳಸುತ್ತಿದ್ದೇವೆ. ಹಾಗೂ ನಮ್ಮ ಧರ್ಮಕ್ಕೆ ಬೇರೆ ಬೇರೆಯದೇ ಅರ್ಥಗಳಿವೆ, ಅವುಗಳನ್ನು ರಿಲಿಜನ್ ಅಂದು ಅರ್ಥೈಸಲು ಸಾಧ್ಯವಿಲ್ಲ. ಹಾಗಾಗಿ ರಿಲಿಜನ್ ಮತ್ತು ಧರ್ಮ ಇವೆರಡೂ ಒಂದೇ ಅಲ್ಲ. ಒಂದೊಮ್ಮೆ ಬಾಲು ಧರ್ಮದ ಐಕ್ಯತೆಯನ್ನು ಒಡೆಯುತ್ತಿದ್ದಾರೆ, ಧರ್ಮ ಇರಬಾರದು ಎಂದು ಹೇಳುತ್ತಿದ್ದಾರೆ ಎಂದು ದೇವನೂರುರವರು ಹೇಳುತ್ತಿರುವುದನ್ನು ಈ ಮುಂದಿನಂತೆ ಅರ್ಥಮಾಡಿಕೊಳ್ಳಬಹುದೆ: ಭಾರತದಲ್ಲಿ ರಿಲಿಜಿಯನ್ ಇರಬೇಕು, ರಿಲಿಜಿಯನ್ ಐಕ್ಯತೆ ಇರಬೇಕು ಎಂದು ಮಹಾದೇವರವರು ವಾದಿಸುತ್ತಿರಬಹುದೆ? ಒಂದೊಮ್ಮೆ ಹೀಗೆ ವಾದಿಸುತ್ತಿದ್ದಾರೆಂದರೆ ಹಿಂದುತ್ವವನ್ನು ಅವರು ವಿರೋಧಿಸಲು ಹೇಗೆ ಸಾಧ್ಯ? ಹಿಂದೂಯಿಸಂ ಎಂಬ ರಿಲಿಜನ್ ಇಲ್ಲವೆಂದು ಬಾಲುರವರು ಹೇಳಿದರೆ ಅವರು ಬಲಪಂಥೀಯ ಎಂಬ ಆರೋಪ ಬರುತ್ತದೆ, ಆದರೆ ದೇವನೂರುರವರು ಧಾರ್ಮಿಕ ಐಕ್ಯತೆ ಬೇಕು ಎಂದು ಮಾತನಾಡುತ್ತಾರೆ, ಆದರೂ ಅವರು ಬಲಪಂಥೀಯರಾಗುವುದಿಲ್ಲ, ಈ ವಿರೋಧಾಬಾಸವೇ ನನಗೆ ಅರ್ಥವಾಗುತ್ತಿಲ್ಲ. ಆದ್ದರಿಂದ ಬಾಲು ರವರು “ರಿಲಿಜನ್” ಬಗ್ಗೆ ಏನು ಹೇಳುತ್ತಿದ್ದಾರೆಂದು ಅಪಾರ್ಥ ಮಾಡಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಘನವ್ಯಕ್ತಿತ್ವ ಹೊಂದಿರುವಂತಹ ದೇವನೂರುರವರಿಗೆ ತಕ್ಕುದಾದುದಲ್ಲ.
೭. ಲೋಕದ ಡೊಂಕ ನೀವೇಕೆ ತಿದ್ದಿವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವಾ…ಈ ವಚನವನ್ನು ದೇವನೂರು ರವರು ಸರಿಯಾಗಿ ಅರ್ಥೈಸುತ್ತಿದ್ದೇನೆಂದು ಈ ಮುಂದಿನಂತೆ ಹೇಳುತ್ತಾರೆ: “ಲೋಕದ ಡೊಂಕ ನೀವೇಕೆ ತಿದ್ದುವಿರಿ ಎನ್ನುವುದರಲ್ಲಿ ಲೋಕದ ಡೊಂಕು ನಿಮ್ಮಲ್ಲೂ ಇದೆ ಅದನ್ನು ತಿದ್ದಿಕೊಳ್ಳಿ, ಆಗ ಲೋಕದ ಡೊಂಕು ಅದಾಗಿಯೇ ಅಳಿಸಿಹೋಗುತ್ತದೆ.. ಆದರೆ ಲೋಕದ ಡೊಂಕು ನಿಮ್ಮಲ್ಲೂ ಇದೆ ಮತ್ತು ನಿಮ್ಮಲ್ಲೇ ಇದೆ ಎಂದು ಹೇಳುವ ವಿಧಾನದಲ್ಲಿ ವ್ಯತ್ಯಾಸವಿದೆ. ನಿಮ್ಮಲ್ಲೂ ಆ ಡೊಂಕು ಇದೆ ಎಂಬುದರ ಅರ್ಥ ಲೋಕದಲ್ಲಿರುವ ಡೊಂಕು ಅಥವಾ ಅದರ ಪ್ರಭಾವ ನಿಮ್ಮಲ್ಲೂ ಬೇರೂರಿದೆ ಎಂದಾಗುತ್ತದೆ, ಆದರೆ ನಿಮ್ಮಲ್ಲೇ ಇದೆ ಎಂದರೆ, ಲೋಕದಲ್ಲಿ ಏನಿದಿಯೋ ತಿಳಿಯದು ಆದರೆ ಅಲ್ಲಿ ಡೊಂಕಿದೆ ಎಂಬ ತೀರ್ಮಾನ ನಿಮ್ಮ ತಲೆಯಲ್ಲಿ ಇದೆ ಎಂದಾಗುತ್ತದೆ. ಹಾಗಾದರೆ ವಚನಕಾರರು ಇಲ್ಲಿ ಯಾವುದನ್ನು ಹೇಳುತ್ತಿದ್ದಾರೆ. ಖಂಡಿತವಾಗಿಯೂ ಬಸವಣ್ಣನವರು ಈ ವಚನದಲ್ಲಿ ಎರಡನೆಯ ಅರ್ಥವನ್ನು ಹೇಳುತ್ತಿದ್ದಾರೆ. ಅದನ್ನು ಮತ್ತೂ ಸ್ಪಷ್ಟ ಪಡಿಸುವಂತೆ ಅದೇ ವಚನದ ಕೊನೆಯ ಸಾಲುಗಳು ನೆರಮನೆಯ ದುಖಕ್ಕೆ ಅಳಬೇಡಿ ಎಂದೂ ಸಹ ಹೇಳುತ್ತಾರೆ, ಅದರ ಅರ್ಥವೇನು? ಈ ಲೋಕದ ಜಂಜಾಟಕ್ಕೆ ಕಿವಿಗೊಡಬೇಡಿ, ಕೂಡಲ ಸಂಗಮನನ್ನು ಆರಾಧಿಸಿ ಎಂಬ ಅರ್ಥವನ್ನು ನೀಡುತ್ತಿಲ್ಲವೆ? ನಿಮ್ಮನ್ನು ನೀವು ಅರಿತುಕೊಳ್ಳುವುದು ಬಿಟ್ಟು ಜಗತ್ತಿನ ವ್ಯವಹಾರಕ್ಕೆ ಮಾರುಹೋದರೆ ಶರಣರಾಗಿರುವವರಿಗೆ ಕೂಡಲ ಸಂಗಮ ಮೆಚ್ಚುವುದಿಲ್ಲ ಎಂಬ ಅರ್ಥವನ್ನು ಅವರು ಹೇಳುತ್ತಿಲ್ಲವೆ? ಹೆಗಡೆಯವರ ಲೇಖನವೂ ಸಹ ಈ ವಚನವನ್ನು ಹೀಗೆಯೇ ಅರ್ಥಮಾಡಿಕೊಂಡಿರುವುದು. ಲೋಕದಲ್ಲಿ ಡೊಂಕು ಇದೆ ಎಂದು ಭಾವಿಸಿ ನರಳಬೇಡಿ, ಆ ಡೊಂಕು ಇರುವುದು ನಿಮ್ಮಲ್ಲಿ ಅದನ್ನು ಸರಿಪಡಿಸಿಕೊಳ್ಳಿ ಎಂದು, ಹಾಗಾದರೆ ಲೋಕದ ಡೊಂಕು ಅದಾಗಿಯೇ ಸರಿಯಾಗುತ್ತದೆ ಎಂದು ವಚನಕಾರರು ಎಲ್ಲಿ ಹೇಳಿದ್ದಾರೆ? ಅದನ್ನು ಸುಮ್ಮನೆ ಕಲ್ಪಿಸಿಕೊಂಡು ಹೇಳುವ ಅಗತ್ಯವಾದರೂ ಏನಿದೆ? ವಚನಗಳಲ್ಲಿ ಏನನ್ನು ಹೇಳಲಾಗಿದೆಯೋ ಅದನ್ನು ಅರ್ಥೈಸುವುದು ಬಿಟ್ಟು ನಾವು ನಂಬಿಕೊಂಡಿರುವ ಐಡಿಯಾಲಜಿಯನ್ನು ಏಕೆ ವಚನಗಳ ಮೇಲೆ ಹೇರಬೇಕು?
