Showing posts with label ಡಾ. ಮಾಧವ ಪೆರಾಜೆ. Show all posts
Showing posts with label ಡಾ. ಮಾಧವ ಪೆರಾಜೆ. Show all posts

31 July 2013

* ಎಂ. ಉಷಾ

(ಮಾಧವ ಪೆರಾಜೆ ಅವರ ಲೇಖನಕ್ಕೆ ಪ್ರತಿಕ್ರಿಯೆ)


ಶ್ರೀಯುತ ಮಾಧವ ಪೆರಾಜೆ ’ಪ್ರಾಚೀನ ಕನ್ನಡ ಸಾಹಿತ್ಯ ಅನುವಾದವೇ? ಅಥವ ರೂಪಾಂತರವೇ?’ ಎನ್ನುವ ತಮ್ಮ ಲೇಖನದ ನೆರಳಚ್ಚು ಪ್ರತಿ ನೀಡಿ ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದರು. ಕುತೂಹಲದಿಂದ ಓದಿ ಈ ಪ್ರತಿಕ್ರಿಯೆ ನೀಡುತ್ತಿದ್ದೇನೆ.

ಪೆರಾಜೆಯವರ ಲೇಖನಕ್ಕೆ ಈ ಪ್ರತಿಕ್ರಿಯೆ ದಾಖಲಿಸಲು ಮುಖ್ಯ ಕಾರಣ, ಭಾಷಾಂತರಕ್ಕೆ ಸಂಬಂಧಪಟ್ಟಂತೆ ಅವರ ಲೇಖನವು ಸೀಮಿತ ಆಕರವನ್ನು ಆಧರಿಸಿ ಅವಸರದ ತೀರ್ಮಾನಕ್ಕೆ ಬಂದಿದೆ ಎಂಬುದನ್ನು ವಿವರಿಸುವುದಾಗಿದೆ.

೧೯೫೦-೬೦ರ ದಶಕದಿಂದೀಚೆಗೆ ಭಾಷಾಂತರ ಅಧ್ಯಯನ ಎನ್ನುವ ಅಧ್ಯಯನ ಶಿಸ್ತೊಂದು(ಕ್ಷೇತ್ರವೊಂದು) ಮುಂಚೂಣಿಗೆ ಬಂದಿದ್ದು, ಈ ಕೇತ್ರದ ಬಗ್ಗೆ ಮಾನವಶಾಸ್ತ್ರದ ವಿದ್ವಾಂಸರಿಂದ ಹಿಡಿದು ಸ್ತ್ರೀವಾದಿಗಳವರೆಗೆ ಹಲವು ಕ್ಷೇತ್ರದ ಪರಿಣಿತರು ಆಸಕ್ತಿ ತೋರುತ್ತಿದ್ದಾರೆ.  ತಮ್ಮ ತಮ್ಮ ಕ್ಷೇತ್ರಗಳಿಗೆ ಭಾಷಾಂತರ ಪರಿಕಲ್ಪನೆಯನ್ನು ಅಳವಡಿಸುವ ಇಲ್ಲವೇ ತಮ್ಮ ಕ್ಷೇತ್ರಗಳ ನೆಲೆಯಿಂದ ಭಾಷಾಂತರವನ್ನು ವಿಮರ್ಶೆಗೆ ಒಡ್ಡುವ ಕೆಲಸದಲ್ಲಿ ತೊಡಗಿದ್ದಾರೆ.  ಈ ಅರ್ಥದಲ್ಲಿ ಭಾಷಾಂತರ ಒಂದು ವೇದಿಕೆಯಾಗಿ, ಪರಿಕರವಾಗಿ ಬೇರೆ ಬೇರೆ ಜ್ಞಾನಶಿಸ್ತುಗಳಿಗೆ ಒದಗಿ ಬರುತ್ತಿದೆ. ಬಾಲಗಂಗಾಧರ ಅವರು ಅಂತಹ ಒಂದು ಪರಿಕರವಾಗಿ ಭಾಷಾಂತರವನ್ನು ಬಳಸಿ ತಮ್ಮ ವಿಚಾರವನ್ನು ಮಂಡಿಸುತ್ತಿದ್ದಾರೆ.  ಅವರನ್ನು ಆಶ್ರಯಿಸಿ ಕನ್ನಡದಲ್ಲಿ ರಾಜಾರಾಂ ಹೆಗಡೆ, ಮಾಧವ ಪೆರಾಜೆಯವರು ಮುನ್ನಡೆದಿದ್ದಾರೆ.

