ಕನ್ನಡ ಚಿಂತನೆ ಕಟ್ಟುವತ್ತ...
ಭಾರತೀಯರಾದ ನಾವು ಸಂಕ್ರಮಣ ಸ್ಥಿತಿ ಎದುರಿಸುತ್ತಿದ್ದೇವೆ. ಹಲವು ಗೊಂದಲಗಳು ನಮ್ನನ್ನು ಬಾಧಿಸುತ್ತಿವೆ. ವಿವಿಧ ವಿಚಾರಗಳ ಮೇಲೆ ಭಾರತದ ಬೌದ್ಧಿಕ ಸಂದರ್ಭದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಅಂತೆಯೇ ಕನ್ನಡದಲ್ಲೂ ಕೂಡ. ಆದರೂ ನಮ್ಮ ಅಸಂಖ್ಯ ಗೊಂದಲಗಳು ಬಗೆ ಹರಿದಿಲ್ಲ.
ಇಂತಹ ಸನ್ನಿವೇಶದಲ್ಲಿ, ಭಾರತದ ಒಟ್ಟು ಬೌದ್ಧಿಕ ಚರ್ಚೆಯನ್ನು ಗುರಿಯಾಗಿಸಿಕೊಂಡು ವಿಶೇಷವಾಗಿ 'ಕನ್ನಡ ಚಿಂತನೆ'ಯ ಮೇಲೆ ಗಮನ ಕೇಂದ್ರೀಕರಿಸಿ ಈ ‘ಸ್ಕಾಲರ್’ ಸೃಷ್ಟಿಸಲಾಗಿದೆ. ಇದು ಚಿಂತಕರ ಚಾವಡಿ. 'ಸಂವಾದ'ಕ್ಕೆ ಅರ್ಹವಾದ ಯಾವುದೇ ವಿಚಾರದ ಕುರಿತು ಗಂಭೀರ ಚಿಂತನ-ಮಂಥನ ನಡೆಸುವ ಇರಾದೆ ನಮ್ಮದು. ಅಲ್ಲದೆ, ಈಗಾಗಲೇ ಸಾಕಷ್ಟು ಚರ್ಚೆಗೊಳಗಾಗಿ ಒಂದು 'ಸತ್ಯ'ಕ್ಕೆ ಅಂಟಿಕೊಂಡಿರುವ ವಿಚಾರಗಳನ್ನೂ ಮತ್ತೆ ಚರ್ಚೆಗೆ ಒಳಪಡಿಸುವುದು 'ಸ್ಕಾಲರ್ ಇಂಡಿಯ' ಉದ್ದೇಶ. ಯಾಕೆಂದರೆ, ಯಾವುದೇ 'ಜ್ಞಾನ' 'ಸ್ಥಾಪಿತ ಸತ್ಯ'ವಲ್ಲ. ನಿರಂತರ ಚರ್ಚೆಯ ಮೂಲಕ ಜ್ಞಾನದ ಮುಂದುವರಿಕೆಯಾಗಬೇಕು ಎನ್ನುವುದು 'ಸ್ಕಾಲರ್ ಇಂಡಿಯ' ನಿಲುವು.
ಜತೆಗೆ, ಭಾರತ ಮತ್ತು ಜಾಗತಿಕ ಬೌದ್ಧಿಕ ಜಗತ್ತಿನಲ್ಲಿ ನಡೆಯುವ ಪ್ರಮುಖ ವಾಗ್ವಾದಗಳನ್ನು ಸಂಗ್ರಹಿಸಿ ಕೊಡುವ, ಆ ಮೂಲಕ ಕನ್ನಡದಲ್ಲಿ ಆ ಕುರಿತ ಸಂವಾದ ಬೆಳೆಸುವ ಹಂಬಲವೂ ನಮಗಿದೆ. ಇದೆಲ್ಲದರ ಮುಖ್ಯ ಉದ್ದೇಶ ಕನ್ನಡದ ಚಿಂತನೆಯನ್ನು ಕಟ್ಟುವುದೇ ಆಗಿದೆ. ಓದುಗರಾದ ನೀವು ಓದಿ ಪ್ರತಿಕ್ರಿಯಿಸಿದರೆ 'ಸ್ಕಾಲರ್ ಇಂಡಿಯ'ದ ಉದ್ದೇಶ ಸಾರ್ಥಕವಾಗುತ್ತದೆ.
ಅಭಿಪ್ರಾಯ, ಲೇಖನ ಕಳಿಸಲು ಸಂಪರ್ಕಿಸಿ: scholarcolony@gmail.com
ಡಂಕಿನ್ ವಚನಗಳ ಅರ್ಥವಾಗದ ಅಜ್ಞಾನ ಅವರಲ್ಲಿದೆ. ನಮ್ಮ ದೇಶದ ಕೊಳಕು ಜಾತಿಯಪ್ರತಿನಿಧಿ ಡಂಕಿನ್ ಹಾಗೂ ರಾಜರಾಮ
ReplyDelete