ಹಾಗೆಯೇ ಮತ್ತೊಂದು ವಚನವನ್ನೂ ಉಲ್ಲೇಖಿಸಬಹುದು, ಪರಚಿಂತೆ ಎಮಗೇಕಯ್ಯ?ನಮ್ಮ ಚಿಂತೆ ನಮಗೆ ಸಾಲದೆ? ಕೂಡಲ ಸಂಗಯ್ಯ ಒಲಿದನೋ ಒಲಿಯನೋ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು. ಇದನ್ನು ಹೇಗೆ ಅರ್ಥೈಸುತ್ತೀರಿ?
ಇಲ್ಲಿ ದೇವನೂರು ರವರು ಪರ ಚಿಂತೆ ಎಮಗೇಕಯ್ಯ..ವಚನವನ್ನು ಹೇಗೆ ಅರ್ಥೈಸುತ್ತಾರೆಂಬುದು ಕುತೂಹಲಕಾರಿಯಾದ ಸಂಗತಿಯಾಗಿದೆ.
೮. Performative knowledge ಅಥವಾ ಕ್ರಿಯಾಜ್ಞಾನವನ್ನು ಮಹಾದೇವ ಎಷ್ಟು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬಾಲು ಹೇಳುವುದು ಈ ಮುಂದಿನಂತೆ: ಭಾರತದಲ್ಲಿರುವ ಸಮುದಾಯಗಳು ಬದುಕಲು ಅಗತ್ಯವಿರುವ ಜ್ಞಾನವನ್ನು ಕ್ರಿಯೆಯಲ್ಲಿ ತೊಡಗಿಸಿಕೊಂಡೇ ಕಲಿಯುತ್ತವೆ, ಕ್ರಿಯೆಯನ್ನು ಮಾಡುತ್ತಾ ಮಾಡುತ್ತಾ ಜ್ಞಾನವನ್ನು ಕಟ್ಟಿಕೊಳ್ಳುವ ವಿಧಾನ ಇದಾಗಿದೆ. ಇದು ಭಾರತದಲ್ಲಿ ಪ್ರಧಾನವಾಗಿದೆ, ಹಾಗೆಯೇ ಮತ್ತೊಂದೆಡೆ ಸೈದ್ಧಾಂತಿಕ ಜ್ಞಾನವೂ ಇದೆ ಅದು ಪಾಶ್ಚಿಮಾತ್ಯರಲ್ಲಿ ಪ್ರಧಾನವಾಗಿದ್ದು ಅವರಲ್ಲಿ ಕ್ರಿಯಾಜ್ಞಾನ ಅಧೀನ ವಾಗಿರುತ್ತದೆ ಎಂಬುದು ಬಾಲುರವರ ವಾದ. ಇಷ್ಟು ಸರಳವಾಗಿ ಇಡಲು ಸಾಧ್ಯವಿಲ್ಲ ಆದರೂ ಪ್ರಯತ್ನಿಸಿದ್ದೇನೆ.. ಆದ್ದರಿಂದ, ಕ್ರಿಯಾಜ್ಞಾನವೆಂದರೆ ಸತಿಪದ್ದತಿ, ನರಬಲಿ ಎಂಬಂತಹ ಆಚರಣೆಗಳಿಗೆ ಇಳಿಸಿ ಹೊಸ ರೀತಿಯ ಅರ್ಥವನ್ನು ದೇವನೂರು ರವರು ನೀಡುತ್ತಿದ್ದಾರೆ. ಹಾಗಾದರೆ ಇಡೀ ಭಾರತದಲ್ಲಿ ಸತಿ, ಮತ್ತು ಅಂತಹ ಅಮಾನುಷ ಆಚರಣೆಗಳು ಮಾತ್ರ ಇದ್ದವೆ? ಅದಕ್ಕಿಂತ ಹೊರತಾದ ಯಾವ ಆಚರಣೆಗಳೂ ಇರಲಿಲ್ಲವೆ? ಪ್ರತಿಯೊಂದು ಸಮಾಜದಲ್ಲಿಯೂ ಆದರ್ಶಯುತವಾದ ಮೌಲ್ಯಗಳು ಹಾಗೂ ಅದಕ್ಕೆ ವಿರುದ್ಧವಾದ ಚಟುವಟಿಕೆಗಳು ಇದ್ದೇ ಇರುತ್ತವೆ. ಅಂತೆಯೇ ಭಾರತದಲ್ಲಿಯೂ ಅಂತಹ ಅಮಾನುಷ ಆಚರಣೆಗಳು ಇದ್ದವು ತದನಂತರ ಅವುಗಳ ತೊಂದರೆಯನ್ನು ಮನಗಂಡು ಅವುಗಳನ್ನು ಬಿಟ್ಟರು. ಹಾಗೆಂದು ಆ ಎರಡು ಆಚರಣೆಗಳು ಮಾಯವಾದ ತಕ್ಷಣ ಎಲ್ಲವೂ ಅತ್ಯತ್ತಮವಾದ ಆಚರಣೆಗಳೇ ಇಲ್ಲಿವೆ ಎಂಬುದಾಗಿಯೂ ಹೇಳಲು ಸಾಧ್ಯವಿಲ್ಲ, ಅಲ್ಲಲ್ಲಿ ಇರುವ ಹುಳುಕುಗಳನ್ನು ಸರಿಮಾಡಿಕೊಂಡು ಸಮಾಜ ಮುಂದುವರೆದುಕೊಂಡು ಹೋಗುತ್ತದೆ. ಬಾಲುರವರ ಕ್ರಿಯಾಜ್ಞಾನದ ಸಿದ್ಧಾಂತವನ್ನು ಹೀಗೆ ಅಪಭ್ರಂಶಗೊಳಿಸಿ ಅರ್ಥೈಸಿಕೊಳ್ಳಲು ಏಕೆ ಮುಂದಾಗುತ್ತಿದ್ದಾರೆ ಎಂಬುದು ನನ್ನಂತ ಕಿರಿಯನಿಗೆ ಅರ್ಥವಾಗದ ಸಂಗತಿಯಾಗಿದೆ. ಜೊತೆಗೆ ನನ್ನ ಓದಿನ ಪ್ರಕಾರ, ಕ್ರಿಯಾಜ್ಞಾನಕ್ಕೂ ಮೇಲಿನ ಆಚರಣೆಗಳಿಗೂ ಸಂಬಂಧವೇ ಇಲ್ಲದಿರುವ ಸಾಧ್ಯತೆಯ ಕುರಿತು ದೇವನೂರಿಗೆ ಒಂದಿಷ್ಟು ಮಾಹಿತಿ ಇರಲಿಕ್ಕಿಲ್ಲ. ಏಕೆಂದರೆ ಬಾಲುರವರು ಅದರ ಕುರಿತು ಬರೆದಿರುವ ಬರಹವನ್ನು ಓದಿರಲಿಕ್ಕಿಲ್ಲ.