23 July 2013

ಚರ್ಚೆಗೆ ಆಹ್ವಾನ 


ಕನ್ನಡದಲ್ಲಿ 'ಅನುವಾದ' (translation) ಸಾಹಿತ್ಯ ಬೆಳೆಯುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ 'ಅನುವಾದ ಅಧ್ಯಯನ' (Translation studies) ವಿಭಾಗಗಳೂ, ಅನುವಾದ ಅಕಾಡೆಮಿಗಳೂ ರೂಪುಗೊಂಡಿವೆ. ಕನ್ನಡದ ಪ್ರಮುಖ ಕೃತಿಗಳನ್ನು ಇತರೆ ಭಾಷೆಗಳಿಗೆ, ಇತರೆ ಭಾಷೆಯ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ (ಅಥವಾ ಭಾಷಾಂತರಿಸುವ) ಕೆಲಸ ಭರದಿಂದ ನಡೆದಿದೆ. ಇತ್ತ, 'ಪ್ರಾಚೀನ ಕನ್ನಡ ಸಾಹಿತ್ಯ ಬಹುತೇಕ ಅನುವಾದ ಇಲ್ಲವೇ ಭಾಷಾಂತರ' ಎಂದು ಕಳೆದ 50 ವರ್ಷಗಳಿಂದ ಕನ್ನಡ ಚಿಂತಕರು ಬಲವಾಗಿ ವಾದಿಸುತ್ತಾ ಬಂದಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ' ಪ್ರಾಚೀನ ಕನ್ನಡ ಸಾಹಿತ್ಯ ಅನುವಾದ ಅಥವಾ ರೂಪಾಂತರ ಅಲ್ಲವೇ ಅಲ್ಲ' ಎನ್ನುವ ವಾದವನ್ನು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಮಾಧವ ಪೆರಾಜೆ ಅವರು ಇದೇ ಮೊದಲ ಬಾರಿಗೆ ಮಂಡಿಸಿದ್ದಾರೆ. ಈ ವಿಷಯವನ್ನು ನಿಮ್ಮ ಮುಂದೆ ಚರ್ಚೆಗಿಡುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳನ್ನು scholarcolony@gmail.comಗೆ ಕಳಿಸಬಹುದು. ಅಥವಾ ನಮ್ಮ ಫೇಸ್‌ಬುಕ್‌ ಪುಟದಲ್ಲೂ (www.facebook.com/scholaradda) ಚರ್ಚಿಸಬಹುದು.

-ಸಂಪಾದಕ

***

ಪ್ರಾಚೀನ ಕನ್ನಡ ಸಾಹಿತ್ಯ ಅನುವಾದವೇ? 

* ಡಾ. ಮಾಧವ ಪೆರಾಜೆ.


ಈ ಲೇಖನವು ಪ್ರಾಚೀನ ಕನ್ನಡ ಸಾತ್ಯವು ಅನುವಾದ ಇಲ್ಲವೇ ರೂಪಾಂತರ ಅಥವಾ ತುಂಡುಭಾಷಾಂತರ ಎನ್ನುವ ಈಗ ಪ್ರಚಲಿತರುವ ದ್ಟಕೋನವನ್ನು ಆಮೂಲಾಗ್ರವಾಗಿ ಪರಾಮರ್ಶಿಸುವ ಉದ್ದೇಶವನ್ನೊಳಗೊಂಡಿದೆ. ಮೊದಲಿಗೆ ಅಂತಹ ಚರ್ಚೆಯೊಂದರ ಮುಖ್ಯ ಪ್ರತಿಪಾದನೆಗಳನ್ನು ಇಲ್ಲಿ ಸಂಗ್ರಸಲಾಗಿದೆ.
      ಪ್ರಾಚೀನ ಕನ್ನಡ ಸಾತ್ಯವು ಅನುವಾದದಿಂದ ಆರಂಭಗೊಳ್ಳುತ್ತದೆ ಎನ್ನುವುದನ್ನು ಮೊದಲಿಗೆ ಪ್ರತಿಪಾದಿಸಿದ ದೇಸಿ ದ್ವಾಂಸರೆಂದರೆ, ರಂ.ಶ್ರೀ.ಮುಗಳಿ ಅವರೇ ಆಗಿದ್ದಾರೆ. ಕನ್ನಡ ಸಾತ್ಯದಲ್ಲಿ ಸರಸ್ವತಿಯ ದರ್ಶನ(1956) ಪುಸ್ತಕದಲ್ಲಿ ಅವರು ಹೀಗೆ ಹೇಳಿದ್ದಾರೆ-
 ಕನ್ನಡ ಸಾತ್ಯದಲ್ಲಿ ಮೊದಲನೆಯ ಉಪಲಬ್ಧಗ್ರಂಥವಾದ ’ಕರಾಜಮಾರ್ಗ’ದಿಂದಲೇ ಪ್ರಾರಂಭವನ್ನು ಮಾಡಬೇಕಾಗಿದೆ. ಅದಕ್ಕೆ ಮೊದಲು ಇದ್ದಿರಬಹುದಾದ ಪುಲವಾದ ಗದ್ಯಪದ್ಯವಾಙ್ಮಯವು ಸರಸ್ವತಿಯ ಷಯದಲ್ಲಿಯೂ ಸರಸ್ವತೀನದಿಯಂತೆ ಗುಪ್ತಗಾಮಿನಿಯಾಗಿದೆ. ಪ್ರಾಚೀನ ಕನ್ನಡ ಶಿಲಾಶಾಸನಗಳೇನೋ 5ನೆಯ ಶತಕದಿಂದ 9ನೆಯ ಶತಕದವರೆಗೆ ದೊರೆತಿವೆ. ಆದರೆ ಪ್ರಸಕ್ತ ಷಯಕ್ಕೆ ಉಪಯುಕ್ತ ಸಾಮಗ್ರಿ ಅವುಗಳಲ್ಲಿ ಬಹುಶಃ ಇಲ್ಲ. ’ಕರಾಜಮಾರ್ಗ’ವು ದಂಡಿಯ ’ಕಾವ್ಯಾದರ್ಶ’ದ ಅನುವಾದರೂಪ ಗ್ರಂಥ. ಮೂಲವನ್ನು ಅದು ಅನುಸರಿಸಿರುವಂತೆ  ಕಂಗೊಳಿಸುತ್ತದೆ...