ದೇವನೂರು ಮಹಾದೇವರವರಿಂದ ಒಂದು ವೈಚಾರಿಕ ಮತ್ತು ಚರ್ಚಾಸ್ಪದವಾದ ಲೇಖನವನ್ನು ನಿರೀಕ್ಷಿಸಿ ಅವರ ಬರೆಹ ವನ್ನು ಓದಿದೆ. ಆದರೆ ನಿಜವಾಗಿಯೂ ನಿರಾಶೆಯಾಯಿತು. ’ಎದೆಗೆ ಬಿದ್ದ ಅಕ್ಷರ’ ಪುಸ್ತಕದಲ್ಲಿ ದೇವನೂರು ರವರು ಬರೆದಿರುವ ಕೆಲವು ಉತ್ತಮ ಒಳನೋಟಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡೇ ಅವರ ಪ್ರತಿಕ್ರಿಯೆಗಳನ್ನು ಓದಿದ್ದಕ್ಕೆ ಬಹುಶಃ ನನಗೆ ನಿರಾಶೆಯಾಗಿರಬಹುದು. ಹಾಗೂ ಚರ್ಚೆ ಮಾಡುವ ಅಂಕಣದಲ್ಲಿ ಆಜ್ಞೆ ಹೊರಡಿಸುವಂತಹ ಲೇಖನವನ್ನು ಅವರಿಂದ ನಾನು ನಿರೀಕ್ಷಿಸಿರಲಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂಬುದು ಲೇಖನ ಓದಿದಾಗಿನಿಂದ ನನ್ನ ತಲೆ ಕೊರೆಯುತ್ತಿದೆ…
Posted in ದೇವನೂರು ಮಹಾದೇವ, ವಚನ ಸಂವಾದ
29 April 2013
ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ
ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ? `ನಿಮ್ಮ ತಾಯಿ ಬಂಜೆ' ಅಂದರೆ ಏನು ತಾನೇ ಹೇಳಲು ಸಾಧ್ಯ? `ನಿಮಗೆ ತಲೆ ಕೆಟ್ಟಿದೆಯಾ' ಎಂದು ನಾವು ಪ್ರಶ್ನಿಸಬಹುದು ಅಷ್ಟೇ. ಅದಕ್ಕೆ ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ, `ನಾವು ಸಂಶೋಧನೆ ಮಾಡಿದ್ದೇವೆ' ಅಂತ. `ಏನಪ್ಪಾ ಅಂಥ ಸಂಶೋಧನೆ?' ಅಂದರೆ `ನೀವು ಹುಟ್ಟಿದಾಗಲಿಂದ ಇಷ್ಟು ಕೋಟಿ, ಇಷ್ಟು ಲಕ್ಷ, ಇಷ್ಟು ಸಾವಿರ ಪದಗಳನ್ನು ಉಚ್ಚಾರ ಮಾಡಿರುತ್ತೀರಿ. ಅದರಲ್ಲಿ ಶೇಕಡಾ ಒಂದರಷ್ಟು ತಾಯಿ ಅಥವಾ ಅವ್ವ ಪದ ನಿಮ್ಮ ಬಾಯಿಂದ ಬಂದಿರುವುದಿಲ್ಲ.
ಹಾಗಾಗಿ ನಿಮ್ಮ ತಾಯಿ ಬಂಜೆ ಅಲ್ಲವೇ?' ಎಂದು ದಿಗ್ವಿಜಯ ಸಾಧಿಸಿದವರಂತೆ ಎದೆ ತಟ್ಟಿ ಹೇಳುತ್ತಾರೆ. ಡಂಕಿನ್ ಝಳಕಿಯವರ ತಳಪಾಯವೇ ಅಲ್ಲಾಡುತ್ತಿದೆ. ಅದರ ಮೇಲೆ ಸಂಶೋಧನಾ ಸೌಧ ಕಟ್ಟಲು ಹೊರಡುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳು ಸೂಟುಬೂಟು ಹ್ಯಾಟು ಟೈ ಹಾಕಿಕೊಂಡು ತಲೆಗೆ ಬಿಳಿ ವಿಗ್ ಕಣ್ಣಿಗೆ ಸೋಡಾಗ್ಲಾಸಿನ ಕನ್ನಡಕ ಧರಿಸಿ ಇದನ್ನು ಒಂದು `ಸಂಶೋಧನಾ ಪ್ರಹಸನ'ದಂತೆ ಪ್ರದರ್ಶಿಸಿದ್ದರೆ ಈ ಬಾಲಗುಂಪಿನ ಚಾತುರ್ಯಕ್ಕೆ ನಾವೂ ಸಂತಸಪಡಬಹುದಿತ್ತು.
ಆದರೆ ಇದು ಹಾಗಲ್ಲ. ಸಂತೆಗೆ ಮಾರಲು ಆಡು ಹಿಡಿದುಕೊಂಡು ಹೋಗುವ ಬಡವನೊಬ್ಬನಿಗೆ ನಾಕಾರು ಕಳ್ಳರು ಮೈಲಿಗೊಬ್ಬರಂತೆ ನಿಂತು `ನಾಯಿ ಹಿಡಿದುಕೊಂಡು ಎಲ್ಲಿಗೆ ಹೊರಟೆ?' ಎಂದು ಅಪಹಾಸ್ಯ ಮಾಡುತ್ತಾ ಬಡವನಿಗೆ ಮಂಕು ಕವಿಸಿ ಅವನೂ ಭ್ರಮೆಗೆ ಒಳಗಾಗಿ ತನ್ನ ಆಡನ್ನು ನಾಯಿ ಎಂದೇ ತಾನೂ ಭ್ರಮಿಸಿ ಅಲ್ಲೇ ಬಿಟ್ಟು ಹೋದಮೇಲೆ ಆಗ ಮಾತ್ರವೇ ಆ ಆಡನ್ನು ಕದಿಯುವ ಚತುರ ಚೋರರ ಸಂಚಿನ ಜಾಲದಂತೆ ಈ ಬಾಲಗುಂಪಿನ ಕೃತ್ಯ ಗೋಚರಿಸುತ್ತದೆ. ಆ ನಾಲ್ವರು ಕಳ್ಳರು ಆ ಬಡವನಿಂದ ಆಡನ್ನು ಬಲಾತ್ಕಾರದಿಂದ ಕಿತ್ತುಕೊಂಡೇ ಹೋಗಬಹುದಿತ್ತು. ಆದರೆ ಅವರು ಇಲ್ಲಿ ಮಾಡಿದ್ದು ಅಭಿಪ್ರಾಯ ರೂಪಿಸುತ್ತ ಮಾಡುವ ಮರೆಮೋಸದ ಕಳ್ಳತನ. ಅವರೂ ಸಂಶೋಧಕರೇ ಇರಬಹುದು. ಇಂದು ಕಾರ್ಪೊರೆಟ್ ಸೆಕ್ಟರ್‌ಗಳು ಅಭಿಪ್ರಾಯ ರೂಪಿಸಿ ಕಳ್ಳತನ ಮಾಡುವ ವಂಚನಾ ಕಲೆಯ ಕೌಶಲದಂತೆ ಈ ಸಂಶೋಧನೆ ಎಂಬುದೂ ಈ ಮಾರ್ಗ ಹಿಡಿಯುತ್ತಿದೆ.
ಇಲ್ಲೇನು ಕಳ್ಳತನ? ಅಥವಾ ಇದು ಯಾಕಾಗಿ? `ಸಾಮಾಜಿಕ ನ್ಯಾಯ, ಮೀಸಲಾತಿ, ಸರ್ವರಿಗೂ ಶಿಕ್ಷಣ, ಪ್ರಜಾಪ್ರಭುತ್ವ, ಸೆಕ್ಯುಲರಿಸಂ ಇಂಥವುಗಳೆಲ್ಲ ಪಾಶ್ಚಿಮಾತ್ಯ ವಸಾಹತುಶಾಹಿ ಪ್ರಭಾವದಿಂದ ಕಟ್ಟಲ್ಪಟ್ಟವು, ಇಂಥವುಗಳು ಭಾರತೀಯ ಅಲ್ಲ' ಎಂದು ಇವರು ಸಂಶೋಧನೆ ಜರುಗಿಸುತ್ತಿದ್ದಾರೆ. ಇಂಥವು ಇಲ್ಲಿಯವು ಅಲ್ಲ ಅಂತ ಇವುಗಳನ್ನು ಬುಡಸಮೇತ ಕಿತ್ತುಹಾಕುವ ಹುನ್ನಾರ ಇಲ್ಲಿದೆ. ಅದಕ್ಕಾಗಿ ಜಾತಿ, ಧರ್ಮ, ಅಧ್ಯಾತ್ಮ ಹಿಡಿದುಕೊಂಡು ಇದರ ಸುತ್ತಲೇ ಸುತ್ತುತ್ತಿದ್ದಾರೆ, ಬಲಿಪಶುವಿನ ಸುತ್ತಾ ಸುತ್ತುವ ಆಚರಣೆಯ ಪ್ರದರ್ಶನಕಾರರಂತೆ, ವೈದಿಕಶಾಹಿಯ ಯಾವುದೋ ಪಳೆಯುಳಿಕೆಯಂತೆ.
ಹೀಗೆ ಇವರ ಸಂಶೋಧನೆ `ಜಾತಿಗಳು ಇವೆ. ಆದರೆ ಜಾತಿವ್ಯವಸ್ಥೆ ಎಂಬುದು ಇಲ್ಲ' ಎಂದು ಹೇಳುತ್ತದೆ. ನನಗೆ ತಲೆಕೆಟ್ಟು ಹೋಗಿ ಪಿಯುಸಿ ಓದಿ, ಗಾರೆ ಕೆಲಸ ಮಾಡುವ ಹುಡುಗನೊಬ್ಬನಿಗೆ `ಏನಪ್ಪಾ ಹೀಗೆ ಅಂದರೆ' ಎಂದು ಕೇಳಿದೆ. ಅದಕ್ಕೆ ಅವ `ಇದು ಯಾವ್ತರಪ್ಪಾ ಅಂದ್ರೆ... ಹುಟ್ಟುಸ್ದೇ ಹೆರದೇ ಮಕ್ಳಾಯ್ತು ಅನ್ನೋತರ ಆಯ್ತದಲ್ಲಾ ಸಾರ್!' ಅಂದ! ಈ ಸಂಶೋಧಕರು ಬೆಟ್ಟ ಅಗೆದು ಇಲಿ ಹಿಡಿಯುತ್ತಿದ್ದಾರೆ ಅನಿಸುತ್ತೆ. ಇದರೊಡನೆ ಜಾತಿಗಳ ನಡುವೆ ಮೇಲು ಕೀಳು ಇಲ್ಲ ಅಂತ ತೋರಿಸಲು ದಣಿವರಿಯದ ಸಂಶೋಧನೆ ನಡೆಸುತ್ತಿದ್ದಾರೆ. ಜಾತಿವ್ಯವಸ್ಥೆ, ಜಾತಿಗಳ ನಡುವೆ ಮೇಲು ಕೀಳು ಇದ್ದರೆ ತಾನೇ ಸಾಮಾಜಿಕ ನ್ಯಾಯ, ಮೀಸಲಾತಿ ಇತ್ಯಾದಿಗಳಿಗೆ ಅರ್ಥ. ಅದೇ ಇಲ್ಲ ಎಂದು ಭ್ರಮಿಸುವಂತೆ ಮಾಡಿಬಿಟ್ಟರೆ? ಮೀಸಲಾತಿ, ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಕದಿಯುವುದಲ್ಲದೆ ಇದು ಮತ್ತೇನು? ಅದಕ್ಕಾಗಿ ಭಾರತದಲ್ಲಿ ಜಾತಿವ್ಯವಸ್ಥೆಯನ್ನು ಹುಟ್ಟು ಹಾಕಿದ್ದೇ ಬ್ರಿಟಿಷ್ ವಸಾಹತುಶಾಹಿ ಅಂತ `ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ' ಎಂಬಂತೆ ಮಾಡುತ್ತಿದ್ದಾರೆ. ಕಣ್ಣೆದುರು ಕಾಣುವುದನ್ನು ಮರೆಮಾಚಿ ತಮಗೆ ಬೇಕಾದ್ದನ್ನು ವಿಜೃಂಭಿಸಿ ವಾದಿಸುವ ವಕೀಲರಂತಾಗಿಬಿಟ್ಟಿದ್ದಾರೆ.
ಮುಂದುವರೆದಂತೆ ಇವರು ಜಾತಿಯನ್ನು ಜಾತಿಯಷ್ಟಕ್ಕೇ ಉಳಿಯಗೊಡಲೂ ಬಿಡುವುದಿಲ್ಲ. ಇವರ ಚಿಂತನಾ ಲಹರಿ ಹೀಗಿದೆ: ಜಾತಿಗಣತಿಯು ಸಮಾಜದಲ್ಲಿ ಬದುಕುತ್ತಿರುವ ಜನರ ಸ್ವ-ಅನುಭವವನ್ನು ಗ್ರಹಿಸುವಂತಿರಬೇಕು. ಲಿಂಗಾಯತ ಎಂಬುದನ್ನು (ಒಂದು) ಜಾತಿಯನ್ನಾಗಿ ಗುರುತಿಸದೆ ಸಾದರು, ಬಣಜಿಗ, ಪಂಚಾಚಾರ್ಯ ಮುಂತಾದ ಸಮಾಜದ ಹತ್ತು ಹಲವು ವಾಸ್ತವ ಗುಂಪುಗಳನ್ನು ಜಾತಿ ಎಂದು ಗುರುತಿಸಬೇಕಾಗುತ್ತದೆ. ಅಂತೆಯೆ ಕುರುಬರನ್ನು ಒಂದು ಜಾತಿಯಾಗಿಸದೆ ಅದರಲ್ಲಿನ ಕಾಡುಕುರುಬ, ಊರುಕುರುಬ, ಹತ್ತಿ ಕಂಕಣ, ಉಣ್ಣೆ ಕಂಕಣ ಎಂಬ `ಸಾಮಾಜಿಕವಾಗಿ ಗುರುತಿಸುವಿಕೆಯುಳ್ಳ' ಜಾತಿಗಳನ್ನು ಗುರುತಿಸಬೇಕಾಗಿದೆ. ಹೀಗೆ ಜನರ ಅನುಭವಕ್ಕೆ ಪೂರಕವಾಗಿಯೇ ಗುರುತಿಸಬೇಕಾಗುತ್ತದೆ. ಇದು ಈ ಗುಂಪಿನ ವಾದ. ಇದರ ಜೊತೆಗೆ, ಭಾರತೀಯತೆ ಎಂದರೆ ಅದು ಆಚರಣೆ ಮತ್ತು ಸಂಪ್ರದಾಯ ಎಂದು ಈ ಸಂಶೋಧಕರು ವಾದಿಸುತ್ತಾರೆ. ಭಾರತದಲ್ಲಿ ಆಚರಣೆ ಮತ್ತು ಸಂಪ್ರದಾಯ ಅಂದರೆ ಏನು? ಇದನ್ನು ಕಣ್ಣು ಮುಚ್ಚಿಕೊಂಡು ಆಚರಣೆ ಉರುಫ್ ಉಪಜಾತಿ ಎಂದುಬಿಡಬಹುದಲ್ಲವೇ? ಅಂದರೆ ಈ ಸಂಶೋಧಕರು ಉಪಜಾತಿಗಳನ್ನು ಉಳಿಸಿಕೊಳ್ಳಲು ಉರುಳುಸೇವೆ ಮಾಡುತ್ತಿದ್ದಾರೆ. ಇವರಿಗೆ ಉಪಜಾತಿಗಳೆಲ್ಲವೂ ಸೇರಿ ಜಾತಿಯಾಗುವುದೂ ಬೇಕಿಲ್ಲ. ಆ ಜಾತಿ ಈ ಜಾತಿ ಬೆರೆತು ಒಂದು ಧರ್ಮವಾಗುವುದೂ ಬೇಕಿಲ್ಲ. ಒಟ್ಟಿನಲ್ಲಿ ಭಾರತೀಯರು ತಂತಮ್ಮ ಉಪಜಾತಿ ಬಚ್ಚಲೊಳಗೆ ಹುಳಗಳಂತಿರಬೇಕು. ಇದನ್ನೆ ಇವರು ಭಾರತೀಯತೆ ಅಂತಾರೆ. ಈ ಹಿಂದೆ ಬ್ರಿಟಿಷರು ಆಳ್ವಿಕೆ ನಡೆಸಲು ಭಾರತವನ್ನು ಜಾತಿಗಳಾಗಿ ಒಡೆದರು ಎಂದು ವಾದಿಸುವ ಇವರು ಈಗ ಯಾರು ಆಳ್ವಿಕೆ ನಡೆಸಲಿ ಎಂದು ಉಪಜಾತಿಗಳನ್ನು ಉಲ್ಬಣಿಸುತ್ತಿದ್ದಾರೆ? ದುಡಿಯುವ ವರ್ಗ ಎಂದೂ ಒಂದಾಗಬಾರದು ಎಂಬ ಈ ಆಶಯದೊಳಗೆ ಏನೇನಿದೆ? ಇಂದು ಕಾರ್ಪೊರೆಟ್ ಸೆಕ್ಟರ್ ಕೃಪಾಪೋಷಿತರಾದ ಕೆಲವು ಎನ್.ಜಿ.ಓ.ಗಳು ಭಾರತದಲ್ಲಿ ಇರುವ ಸಮಸ್ಯೆ, ಪ್ರತ್ಯೇಕತೆಗಳನ್ನು ಉಲ್ಬಣಿಸಿ ದುಡಿಯುವ ವರ್ಗ ಒಂದಾಗದಂತೆ ಕಾಯುವ ಕೆಲಸ ಮಾಡುತ್ತಾ ಸಮುದಾಯ ಆಂದೋಲನಕ್ಕೆ (mass movement) ತೊಡರುಗಾಲು ಹಾಕುತ್ತಿರುವಂತೆಯೇ ಈ ಬಾಲುಗುಂಪೂ ಕೂಡ ಭಾರತದ ಸಾಮಾಜಿಕ ಛಿದ್ರತೆಗಳನ್ನು ಮತ್ತೂ ಛಿದ್ರಗೊಳಿಸುವ ಕೃತ್ಯದಲ್ಲಿ ತೊಡಗಿರಬಹುದಾ? ಭಾರತವು ಉಪಜಾತಿಗಳಾಗಿ ಛಿದ್ರಾತಿಛಿದ್ರವಾದರೆ ಅಮೆರಿಕಾ ಅಥವಾ ಐರೋಪ್ಯ ವಸಾಹತುಶಾಹಿಗೆ ಭಾರತವನ್ನೇ ಆಹಾರವಾಗಿಸಿ ಉಣಬಡಿಸಿದಂತಾಗುವುದಿಲ್ಲವೇ? ದುಡಿಯುವ ವರ್ಗ ಒಂದಾಗದಂತೆ ಮಾಡುವ ಈ ಸಂಶೋಧನೆಯು ಯೂರೋ ಲಿಂಕ್ ಸಂಚಿನ ಫಲವೇ? ಗುಮಾನಿ ಹುಟ್ಟುತ್ತಿದೆ. ಇವರ ಚಲನವಲನಗಳ ಮೇಲೆ ಕಣ್ಣಿಡಬೇಕಾಗಿದೆ.
ಹಾಗೆ ಇವರು ಜಾತಿಗಳನ್ನು ಉಳಿಸಿಕೊಂಡು ಜಾತಿವ್ಯವಸ್ಥೆ ಇಲ್ಲ ಎನ್ನುವುದರಲ್ಲಿ ಮತ್ತೊಂದು ಒಳಮರ್ಮವೂ ಇದ್ದಿರಬಹುದೇ? ಈ ಭ್ರಮಾಧೀನ ಬಾಲಸಂಶೋಧಕರಿಗೆ, ಜಾತಿ ಹುಟ್ಟುಹಾಕಿದ ಪಿತೃಗಳು ಮೋಕ್ಷ ಕಾಣದೆ ಭೂಮಿ ಮೇಲೆ ಅಲೆದಾಡುತ್ತಿರುವಂತೆ ಆಗಾಗ ಗೋಚರಿಸುತ್ತಾ, ಅದನ್ನು ಮರೆಮಾಚುವ ಹತಾಶ ಪ್ರಯತ್ನ ಇಲ್ಲಿರಬಹುದೇ? ಜಾತಿ ವ್ಯವಸ್ಥೆಯೇ ಇಲ್ಲ ಎಂದು ವಾದ ಕಟ್ಟಿಬಿಟ್ಟರೆ(Fabricated), ಆಗ ಜಾತಿಗಳ ಹುಟ್ಟಿಗೆ ಕಾರಣರು ಯಾರೂ ಅಲ್ಲ ಅಂತಾಗಿ ಬಿಟ್ಟರೆ, ಆಗ ಯಾವ ತಪ್ಪಿನ ಭಾವನೆಯೂ ಇಲ್ಲದೆ ನೆಮ್ಮದಿಯಿಂದ ಇರಬಹುದಲ್ಲ ಎಂದು ಇವರು ಹೊರಟಿದ್ದಾರೆಯೆ? ಹಾಗಾದರೆ ನೆನಪಿರಲಿ, ಈ ಮರೆಮಾಚಿ ಬರುವ ನೆಮ್ಮದಿಯು- ಆತ್ಮ ಎಂಬುದು ಇದ್ದರೆ ಅದನ್ನೇ ಕೊಂದುಬಿಡುತ್ತದೆ, ಸತ್ಯಕ್ಕೆ ಮುಖಾಮುಖಿಯಾಗುವುದನ್ನು ತಪ್ಪಿಸಿಬಿಡುತ್ತದೆ; ಸಂವೇದನಾಶೀಲ ಸೃಷ್ಟಿಶೀಲ ಮನಸ್ಸಿಗೆ ಎಳ್ಳು ನೀರು ಬಿಟ್ಟಂತೂ ಆಗುತ್ತದೆ. ಇಂಥದೇನಾದರೂ ಇದ್ದಲ್ಲಿ ಈ ಸಂಶೋಧಕರು ಅದನ್ನು ನಿವಾರಿಸಿಕೊಂಡರೆ ಅವರಿಗೇ ಕ್ಷೇಮ. ಹಾಗೂ ಸುತ್ತಲಿನ ಸಮಾಜಕ್ಕೂ ಒಳ್ಳೆಯದು.
ಈ ಜಾತಿಯಾದ ಮೇಲೆ ಈ ಸಂಶೋಧಕರು ಮುಂದೆ ಭಾರತದ ಧರ್ಮಗಳ ಕತ್ತು ಹಿಸುಕಲು ಹೊರಡುತ್ತಾರೆ. ಅದಕ್ಕಾಗಿ ಈ ಸಂಶೋಧಕರು, ಕ್ರಿಶ್ಚಿಯನ್ ಥಿಯಾಲಜಿ ಪರಿಭಾಷೆಯಲ್ಲಿ ಭಾರತವನ್ನು ನೋಡಿದ ದೃಷ್ಟಿಕೋನದಿಂದಾಗಿ ಇಲ್ಲಿ ರಿಲಿಜನ್ ಪರಿಕಲ್ಪನೆ ಬಂತೆಂದೂ ಈ ದೃಷ್ಟಿಕೋನದ ಕಾರಣವಾಗೆ ಬುದ್ಧ ಅಲ್ಲಮ ಬಸವಣ್ಣ ಮುಂತಾದವರನ್ನು ಪ್ರೊಟೆಸ್ಟೆಂಟ್ ಸುಧಾರಕರಂತೆ ಭಾವಿಸಲು ಕಾರಣವಾಯಿತು ಎಂದೂ ವಾದಿಸುತ್ತಾರೆ. ಭಾರತದ ದೇವಸ್ಥಾನಗಳನ್ನು, ಮಸೀದಿಗಳನ್ನು ಅಗೆಯುತ್ತ ಆಳಕ್ಕೆ ಹೋದರೆ ಬೌದ್ಧ,ಜೈನ, ಲಿಂಗಾಯತ ಎಲ್ಲವೂ ಒಂದರೊಳಗೊಂದು ಸಿಕ್ಕುವುವು. ಕ್ರಿಸ್ತ ಹುಟ್ಟುವ ಮೊದಲು ಇಲ್ಲಿ ಮತಾಂತರ ಜರುಗಿದೆ. ಕೇವಲ ಸಂಪ್ರದಾಯ ಆಚರಣೆಗಳೇ ಭಾರತವಾಗಿದ್ದರೆ ಇದೆಲ್ಲ ಹೇಗಾಗುತ್ತಿತ್ತು? ಇವರ ಉದ್ದಿಶ್ಯ ಇಷ್ಟೆ ಅನ್ಸುತ್ತೆ: ಭಾರತದಲ್ಲಿ ಯಾವುದೇ ಧರ್ಮಗಳು ಇರಬಾರದು. ಜಾತಿಗಳೂ ಇರಬಾರದು. ಉಪಜಾತಿಗಳು ಮಾತ್ರ ಇದ್ದು ಇದು ಭಾರತವಾಗಿರಬೇಕು. ಇದು ಭಾರತ ಇವರಿಗೆ.
ಜೊತೆಗೆ, ಈ ಸಂಶೋಧಕರು ಭಾರತವನ್ನು ತಮಗೆ ಬೇಕಾದಂತೆ ಗ್ರಹಿಸುತ್ತಾರೆ ಎಂಬುದಕ್ಕೆ ಉದಾಹರಣೆ- ವಚನಗಳನ್ನು ಕುರಿತು ಇವರು ಆಡುತ್ತಿರುವ ಮಾತು. ವಚನಗಳು ಇಡೀ ಕರ್ನಾಟಕವನ್ನು ಉದ್ದೇಶಿಸಿ ಮಾತಾಡುತ್ತಿದ್ದರೂ, ಈ ವಚನಗಳು ತನ್ನ ಮಾರ್ಗದ ಸಾಧಕರ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತವೆ ಎನ್ನುವ ಇವರು ತಾವು ಮಾತ್ರ ಇಡೀ ಭಾರತವನ್ನೇ ತಮ್ಮದು ಎನ್ನುವಂತೆ ಮಾತಾಡುತ್ತಾರೆ. ಹಾಗೇ ಬಾಲಗಂಗಾಧರರು ಅಧ್ಯಾತ್ಮದ ಬಗ್ಗೆ ಬರೆಯತ್ತಾ `ಪಾಶ್ಚಾತ್ಯರ ಆನಂದದ ಕಲ್ಪನೆಯಲ್ಲಿ ಈ ಪ್ರಪಂಚವನ್ನೇ ಬದಲಾಯಿಸುವ ಕಾರ್ಯಕ್ರಮ ಮೂಲಭೂತವಾಗಿರುತ್ತದೆ. ಆದರೆ ಭಾರತೀಯರ ಅಧ್ಯಾತ್ಮವು ಕಂಡುಕೊಂಡ ಉತ್ತರವೆಂದರೆ ಪ್ರಪಂಚವು ಈಗಿರುವಂತೆಯೇ ಮನುಷ್ಯನು ಯಾವುದೇ ಅವಸ್ಥೆಯಲ್ಲೂ ಆ ಆನಂದವನ್ನು ಹೊಂದುವುದು ಸಾಧ್ಯ. ಈ ಸ್ಥಿತಿಯನ್ನು ತಲುಪಲಿಕ್ಕೆ ಪ್ರಪಂಚವನ್ನು ಬದಲಿಸುವುದರ ಬದಲಾಗಿ ಒಬ್ಬನು ತನ್ನ ಪ್ರಾಪಂಚಿಕ ಅನುಭವದಿಂದಲೇ ಮುಕ್ತನಾಗಬೇಕು' ಎನ್ನುತ್ತಾರೆ. ತನ್ನ ಸುತ್ತಲಿನ ಸಮಾಜದ ಬಿಡುಗಡೆಯೊಳಗೇ ತನ್ನ ಬಿಡುಗಡೆಯೂ ಇದೆ ಎಂಬ ಆಶಯದ ಮಹಾಯಾನ, ವಚನಧರ್ಮ ಮುಂತಾದವು ಇವರ ಕಣ್ಣಿಗೆ ಕಾಣುತ್ತಿಲ್ಲ. ಕಂಡರೂ ಭೂಗತಮಾಡುತ್ತಿದ್ದಾರೆ. ವೈದಿಕದ `ಅಹಂ'ಕಾರವು ವೈದಿಕ `ಶಾಹಿ'ಯಾಗಿ ಭಾರತದಲ್ಲಿ ತಾನು ಮಾತ್ರವೇ ವ್ಯವಸ್ಥೆ, ತಾನು ಮಾತ್ರವೇ ಆಳ್ವಿಕೆ ಎಂಬ `ಶಾಹೀ' ಕುಬುದ್ಧಿ ಕುತಂತ್ರವನ್ನು ಬಿಟ್ಟು `ವೈದಿಕ'ವಾಗಿ ತನ್ನಷ್ಟಕ್ಕೆ ತಾನೇ ಇದ್ದರೆ ಅದಕ್ಕೂ ಕ್ಷೇಮ. `ವೈದಿಕ'ದ ಹಿತವೂ ಇಲ್ಲಿದೆ. ಯಾಕೆಂದರೆ, ಈಗ ಇವರು ಆರಂಭಿಸಿರುವ ಕ್ರಿಶ್ಚಿಯನ್ ವಸಾಹತುಶಾಹಿ ಮುಗಿದು, ಮುಂದೆ ಈ ಸಂಶೋಧಕರು ಇಸ್ಲಾಂ ವಸಾಹತುಶಾಹಿಗೆ ಬಂದು ಅಬ್ಬರಿಸಿ, ಈ ಪರಿಪಾಠ ಮುಂದುವರೆದರೆ ಅದು ಎಲ್ಲಿಗೆ ತಲುಪುತ್ತದೆ? ಈ ನವಗೋಸುಂಬೆ ವೈದಿಕಶಾಹಿಯ ಕುತ್ತಿಗೆಗೆ ಕವೆಗೋಲು ಬೀಳುವಲ್ಲಿಗೆ ಬಂದು ನಿಲ್ಲುತ್ತದೆ.
ವೈದಿಕಶಾಹಿಯ ಇತಿಹಾಸ ಪುರಾಣವು ಈ ಸಂಶೋಧಕರ ಇಂಥದೇ ಪಟ್ಟುಗಳನ್ನು ಹಾಕಿಕೊಂಡು ಲಾಗಾಯ್ತಿನಿಂದ ಬರುತ್ತ- ಇಲ್ಲಿನ ಧರ್ಮಗಳನ್ನು ಜಾತಿಯನ್ನಾಗಿ ಉಳಿಸಿಕೊಂಡು ನೀಚಗೊಳಿಸಿದೆ. ಉದಾ: ಜೈನ, ಲಿಂಗಾಯತ. ಆದರೆ ಜಾತಿಯಾಗಿ ಬಗ್ಗದ ಧರ್ಮಗಳನ್ನು ಇದೇ ವೈದಿಕಶಾಹಿಯು ಭಾರತದ ಆಚೆಗೆ ಪಲಾಯನ ಮಾಡುವಂತೆ ಮಾಡಿದೆ. ಉದಾ-ಬೌದ್ಧ. ಈಗ ಬೌದ್ಧವು ತನ್ನ ಮನೆಗೆ ಅಂದರೆ ಭಾರತಕ್ಕೆ ಮರಳುತ್ತಿದೆ. ಹಾಲಿ ಜಾತಿಯಾಗಿಬಿಟ್ಟಿರುವ ವಚನಧರ್ಮವೂ ತನ್ನೊಳಗಿನ ವಚನಗಳೊಳಗಿನ ಅಂತಃಸತ್ವದಿಂದಲೇ ಮುಂದೊಂದು ದಿನ ಜಾತಿ ಬಚ್ಚಲಿನಿಂದ ಹೊರಬಂದು ಧರ್ಮವೂ ಆಗಿಬಿಡುವ ಸಾಧ್ಯತೆಯನ್ನು ಒಳಗೊಂಡಿದೆ. ಇದಾದರಂತೂ ಕರ್ನಾಟಕದ ನೆಲದ ಫಸಲಾದ ವಚನಧರ್ಮವು ಇಡೀ ಜಗತ್ತಿನ ದುಡಿಯುವ ವರ್ಗದ ಧರ್ಮವಾಗುವ ಸಾಧ್ಯತೆಯೂ ಅದರೊಳಗೇ ಇದೆ. ಇದೆಲ್ಲದರ ವಾಸನೆ ಹಿಡಿದ ವೈದಿಕಶಾಹಿಗೆ ನಿದ್ದೆ ಬರುತ್ತಿಲ್ಲ. ಅದಕ್ಕಾಗಿ ಈ ಉಪಜಾತಿ ಸಿದ್ಧಾಂತಿಗಳು ಈ ಸಂಶೋಧನೆಯ ಮಡೆಮಡೆಸ್ನಾನದ ಉರುಳುಸೇವೆ ಮಾಡುತ್ತಿದ್ದಾರೆ. ಬೌದ್ಧ, ವಚನ ಇತ್ಯಾದಿ ಸತ್ವಶಾಲಿ ಧರ್ಮಗಳನ್ನು ಹಿಡಿದು ಹಿಡಾಹೊಡೆದು ಅವುಗಳನ್ನು ಜಾತಿ ಉಪಜಾತಿಗಳಾಗಿಸಲು ಬ್ಯುಸಿಯಾಗಿದ್ದಾರೆ. ಇವರ ಪ್ರಕಾರ, ಧರ್ಮಗಳು ಭಾರತದಲ್ಲಿ ಬದುಕುಳಿಯಲೇಬೇಕಾದರೆ ಅವು ಜಾತಿ ಉಪಜಾತಿಯಾಗಿ, ಅಂದರೆ ಸಂಪ್ರದಾಯ ಆಚರಣೆಗಳಾಗಿ ಜೀವಚ್ಛವಗಳಂತೆ ನೀಚವಾಗಿ ಉಳಿಯಬೇಕು- ಇದಕ್ಕಾಗಿ ನಡೆಯುತ್ತಿರುವ ಬೌದ್ಧಿಕ ಕಸರತ್ತಲ್ಲದೆ ಇದು ಮತ್ತೇನು? ಯಾವುದೋ ಕಾಲದಲ್ಲಿ ಕಟ್ಟಲ್ಪಟ್ಟ ಸಂಪ್ರದಾಯ,ಆಚರಣೆಗಳೂ ಅವು ಕಟ್ಟಲ್ಪಟ್ಟ ಕಾಲದಲ್ಲಿ ಆಹಾರವಾಗಿರಲೂಬಹುದು. ಆದರೆ ಅದೇ ಆಹಾರ ಕಾಲಾನಂತರ ಮಲವಾಗಿ ಪರಿಣಮಿಸಿಬಿಟ್ಟಿರುತ್ತದೆ. ಈ ಮಲದೇವತಾ ಅರ್ಚಕರಿಗೆ ಏನೆನ್ನಬೇಕು?
ಇವರಿಗೆ ಹೇಗೆ ಹೇಳಲಿ? ಏನು ಹೇಳಲಿ?
ಭಾರತದಲ್ಲಿ ಆಚರಣೆ, ಸಂಪ್ರದಾಯಗಳು ಆಳ್ವಿಕೆ ನಡೆಸುವುದಾದರೆ ಏನೇನು ದೃಶ್ಯಾವಳಿಗಳನ್ನು ನಾವು ಕಾಣಬೇಕಾಗಿಬರಬಹುದು: ಕುದುರೆ ಮೇಲೆ ಓರ್ವ ಮಹಿಳೆ ಅಲಂಕೃತಳಾಗಿ ಒಂದು ಕೈಲಿ ಕನ್ನಡಿ ಇನ್ನೊಂದು ಕೈಲಿ ನಿಂಬೆಹಣ್ಣು ಹಿಡಿದು ಹಸನ್ಮುಖಳೋ ಉನ್ಮತ್ತಳೋ ಆಗಿ ಪಯಣಿಸುತ್ತಿರುತ್ತಾಳೆ. ಸುತ್ತ ಜನ ಜೈಕಾರ ಹಾಕುತ್ತಾ ಸಾಗುತ್ತಾ ಗಂಡನ ಹೆಣದೊಡನೆ ಚಿತೆಗೆ ಆಹುತಿಯಾಗುತ್ತಾಳೆ. ಅವಳೇನಾದರು ಬೆದರಿ ಓಡಿದರೆ ಸುತ್ತ ಆವರಿಸಿಕೊಂಡವರು ಹಿಡಿದು ತಂದು ಅವಳನ್ನು ಆ ಚಿತೆಗೆ ಎಸೆಯುತ್ತಾರೆ. ಆಗ ಸತಿ ಸಹಗಮನ ಪೂರ್ಣಗೊಂಡು ಮಾಸ್ತಿಕಲ್ಲು ಅಲ್ಲಿ ನಿಲ್ಲುತ್ತದೆ. ಇನ್ನೊಂದು ಕಡೆ ಪುಟ್ಟ ಬಾಲೆಯೊಬ್ಬಳಿಂದ ವಯಸ್ಕನಿಗೆ ಮಾಲೆ ಹಾಕಿಸುತ್ತಾರೆ, ಅವ ಸತ್ತರೆ ಈ ಕಂದಮ್ಮಗೆ ತಲೆ ಬೋಳಿಸಿ ವಿಧವೆ ಪಟ್ಟ ಕಟ್ಟಿ ಯಾಕಾದರೂ ಬದುಕಿದೆನೊ ಎನ್ನಿಸಿಬಿಡುತ್ತಾರೆ. ಅಸ್ಪೃಶ್ಯ, ತಳಸಮುದಾಯ, ಮಹಿಳೆ, ಶೂದ್ರರನ್ನು ಶಿಕ್ಷಣ, ಸಾಮಾಜಿಕ ನ್ಯಾಯ ಎಲ್ಲಾ ಕ್ಷೇತ್ರದಲ್ಲೂ ವಂಚಿತರನ್ನಾಗಿಸಿ ಸಮಾನತೆ, ಸಾಮಾಜಿಕ ನ್ಯಾಯದಿಂದ ಮತ್ತೂ ದೂರದೂರವಾಗಿಸುತ್ತಾರೆ- ಇತ್ಯಾದಿ ಇತ್ಯಾದಿಯಾಗಿ ಈ ಸಂಪ್ರದಾಯ, ಆಚರಣೆಗಳು ಹೆಚ್ಚಾದಂತೆ ಇದು ಕೊನೆಗೆ ನರಬಲಿ ಕೇಳುತ್ತದೆ. ಈ ಸಂಶೋಧಕರ ಪ್ರಕಾರ ಇದೆಲ್ಲಾ ಆಚರಣೆ ಪ್ರಧಾನ ಜ್ಞಾನದ (Performative Knowled-ge) ಭಾರತೀಯತೆ ಆಗುತ್ತದೆ!
ಇವರಿಗೆ ಹೇಗೆ ಹೇಳಲಿ? ಏನು ಹೇಳಲಿ?
`ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯ' ಎಂಬ ಬಸವಣ್ಣನ ವಚನ ಉದ್ಧರಿಸಿ `ಇಂಥ ವಚನಗಳನ್ನು ಸಾಮಾಜಿಕ ಹೋರಾಟಗಾರರು ರಚಿಸಲು ಸಾಧ್ಯವಿಲ್ಲ' ಎನ್ನುವ ಈ ಸಂಶೋಧಕರಿಗೆ- ಅಯ್ಯೊ, ಲೋಕದ ಡೊಂಕಿನ ಭಾಗವಾಗಿಯೇ ನಿನ್ನೊಳಗೂ ಡೊಂಕಿರುತ್ತದೆ, ಈ ಡೊಂಕನ್ನು ನೀನೂ ತಿದ್ದಿಕೊಂಡರೆ ಅಷ್ಟರ ಮಟ್ಟಿಗೆ ಲೋಕದ ಡೊಂಕೂ ಸರಿಯಾಗುತ್ತದೆ ಎಂಬ ಅಂತರಂಗ ಬಹಿರಂಗ ಶುದ್ಧಿಯ ಧ್ವನಿ ತಿಳಿಯದವರಿಗೆ ಹೇಗೆ ಹೇಳಲಿ?
ಗಾಂಧಿ ತಾನೊಬ್ಬ ಹಿಂದೂ, ಹಿಂದೂ ಎಂದು ಬಾಯಿ ತೆರೆದಾಗಲೆಲ್ಲಾ ಜಪಿಸಿದರೂ `ಸತ್ಯವೇ ನನ್ನ ಧರ್ಮ, ನಿತ್ಯ ಪ್ರಾರ್ಥನೆಯ ಮೂಲಕ ನಾನು ಸತ್ಯದ ಸಾಮೀಪ್ಯವನ್ನು ಬಯಸುತ್ತೇನೆ. ಎಲ್ಲಾ ಜೀವಿಗಳ ಸೇವೆಗಾಗಿ ನಿರಂತರ ತನ್ನನ್ನು ವ್ಯಯಿಸುವುದು ಧರ್ಮ' ಎಂದು ಹೇಳುವ ಗಾಂಧಿಯೊಳಗೆ ಏಸುಕ್ರಿಸ್ತ ಕುಳಿತಿರುವುದನ್ನು ಕಾಣದ, ಈ ಒಳಗಣ್ಣು ಇಲ್ಲದವರಿಗೆ ಏನು ತಾನೆ ಹೇಳುವುದು?
ಊರಾಚೆ ಎಸೆಯಲ್ಪಟ್ಟ ಅಸ್ಪೃಶ್ಯ ಕುಟುಂಬವೊಂದಕ್ಕೆ ಊರ ನಡುವೆ ವಸತಿ ಕಲ್ಪಿಸಿಕೊಟ್ಟಲ್ಲಿ ಆಗ, ಸುಮ್ಮನಿದ್ದಂತೆ ಇದ್ದ ಜಾತಿಗಳು ತಾವೇ ಒಂದು ವ್ಯವಸ್ಥೆಯಾಗಿ ರೂಪು ತಳೆದು ಭುಗಿಲೇಳುವುದನ್ನು ಕಾಣಲಾಗದ ಪರದೇಶಿಗಳಿಗೆ ಹೇಗೆ ಹೇಳುವುದು? ಹೇಗೆ ತಿಳಿಸುವುದು?
ಈ ಎಸ್.ಎನ್.ಬಾಲಗಂಗಾಧರ ಮತ್ತವರ ಸಂಶೋಧನಾ ತಂಡದ ರೋಗಿಷ್ಟ ಸಂಶೋಧನಾ ವಿಚಾರಗಳು `ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?' ಎಂಬ ಡಂಕಿನ್ ಝಳಕಿ ಸಂಪಾದಿಸಿ ನಿರೂಪಿಸಿದ ಪುಸ್ತಕದಲ್ಲಿ ಹೇಗಿವೆ ಅಂದರೆ, (ರಾಜೇಂದ್ರ ಚೆನ್ನಿಯವರು ಪ್ರಸ್ತಾಪಿಸಿರುವ) ಈ ಪುಸ್ತಕದ ಪುಟ 123ರಲ್ಲಿ ಒಟ್ಟೂ ಜನಸಂಖ್ಯೆಯಲ್ಲಿ ಸುಮಾರು 24 ಪ್ರತಿಶತ ದಲಿತರೇ (1999-2000ದಲ್ಲಿ) ಇರುವಾಗ ಕೇವಲ 38 (ದಲಿತರ) ಕೊಲೆಗಳಿಂದ ಭಾರತದಲ್ಲಿ ಜಾತಿಯ ತಾರತಮ್ಯ ಇದೆಯೆಂದು ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ?' ಎಂದು ಈ ಸಂಶೋಧಕರು ಪ್ರಶ್ನಿಸುತ್ತಾರೆ. ಭಾರತದಲ್ಲಿ ಜಾತಿಯ ತಾರತಮ್ಯ ಇದೆಯೆಂದು ತೋರಿಸಲು ಹೆಚ್ಚು ದಲಿತರ ಕೊಲೆಗಳ ದಾಖಲಾತಿ ಕೇಳುವ ಈ ಸಂಶೋಧಕರು ಮನುಷ್ಯರಾ ಎಂದು ಮೊದಲು ಸಂಶೋಧಿಸಬೇಕಾಗಿದೆ. ಮನುಧರ್ಮಶಾಸ್ತ್ರದ ಹೆಣದೊಳಗಿಂದ ಉತ್ಪತ್ತಿಯಾದ ಹುಳುಗಳಂತಾಡುತ್ತಿರುವ ಈ ಬಾಲೂಗ್ಯಾಂಗ್ ಅನ್ನು ಯಾರು ಕಾಪಾಡಬೇಕೋ ತಿಳಿಯದಾಗಿದೆ.
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ರಾಜೇಂದ್ರ ಚೆನ್ನಿ, ವಚನ ಸಂವಾದ
27 April 2013
ಮಾರಲ್ ಪೋಲೀಸಗಿರಿಯ ಹೊಸ ಮಾದರಿ
* ಪ್ರೊ. ಜೆ.ಎಸ್. ಸದಾನಂದ
Posted in ಪ್ರೊ.ಜೆ.ಎಸ್.ಸದಾನಂದ, ರಾಜೇಂದ್ರ ಚೆನ್ನಿ, ವಚನ ಸಂವಾದ
ಸಂಶೋಧನೆಯ ದಾರಿಯನ್ನು ಯಾರು ನಿರ್ಧರಿಸಬೇಕು?